ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹನುಮಂತರಾಜು, ಕಾರ್ಯದರ್ಶಿಯಾಗಿ ನಾಗೇಂದ್ರ, ಉಪಾಧ್ಯಕ್ಷರಾಗಿ ಕಿರಣ್​ಕುಮಾರ್​ ಹಾಗೂ ಇತರರು ಪದಗ್ರಹಣ ಸ್ವೀಕರಿಸಿದರು. ಜಿಲ್ಲಾ ಪಾಲಕ ರವಿಶಂಕರ್​ ಡಾಕೋಜು, ಸಹ ಕಾರ್ಯಪಾಲ ಜಿ.ಆರ್​.ನಾಗರಾಜು, ಜಿಲ್ಲಾ ವಲಯ ಪಾಲಕ ಡಾ.ನಾಗೇಶ್​ ಇದ್ದರು. 
ರಾಜ್ಯ

ಪೋಲಿಯೋ ನಿಮೂರ್ಲನೆಗೆ ರೋಟರಿ "ಧನ್ಯವಾದ' / NELAMANGAL

ನೆಲಮಂಗಲ : ವಿಶ್ವದಲ್ಲಿ ಶೇ.99.99ರಷ್ಟು ಪೋಲಿಯೋಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ರೋಟರಿ ಕಾರ್ಯ ಮಹತ್ವದು. ಈ ವರ್ಷವೂ "ಧನ್ಯವಾದ' ಶೀರ್ಷಿಕೆಯಡಿ ಸೇವಾ ಕಾರ್ಯಕ್ಕೆ ತಂಡ ಸಜ್ಜಾಗಿದೆ. ಅದರಲ್ಲೂ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ, ಆರೋಗ್ಯ, ಪ್ರಾಣಿಪ ಹಾಗೂ ಅರಣ್ಯ ಸಂರಕ್ಷಣೆ ಮಾಡುವುದು ಮುಖ್ಯ ಗುರಿಯಾಗಿದೆ ಎಂದು ಜಿಲ್ಲಾ ಪಾಲಕ ರವಿಶಂಕರ್​ ಡಾಕೋಜು ಹೇಳಿದರು.
ನಗರದ ಬಿ.ಎಚ್​.ರಸ್ತೆಯ ವಿವಿಎಸ್​ ಪಾರ್ಟಿಹಾಲ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅರಣ್ಯನಾಶ, ಕೆರೆ&ಕಟ್ಟೆಗಳನ್ನು ಮುಚ್ಚುತ್ತಿರುವುದರಿಂದ ಭೂತಾಯಿಗೂ ಪೋಲಿಯೋ ತಗುಲಿದಂತಿದೆ. ಜನರನ್ನು ಪೊಲೀಯೋಮುಕ್ತಗೊಳಿಸಿದಂತೆ ಭೂಮಿಯನ್ನೂ ಪೋಲಿಯೋಮುಕ್ತಗೊಳಿಸಬೇಕಿದೆ. ಗಿಡಮರ ಬೆಳೆಸುವುದೇ ಭೂಮಿಗೆ ಲಸಿಕೆ. ಅರಣ್ಯ ಅರೋಗ್ಯವಾಗಿದ್ದರೇ ಮಾತ್ರ ನಾವೆಲ್ಲ ಅರೋಗ್ಯವಾಗಿರಲು ಸಾಧ್ಯ ಎಂದರು.
