ನಿರ್ಮಾಣವಾದರೂ ವಿತರಣೆಯಾಗದ ಸೂರುಗಳು! house
- ಬಂಗಾರಪೇಟೆಯಲ್ಲಿ ಶಿಥಿಲಾವಸ್ಥೆಗೆ ತಲುತ್ತಿವೆ ಸ್ಲಂಬೋರ್ಡ್ನ 110 ಮನೆಗಳು
ಬಂಗಾರಪೇಟೆ: ಕಳೆದ ಮೂರು ವರ್ಷಗಳ ಹಿಂದೆ ಕರ್ನಾಟಕ ಕೊಳಗೇರೆ ಅಭಿವೃದ್ಧಿ ಮಂಡಳಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎಚ್ಎಫ್ಎ (ಸ್ಲಂ ಬೋರ್ಡ್)ನಿಂದ ನಿಮಾರ್ಣ ಮಾಡಿರುವ 110 ಮನೆಗಳು ಇನ್ನೂ ಲಾನುಭವಿಗಳಿಗೆ ಹಂಚಿಕೆಯಾಗದೆ, ಪಾಳು ಬಿದ್ದ ಬಂಗಲೆಯಂತಾಗುತ್ತಿದ್ದು, ಲಾನುಭವಿಗಳು ಚಾತಕ ಪಯಂತೆ ಕಾದು ಕುಳಿತಿದ್ದಾರೆ.house
ನಗರ ವ್ಯಾಪ್ತಿಯಲ್ಲಿ ಬಡವರ ಆಶ್ರಯಕ್ಕಾಗಿ 400 ಮನೆಗಳು ಸ್ಲಂಬೋರ್ಡ್ನಿಂದ ಮಂಜೂರಾಗಿದ್ದವು. ಸಂಜಯಗಾಂಧಿ ನಗರ, ಗಂಗಮ್ಮನಪಾಳ್ಯ ಮತ್ತು ಇಂದಿರಾ ಆಶ್ರಯ ಬಡಾವಣೆಗಳಲ್ಲಿ ನಿಮಾರ್ಣ ಮಾಡಿರುವ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ರಾಮಕೃಷ್ಣ ಹೆಗ್ಗಡೆ ಕಾಲನಿ ಸಮೀಪ ನಿಮಾರ್ಣ ಮಾಡಿರುವ 110 ಮನೆಗಳನ್ನು ಇನ್ನೂ ವಿತರಣೆ ಮಾಡಿಲ್ಲ.
2020ರ ಸಾಲಿನಲ್ಲಿ ನಗರಕ್ಕೆ 19 ಕೋಟಿ ರೂ. ವೆಚ್ಚದಲ್ಲಿ ಮನೆ ನಿಮಾರ್ಣಕ್ಕೆ ಮಂಜೂರು ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ .40 ಮತ್ತು ರಾಜ್ಯ ಸರ್ಕಾರದಿಂದ ಶೇ.50 ಸೇರಿ ಒಟ್ಟು ಶೇ.90 ಅನುದಾನ ಬಿಡುಗಡೆಯಾಗಿದೆ. ಉಳಿದ ಶೇ.10 ಆಯ್ಕೆಗೊಳ್ಳುವ ಲಾನುಭವಿಗಳಿಂದ ತಲಾ ಮನೆಗೆ 55 ಸಾವಿರ ರೂ. ಸ್ಲಂಬೋರ್ಡ್ಗೆ ನೀಡಬೇಕು. ನಂತರ ಸ್ಲಂಬೋರ್ಡ್ನಿಂದ ಅದು ನಗರಸಭೆಗೆ ಹಸ್ತಾಂತರವಾಗಿ ಅಲ್ಲಿಂದ ಲಾನುಭವಿಗಳಿಗೆ ಹಂಚಿಕೆ ಮಾಡಬೇಕಿದೆ.
ಮೂಲ ಸಮಸ್ಯೆ ಏನು?: ಲಾನುಭವಿಗಳು ನೀಡಬೇಕಾದ ಶೇ.10 ಹಣ ಜಮಾಗೊಳ್ಳದ ಹಿನ್ನೆಲೆ ಮತ್ತು ಮನೆಗಳ ನಿಮಾರ್ಣ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ 3 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರಿಂದ 110 ಮನೆಗಳನ್ನು ನಗರಸಭೆ ವಶಕ್ಕೆ ನೀಡಿಲ್ಲ. ಸರ್ಕಾರ ಬಡವರು, ದಲಿತರ ಅಭಿವೃದ್ಧಿಗಾಗಿ ಹಲವು ಯೋಜನೆಗಳ ಮುಖಾಂತರ ವಿವಿಧ ಸವಲತ್ತು ನೀಡುತ್ತಿದೆ. ಆದರೆ ಸರಿಯಾಗಿ ಬಳಕೆಯಾಗದ ಕಾರಣ ಇಂದಿಗೂ ಸಮಸ್ಯೆ ಮಾತ್ರ ತಪು$್ಪತ್ತಿಲ್ಲ.