Bengaluru RPF Gold Recovery(ಎಐ ಚಿತ್ರ) 
ರಾಜ್ಯ

7.5 ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್​ ರೈಲಿನಲ್ಲೇ ಬಿಟ್ಟಿದ್ದ ವೃದ್ಧ ದಂಪತಿ; ಒಂದೆರಡೇ ಗಂಟೆಯಲ್ಲಿ ಮರಳಿ ಸಿಕ್ಕಿದ್ದು ಹೀಗೆ..Bengaluru RPF Gold Recovery

ಪ್ರಮುಖ ಮುಖ್ಯಾಂಶಗಳು

  • ಪುಣೆ-ಬೆಂಗಳೂರು ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಬೆಲೆ ಬಾಳುವ ಚಿನ್ನ ಇಟ್ಟಿದ್ದ ಬ್ಯಾಗ್​ ಮರೆತ ದಂಪತಿ
  • ಮಾಹಿತಿ ಸಿಕ್ಕ 25 ನಿಮಿಷಗಳಲ್ಲಿ ಬ್ಯಾಗ್ ಪತ್ತೆ ಹಚ್ಚಿದ ರೈಲಿನ ಹೆಡ್ ಕಾನ್​ಸ್ಟೇಬಲ್​ ಸುಕುಮಾರ್
  • 'ರೈಲ್ ಮದದ್' ಎನ್ನುವ ಅಪ್ಲಿಕೇಶನ್​ನಿಂದಾಗಿ ಆನ್​ಲೈನ್​ನಲ್ಲೇ ದೂರು ದಾಖಲಿಸಿದ್ದ ದಂಪತಿ ಮಗ
Bengaluru RPF Gold Recovery:ಕೊಟ್ಟ ಸಾಲ ವಾಪಸ್​ ಸಿಗುವ ಗ್ಯಾರಂಟಿ ಇಲ್ಲ, ಇನ್ನು ಕಳೆದುಕೊಂಡ ವಸ್ತುಗಳು ಮರಳಿ ಸಿಗುತ್ತೆ ಎನ್ನುವ ಭರವಸೆ ಇಟ್ಟುಕೊಳ್ಳಬೇಕೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡೋದು ಸಹಜ. ಏನೇ ಆಗಲಿ ನಂಬಿಕೆ ಮುಖ್ಯ ಅನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಹೌದು, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ದಂಪತಿಯೊಬ್ಬರು 7.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​​ ಮರೆತು ಬಂದಿದ್ದರು. ಇವರಿಗೆ ಬೆಂಗಳೂರು The Railway Protection Force (RPF) ಆಪತ್ಬಾಂಧವರಂತೆ ನೆರವಾಗಿ ಕಳೆದು ಹೋಗಿದ್ದ ಬ್ಯಾಗ್, ಚಿನ್ನ​ ವಾಪಸ್​ ಸಿಗುವಂತೆ ಮಾಡಿದ್ದಾರೆ.

ಚಿನ್ನ ಕಳೆದುಕೊಂಡಿದ್ದು ಹೇಗೆ?

ಅನಿತಾ ಮತ್ತು ಸುಂದರ್​(ಹೆಸರು ಬದಲಿಸಲಾಗಿದೆ) ವೃದ್ಧ ದಂಪತಿ ಬೆಂಗಳೂರಿಗೆ ಉದ್ಯಾನ್​ ಎಕ್ಸ್​ಪ್ರೆಸ್​ ಮೂಲಕ ಪುಣೆಯಿಂದ ಪ್ರಯಾಣ ಬೆಳೆಸಿದ್ದರು. ಮಂಗಳವಾರ ಮುಂಜಾನೆ ಯಲಹಂಕ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಿದ್ದಾರೆ. ಕೊಠಡಿಯಲ್ಲಿ ಬ್ಯಾಗ್​ಗಳನ್ನು ಪರಿಶೀಲನೆ ಮಾಡುತ್ತಿರುವಾಗ ಅವರಿಗೆ ಚಿನ್ನಾಭರಣವಿದ್ದ ಬ್ಯಾಗ್​ ರೈಲಿನಲ್ಲೇ ಮರೆತು ಬಿಟ್ಟಿದ್ದು ನೆನೆಪಿಗೆ ಬಂದಿದೆ.

RPFಗೆ ದೂರು, ಕಾರ್ಯಾಚರಣೆ

ತಮ್ಮ ಮಗನಿಗೆ ಟ್ರೈನ್​ನಲ್ಲಿ ಚಿನ್ನದ ಬ್ಯಾಗ್​ ಮರೆತು ಬಿಟ್ಟು ಬಂದ ಬಗ್ಗೆ ವೃದ್ಧ ದಂಪತಿ ವಿವರವಾಗಿ ತಿಳಿಸುತ್ತಾರೆ. ಎಚ್ಚೆತ್ತ ಅವರ ಮಗ 4:50ಕ್ಕೆ Rail Madad ಮೂಲಕ ದೂರು ದಾಖಲಿಸುತ್ತಾರೆ. ಬಿ1 ಕೋಚ್​ನಲ್ಲಿ ಬ್ಯಾಗ್​ ಮರೆತು ಬಿಟ್ಟು ಬಂದಿರುವುದನ್ನು ಉಲ್ಲೇಖಿಸುತ್ತಾರೆ. ಈ ಮಾಹತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಸನ್ನದ್ಧರಾದ ಆರ್​ಪಿಎಫ್​ ತಂಡ, ರೈಲಿನಲ್ಲಿದ್ದ ಹೆಡ್​​ಕಾನ್​ಸ್ಟೇಬಲ್​ ಸುಕುಮಾರ್​​ ಎಸಿಗೆ ಮಾಹಿತಿ ತಲಪಿಸುತ್ತಾರೆ.
ಕೊಂಚವೂ ತಡಮಾಡದ ಹೆಡ್​ ಕಾನ್​ಸ್ಟೇಬಲ್ ಸುಕುಮಾರ್​ ಕೋಚ್​ಗೆ ಧಾವಿಸಿ ಸೀಟ್​ ಕೆಳಗಿದ್ದ ಬ್ಯಾಗ್​​ನ್ನು ನೋಡಿ, ಅದನ್ನು ಮುಂಜಾನೆ 5:15 ಆರ್​ಪಿಎಫ್​ ಅಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಾಡಿದರು. ದಂಪತಿಯನ್ನು ರೈಲ್ವೆ ನಿಲ್ದಾಣಕ್ಕೆ ಕರೆಸಿ ಬ್ಯಾಗ್​ ಪರೀಶಿಲಿಸಿ ಹಸ್ತಾಂತರಿಸಿದ್ದಾರೆ. ಬ್ಯಾಗ್​ನಲ್ಲಿದ್ದ 50 ಗ್ರಾಂ ತೂಕದ ಚಿನ್ನಾಭರಣ ಮತ್ತು 3500 ರೂ ನಗದು ತಲುಪಿಸಿದ್ದಾರೆ. ರೈಲ್ವೆ ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕೆಲಸದ ವೇಗಕ್ಕೆ ದಂಪತಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿದರು, (ಏಜೆನ್ಸೀಸ್).