ನೂತನ ಅಧ್ಯಕ್ಷ ಹನುಮಂತರಾಜು ಮಾತನಾಡಿ, ರೋಟರಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ, ಶಾಲಾಮಕ್ಕಳಿಗೆ ಅಗತ್ಯ ಸೌಲಭ್ಯ, ವೃಾರೋಪಣ, ರಕ್ತದಾನ, ಮಹಿಳಾ ಸಬಲೀಕರಣ ಹಾಗೂ ಯುವಜನರ ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ರೋಟರಿ ಸೇವಾ ರತ್ನ ಪ್ರಶಸ್ತಿ ಪ್ರಧಾನ : ನಿವೃತ್ತ ನ್ಯಾಯಾಧೀಶೆ ಸುಜಾತಾ ದಯಾನಂದಸ್ವಾಮಿ, ಖ್ಯಾತ ಗಾಯಕ ಕಡಬಗೆರೆ ಮುನಿರಾಜು ಅವರಿಗೆ ರೋಟರಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತರಾದ ಎನ್​.ಜಿ.ಗೋಪಾಲ್​, ರಾಜಶೇಖರ್​, ರುದ್ರೇಶ್​ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ರೋಟರಿ ಸದಸ್ಯರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ವಿತರಿಸಲಾಯಿತು.
ಸವಲತ್ತು ವಿತರಣೆ: ನಗರ ಸಂಚಾರಿ ಪೊಲೀಸ್​ ಠಾಣೆ ಪೊಲೀಸರಿಗೆ ಸುಮಾರು 200ಕ್ಕೂ ಹೆಚ್ಚು ಜಾಕೆಟ್​ ವಿತರಣೆ ಹಾಗೂ ಅಂಗನವಾಡಿ ಅಡುಗೆ ಸಿಬ್ಬಂದಿಗೆ ಎಪ್ರಾನ್​ ವಿತರಿಸಲಾಯಿತು.
ನೂತನ ಪದಾಧಿಕಾರಿಗಳು: ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹನುಮಂತರಾಜು, ಕಾರ್ಯದರ್ಶಿಯಾಗಿ ನಾಗೇಂದ್ರ, ಉಪಾಧ್ಯಕ್ಷರಾಗಿ ಕಿರಣ್​ಕುಮಾರ್​, ಐಪಿಸಿ ಗಂಗಣ್ಣ, ಜಂಟ ಕಾರ್ಯದರ್ಶಿ ನಟರಾಜು, ಖಜಾಂಚಿ ಪ್ರಸನ್ನಕುಮಾರ್​, ಎಸ್​ಜಿಟಿ ಚಂದ್ರಶೇಖರ್​, ಬುಲೆಟೀನ್​ ಎಡಿಟರ್​ ಕೇಶವ್​ಮೂರ್ತಿ, ನಿರ್ದೇಶಕರಾಗಿ ರವಿ, ಕೃಷ್ಣಪ್ಪ, ರಾಕೇಶ್​, ವಿಜಯ್​ಕುಮಾರ್​, ಚೌಡಪ್ಪ, ಸುರೇಶ್​ , ಪ್ರೇಮ್​ಕುಮಾರ್​, ನಂದಕುಮಾರ್​, ಗೋವಿಂದರಾಜು, ಗಣೇಶಮೂರ್ತಿ, ವಿಜಯ್​ವೀಳ್ಯದೆಲೆ ಪದಗ್ರಹಣ ಸ್ವೀಕರಿಸಿದರು. ಇದೇ ವೇಳೆ ಹಲವರು ರೋಟರಿ ಸದಸ್ಯತ್ವ ಪಡೆದರು.
ಜಿಲ್ಲಾ ಸಹ ಕಾರ್ಯಪಾಲ ಜಿ.ಆರ್​.ನಾಗರಾಜು, ಜಿಲ್ಲಾ ವಲಯ ಪಾಲಕ ಡಾ.ನಾಗೇಶ್​, ಜಿಲ್ಲಾ ಕಾರ್ಯದರ್ಶಿ ಮಹದೇವ ದಂಬಾಳ್​, ಜಿಲ್ಲಾ ಸಂಟಕ ನವೀನ್​ಕುಮಾರ್​, ಇನ್ನರ್​ವ್ಹೀಲ್​ ಅಧ್ಯೆ ಲತಾ, ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಮಂಜುಳಾ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.