ನೆಲಮಂಗಲ ನಗರಸಭೆ ವ್ಯಾಪ್ತಿಯ ವಿವಿಎಸ್​ ಕನ್ವೇಕ್ಷನ್​ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ವಲಯಪಾಲಕಿ ಪ್ರಮೀಳಾ ಶಿವಕುಮಾರ್​, ಸಹಾಯಕ ಜಿಲ್ಲಾ ಪಾಲಕ ಜಿ.ಆರ್​.ನಾಗರಾಜು, ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್​ ಇತರರು ಇದ್ದರು. 
ರಾಜ್ಯ

ಸೇವಾ ಯೋಜನೆಗಳಿಗೆ ರೋಟರಿ ಒತ್ತು / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಪ್ರತಿಫಲ ನಿರೀಕ್ಷಿಸದೆ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವುದು ರೋಟರಿ ಮುಖ್ಯಧ್ಯೇಯ ಎಂದು ರೋಟರಿ ಜಿಲ್ಲಾ ಪಾಲಕ ರವಿಶಂಕರ್​ ಡಕೋಜು ಹೇಳಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬಳಿಯ ವಿವಿಎಸ್​ ಕನ್ವೇಕ್ಷನ್​ ಹಾಲ್​ನಲ್ಲಿ ನೆಲಮಂಗಲ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಪರಿಸರ ಸಂರಕ್ಷಣೆ, ಪ್ರಕೃತಿ ಹಾಗೂ ಪ್ರಾಣಿ ಪಕ್ಷಿಗಳ ಉಳಿವಿಗೆ ಆದ್ಯತೆ ನೀಡಲಾಗುತ್ತಿದೆ. ಸಸಿ ನೆಡುವುದು ಹಾಗೂ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮಹತ್ತರ ಗುರಿ ಹೊಂದಲಾಗಿದೆ ಎಂದರು.
ಅಧ್ಯಕ್ಷ ಲೋಕೇಶ್​ ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಯುವಜನ ಅಭಿವೃದ್ಧಿ, ಸಮಾಜಮುಖಿ ಸೇವಾ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಸೌಲಭ್ಯ ವಿತರಣೆ: ಕಾಮದೇನು ಯೋಜನೆಯಡಿ ರೈತ ಮಹಿಳೆ ಮಂಜಮ್ಮ ಎಂಬಾತರಿಗೆ ಹಸು, ಯಲಚಗೆರೆ ಸರ್ಕಾರಿ ಶಾಲೆಗೆ ನೋಟ್​ಬುಕ್​ ಹಾಗೂ ಪಾಪಭೋವಿಪಾಳ್ಯ ಸರ್ಕಾರಿ ಶಾಲೆಗೆ ಸ್ಮಾಟ್​ ಟಿವಿ ವಿತರಿಸಲಾಯಿತು.
ಯೋಜನೆಗೆ ಚಾಲನೆ: ಮಹಿಳೆಯರಿಗೆ ನೀಡುತ್ತಿರುವ ಟೇಲರಿಂಗ್​, ಬ್ಯೂಟಿ ಪಾರ್ಲರ್​, ಕುಚ್ಚು ಹಾಕುವ ತರಬೇತಿ ಹಾಗೂ ಕಲ್ಪವೃಕ್ಷ ಮತ್ತು ಕಾಮಧೇನು ಯೋಜನೆಗೆ ಜಿಲ್ಲಾ ಪಾಲಕರು ಚಾಲನೆ ನೀಡಿದರು.
ಪ್ರತಿಭಾ ಪುರಸ್ಕಾರ: ಪದಗ್ರಹಣ ಹಿನ್ನಲೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ರೋಟರಿ ಕ್ಲಬ್​ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್​ಗೆ 12 ಸದಸ್ಯರು ನೂತನವಾಗಿ ಸೇರ್ಪಡೆಯಾದರು.
ಪದಾಧಿಕಾರಿಗಳ ಪದಗ್ರಹಣ: ನೆಲಮಂಗಲ ರೋಟರಿ ಕ್ಲಬ್​ ಅಧ್ಯಕ್ಷರಾಗಿ ಲೋಕೇಶ್​, ಕಾರ್ಯದರ್ಶಿ ಸುಶೀಲ್​ಕುಮಾರ್​, ನಿಯೋಜಿತ ಅಧ್ಯಕ್ಷ ಚಂದ್ರಕುಮಾರ್​, ಖಜಾಂಚಿ ಹರೀಶ್​ಕುಮಾರ್​, ಉಪಾಧ್ಯಕ್ಷ ಸೋಮಶೇಖರ್​, ಜಂಟಿ ಕಾರ್ಯದರ್ಶಿ ಎನ್​.ಜಿ.ನಾಗರಾಜು, ನಿರ್ದೇಶಕರಾಗಿ ಬಸವರಾಜು, ಹನುಮಂತರಾಜು, ರಾಜಶೇಖರ್​, ರವಿಕುಮಾರ್​, ಶಿವಶಂಕರ್​ಪ್ರಸಾದ್​, ಜಯಂತ್​ ರುದ್ರೇಗೌಡ, ಉಮಾನಾರಾಯಣ್​, ಕುಮಾರ್​ ಇತರರು ಪದಗ್ರಹಣ ಸ್ವೀಕರಿಸಿದರು.
ನೆಲಮಂಗಲ ರೋಟರಿ ಕಾರ್ಯದರ್ಶಿ ಸುಶೀಲ್​ಕುಮಾರ್​, ಮಾಜಿ ಅಧ್ಯಕ್ಷ ಎಚ್​.ಜಿ.ರಾಜು, ಮಂಜುನಾಥ್​, ನಾಗರಾಜು, ಮಂಜುನಾಥ್​ಗೌಡ, ವನರಾಜು, ಮಂಜುನಾಥ್​ಪಾಟೀಲ್​, ವಿ.ಆರ್​.ಸ್ವಾಮಿ ಇದ್ದರು.