ನರಸೀಪುರ ಸರ್ಕಾರಿ ಆಸ್ಪತ್ರೆಗೆ ಸೋಂಪುರ ರೋಟರಿ ವತಿಯಿಂದ ಕಂಪ್ಯೂಟರ್ ಅನ್ನು ರೋಟರಿ ಕ್ಲಬ್ ಅಧ್ಯಕ್ಷ ದೇವರಾಜು ಕೊಡುಗೆಯಾಗಿ ನೀಡಿದರು. ಮುಖಂಡರಾದ ಬೈರಣ್ಣ, ವಿಶ್ವನಾಥ್ಬಾಬು, ವೈದ್ಯರಾದ ತೇಜಸ್, ಕ್ಲಬ್ನ ಕಾರ್ಯದರ್ಶಿ ಯುವರಾಜು, ಖಜಾಂಚಿ ಮಂಗಳಮ್ಮ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.
ದಾಬಸ್ಪೇಟೆ : ಸಾರ್ವಜನಿಕ ಸೇವಾ ಕಾರ್ಯಕ್ಕೆ ರೋಟರಿ ಸಂಸ್ಥೆ ಹಲವು ವರ್ಷಗಳಿಂದ ಸ್ಪಂದಿಸಿಕೊಂಡು ಬರುತ್ತಿದೆ ಎಂದು ಸೋಂಪುರ ರೋಟರಿ ಕ್ಲಬ್ ಅಧ್ಯಕ್ಷ ದೇವರಾಜು ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ನರಸೀಪುರ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಕೊಡುಗೆ ನೀಡಿ ಮಾತನಾಡಿದರು. ಸೋಂಪುರ ಕ್ಲಬ್ ವತಿಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ರೂಂ, ಶೌಚಗೃಹ, ಮಕ್ಕಳಿಗೆ ಆರೋಗ್ಯ ತಪಾಸಣೆ ಸೇರಿ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನರಸೀಪುರ ಸರ್ಕಾರಿ ಆಸ್ಪತ್ರೆಯ ವೈದ್ಯರ ಬೇಡಿಕೆ ಮೇರೆಗೆ ಕಂಪ್ಯೂಟರ್ ನೀಡುತ್ತಿದ್ದೇವೆ ಎಂದರು.
ನರಸೀಪುರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಪರಿಸರ ಜಾಗೃತಿ, ಆರೋಗ್ಯದ ಅರಿವು, ಜಲಸಂರಕ್ಷಣೆ, ಶಾಲಾ ಮಕ್ಕಳ ಅವಶ್ಯಕತೆಗೆ ಅನುಗುಣವಾಗಿ ಕ್ಲಬ್ ಸದಸ್ಯರು ಸಹಾಯ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ.ಮುಂದೆಯೂ ಸದಸ್ಯರಿಗೆ ಸಮಾಜ ಸೇವೆ ಮಾಡುವ ಶಕ್ತಿ ಹೆಚ್ಚಾಗಲಿ ಎಂದರು.
ಅಬ್ಬಿಗೆರೆ ರೋಟರಿ ಕ್ಲಬ್ನ ಅಧ್ಯಕ್ಷ ಸತೀಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೋಂಪುರ ರೋಟರಿ ವತಿಯಿಂದ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ನಾನು ಸಹ ಇಂದು ನಿಮ್ಮೊಂದಿಗೆ ಕೈಜೋಡಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.