ನೆಲಮಂಗಲದ ಸದಾಶಿವನಗರ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಧ್ಯಕ್ಷರ ಅಧಿಕೃತ ಭೇಟಿ ಸಮಾರಂಭದಲ್ಲಿ ಇನ್ನರ್ ವೀಲ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷೆ ಇಶಿತಾಸೇತು, ಜಿಲ್ಲಾ ಕಾರ್ಯದರ್ಶಿ ವೀಣಾಪ್ರಮೋದ್, ತಾಲೂಕು ಕಾರ್ಯದರ್ಶಿ ಮಂಜುಳಾ ಸಿದ್ದರಾಜು ಇದ್ದರು.
ನೆಲಮಂಗಲ : ಸಮಾಜದ ದೀನ ದುರ್ಬಲರ ಸೇವೆಯೇ ರೋಟರಿ, ಇನ್ನರ್ವೀಲ್ ಸಂಸ್ಥೆ ಗುರಿಯಾಗಿದೆ ಎಂದು ಇನ್ನರ್ ವೀಲ್ ಸಂಸ್ಥೆ ಜಿಲ್ಲಾಧ್ಯಕ್ಷೆ ರಜನಿಗೌಡ ತಿಳಿಸಿದರು. ನಗರದ ಸದಾಶಿವನಗರ ರೋಟರಿ ಭವನದಲ್ಲಿ ರೋಟರಿ ಇನ್ನರ್ ವೀಲ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಅಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯು ಗ್ರಾಮೀಣ ಭಾಗದವರಿಗೆ ಅನುಕೂಲ ಕಲ್ಪಿಸುವ ಸಂಬಂಧ ಶಿಕ್ಷಣ, ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಸಂಸ್ಥೆಯ ಸದಸ್ಯರು ತಾವುಗಳಿಸಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಜನರ ಏಳಿಗೆಗೆ ವಿನಿಯೋಗಿಸುವ ಗುಣ ಬೆಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇನ್ನರ್ ವೀಲ್ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ಸೇವೆಯೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ನೊಂದವರ ಕಣ್ಣೀರು ಒರೆಸುವ ಕಾರ್ಯ ಸಂಸ್ಥೆಯಿಂದ ಮಾಡಲಾಗುತ್ತಿದೆ. ಮಹಿಳಾ ಸಬಲೀಕರಣ, ಉಚಿತ ಅರೋಗ್ಯ ಶಿಬಿರ, ಮಹಿಳೆಯರಿಗೆ ತರಬೇತಿ, ಮಕ್ಕಳಿಗೆ ಸಮವಸ್ತ್ರ ಹಾಗೂ ಕಲಿಕಾ ಸಮಗ್ರಿ ವಿತರಣೆ ಸೇರಿ ಸುಮಾರು 25ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ವಿವಿಧ ಕಾರ್ಯಕ್ರಮ: ಜಿಲ್ಲಾ ಅಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ ಹಿನ್ನೆಲೆಯಲ್ಲಿ ರೈತ ಮಹಿಳೆಯ ಒಬ್ಬರಿಗೆ ಬೆಳೆ ಕತ್ತರಿಸುವ ಯಂತ್ರ ವಿತರಣೆ, ಸುಭಾಷ್ ನಗರ ಶಾಲೆಗೆ ಪ್ರೊಜೆಕ್ಟ್ ಸ್ಕ್ರೀನ್ ವಿತರಣೆ, ಅವಲಕುಪ್ಪೆ ಕ್ರೀಡಾ ಸಮವಸ್ತ್ರ ಸೇರಿ ಹಂದಿಗುಟ್ಟೆ ಸರ್ಕಾರಿ ಶಾಲೆ ಚೇರ್ ವಿತರಣೆ ಮಾಡಲಾಗಿದೆ ಎಂದು ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು ಮಾಹಿತಿ ನೀಡಿದರು.
ಖಜಾಂಚಿ ರೇಖಾಜಯಪ್ರಕಾಶ್, ಐಎಸ್ಒ ಮುತ್ತುಲಕ್ಷಿ$್ಮ ಸತೀಶ್, ಎಡಿಟರ್ ವನಿತಧರಣಿ, ಮಾಜಿ ಅಧ್ಯಕ್ಷರಾದ ಉಮಾ, ಲತಾ, ಕೋಮಲಾ, ಶಾರದಾ, ತನುಜಾ , ಸದಸ್ಯರಾದ ಸೌಮ್ಯಾ, ನಾಗರತ್ನ, ರೂಪಾ, ಮಂಜುಳಾ, ನಳಿನಾ, ಹೇಮಾ, ಕಾವ್ಯಾ, ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಗಂಗರಾಜು, ಮಾಜಿ ಅಧ್ಯಕ್ಷ ನವೀನ್ಕುಮಾರ್, ಟಿ.ನಾಗರಾಜು , ಸಿ.ಜಿ.ಮಂಜುನಾಥ್, ನಿರ್ದೇಶಕ ಬಾಲಾಜಿ, ರೋಟರಿ ಅರುಣೋದಯ ಅಧ್ಯಕ್ಷ ಗಂಗಣ್ಣ, ಕಾರ್ಯದರ್ಶಿ ಕೇಶವಮೂರ್ತಿ ಇದ್ದರು.