ಗುರುಮಠಕಲ್‌ನಲ್ಲಿ ಖಾಸಗಿ ವೈದ್ಯರ ವೆಲ್ಲೇರ್‌ನಿಂದ ಹಮ್ಮಿಕೊಂಡ ರಾಷ್ಟಿçÃಯ ವೈದ್ಯರ ದಿನ ಕಾರ್ಯಕ್ರಮವನ್ನು ಶ್ರೀ ಶಾಂತವೀರ ಗುರುಮುರಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಡಾ.ನರಸಿಂಗರಾವ್, ಶಿವಪ್ರಸಾದ ಮೈತ್ರಿ, ಭಾಗಿರೆಡ್ಡಿ ಇದ್ದರು. 
ರಾಜ್ಯ

ರೋಗಿಗೆ ಕಾಳಜಿಪೂರಕವಾಗಿ ಚಿಕಿತ್ಸೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಶಾಂತವೀರ ಗುರುಮುರುಘರಾಜೇಂದ್ರ ಶ್ರೀ ಕಿವಿಮಾತು
  • ಗುರುಮಠಕಲ್‌ನಲ್ಲಿ ವೈದ್ಯರ ದಿನಾಚರಣೆ
ಗುರುಮಠಕಲ್: ವೈದ್ಯರು ರೋಗಿಗಳ ಜತೆ ಶಾಂತಿ, ಸೌಹಾರ್ದ, ಸಹನೆ ಮತ್ತು ಸಮಾಧಾನದಿಂದ ವರ್ತಿಸುವುದರ ಜತೆಗೆ ಆತ್ಮೀಯವಾಗಿ ಮಾತನಾಡಿದಾಗ ಆಗ ರೋಗಿಗಳಿಗೆ ವೈದ್ಯರಲ್ಲಿ ಭರವಸೆ ಮೂಡುತ್ತದೆ. ಇಂಥ ಮಾತುಗಳಿಂದ ರೋಗಿಯ ಅರ್ಧ ಕಾಯಿಲೆ ವಾಸಿಯಾಗುತ್ತದೆ ಎಂದು ಖಾಸಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಎನ್‌ಆರ್‌ಆರ್ ಕಲ್ಯಾಣ ಮಂಟಪದಲ್ಲಿ ಖಾಸಗಿ ವೈದ್ಯರ ವೆಲ್ಲೇರ್ ವತಿಯಿಂದ ಆಯೋಜಿಸಿದ್ದ ರಾಷ್ಟಿçÃಯ ವೈದ್ಯರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಎಲ್ಲವನ್ನು ವ್ಯವಹಾರಿಕವಾಗಿ ನೋಡದೇ ರೋಗಿ ಬಗ್ಗೆ ಕಾಳಜಿ ಪೂರಕವಾಗಿ ಚಿಕಿತ್ಸೆ ನೀಡಬೇಕು. ವೈದ್ಯರ ವೃತ್ತಿ ಪವಿತ್ರವಾಗಿದ್ದು, ಸಾಮಾಜಿಕ ಜವಾಬ್ದಾರಿ ಹೊಂದಿದೆ ಎಂಬ ಅರಿವು ವೈದ್ಯರಿಗೆ ಅವಶ್ಯಕತೆ ಇದೆ. ಅಲ್ಲದೆ ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಸೇವೆಯ ಪರಮೋನ್ನತ ರೂಪವಾಗಿದೆ ಎಂದು ಹೇಳಿದರು.
ಡಾ.ಭಾಗಿರೆಡ್ಡಿ ಮಾತನಾಡಿ, ಸಾರ್ವಜನಿಕರಲ್ಲಿ ಆರೋಗ್ಯ ಜÁಗೃತಿ ಮೂಡಿಸುವ ಉದ್ದೇಶದಿಂದ ರಕ್ತದಾನ ಶಿಬಿರು ಉಚಿತ ಆರೋಗ್ಯ ತಪಾಸಣೆ, ಆಪೌಷ್ಟಿಕ ಮಕ್ಕಳ ಆರೈಕೆ. ಆರೈಕೆ, ಪೌಷ್ಟಿಕಾಂಶ ಜಾಗೃತಿ ಹಾಗೂ ಯೋಗ ಶಿಬಿರ ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಈ ವೇಳೆ ಸಂಘದ ಸದಸ್ಯ ವೈದ್ಯರನ್ನು ಸನ್ಮಾನಿಸಿ, ಅವರ ಸೇವೆಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ತಾಲೂಕು ಆರೋಗ್ಯಾಽಕಾರಿ ಡಾ.ಹಣಮಂತರೆಡ್ಡಿ, ಡಾ.ಭಗವಂತ ಅನ್ವರ್, ಡಾ.ಭೀಮಾಶಂಕರ ಮುತ್ತಗಿ, ಡಾ.ರಾಜೇಂದ್ರ, ಧನ್ವಂತರಿ ಆಸ್ಪತ್ರೆ ಡಾ.ನರಸಿಂಗರಾವ್, ಎನ್.ಕೆ. ದೌಲತ್, ಡಾ.ನೀಲಾಂಬಿಕಾ, ಪ್ರಕಾಶ ರಾಜಾಪುರ, ಡಾ.ನರಸಿಂಹಮುಲು. ಡಾ.ಮೋಹನರೆಡ್ಡಿ, ಉಪಾಧ್ಯಕ್ಷ ಶಿವಪ್ರಸಾದ ಮೈತ್ರಿ, ಡಾ.ಗುರುರಾಜ ಪೂಜಾರಿ, ಡಾ.ನಾಗರಾಜ, ಡಾ.ರಾಮಕೃಷ್ಣ, ಡಾ.ಸುಧಾರೆಡ್ಡಿ, ಡಾ.ನಂದಿನಿ ಸೇರಿ ಅನೇಕರು ಭಾಗವಹಿಸಿದ್ದರು.