Robbery at BESCOM JE's house
ನಗರದ ಗುಂಡಪ್ಪ ಬಡಾವಣೆಯಲ್ಲಿ ಬೆಸ್ಕಾಂ ಜೆಇ ಚೇತನ್ ರೆಡ್ಡಿ ಅವರ ಮನೆಯ ಬಾಗಿಲು ಮುರಿದ ಕಳ್ಳರು, ನಗದು, ಬೆಳ್ಳಿ ಆಭರಣ ಹಾಗೂ ಅಡುಗೆ ಮನೆಯ ವಸ್ತುಗಳನ್ನು ದೋಚಿದ್ದಾರೆ.
ಚೇತನ್ ರೆಡ್ಡಿ ಕುಟುಂಬ ಸಮೇತ ಊರಿಗೆ ತೆರಳಿದ್ದನ್ನು ಗಮನಿಸಿದ ಕಳ್ಳರು, ಮನೆಯ ಹಿಂದಿನ ಬಾಗಿಲನ್ನು ಸಲಾಕೆಗಳಿಂದ ಶಬ್ದ ಬಾರದಂತೆ ಮೀಟಿ ಒಳನುಗ್ಗಿದ್ದಾರೆ. ಭಾನುವಾರ ಚೇತನ್ ರೆಡ್ಡಿ ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
15 ಸಾವಿರ ನಗದು ಹಾಗೂ ದೇವರ ಕೋಣೆಯಲ್ಲಿದ್ದ ಸುಮಾರು 1.5 ಲ ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.
ಅಷ್ಟೇ ಅಲ್ಲದೆ ಅಡುಗೆ ಮನೆಯಲ್ಲಿದ್ದ ವಾಟರ್ ಫಿಲ್ಟರ್, ಮಿಕ್ಸಿ ಹಾಗೂ ಕುಕ್ಕರ್ ಸೇರಿ ಹಲವು ಗೃಹೋಪಯೋಗಿ ವಸ್ತುