ಸೋಮವಾರಪೇಟೆ ರೋಟರಿ ಭವನದಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ ನಡೆಯಿತು. ವೀಣಾ, ರಮೇಶ್, ಸುಂದರ್, ರವಿ ಇದ್ದರು. 
ರಾಜ್ಯ

ರೋಟರಿಯಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ

ಸೋಮವಾರಪೇಟೆ: ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಹಾಗೂ ಜಿಸಿಸ್ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪಟ್ಟಣದ ರೋಟರಿ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೋಮವಾರ ನಡೆಯಿತು.
ಶಿಬಿರವನ್ನು ರೋಟರಿ ಅಧ್ಯಕ್ಷೆ ವೀಣಾ ಮನೋಹರ್ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯವಾಗಿರುತ್ತದೆ. ಸಾರ್ವಜನಿಕರು, ಗ್ರಾಮೀಣ ಜನರು, ಬಡವರು, ಕಾರ್ಮಿಕರು ಅರೋಗ್ಯ ತಪಾಸಣೆ ಶಿಬಿರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಒಂದೆ ಕಡೆ ಹಲವು ತಜ್ಞವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬಹುದು. ರೋಗಗಳ ಚಿಹ್ನೆಗಳು ಗೊತ್ತಾದರೆ ತಮಗಿಷ್ಟವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಗ್ರಾಮೀಣ ಜನರು ಜನರಲ್ ಮೆಡಿಸನ್, ಜನರಲ್ ಸರ್ಜನ್, ಮೂಳೆ ತಜ್ಞರು, ಮಕ್ಕಳ ತಜ್ಞರು ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ರೋಗಿಗಳ ಪರೀಕ್ಷೆ ಮಾಡಿದರು. ಅವಶ್ಯಕತೆಯಿದ್ದವರಿಗೆ ಔಷಧ ವಿತರಿಸಲಾಯಿತು. ರೋಟರಿ ಕಾರ್ಯದರ್ಶಿ ಡಿ.ಪಿ.ರಮೇಶ್, ನಿಯೋಜಿತ ಅಧ್ಯಕ್ಷ ಬಿ.ಎಸ್.ಸುಂದರ್, ಕಾರ್ಯದರ್ಶಿ ಪಿ.ಕೆ.ರವಿ ಮತ್ತು ಹಿರಿಯ ರೋಟರಿ ಪದಾಧಿಕಾರಿಗಳು ಇದ್ದರು.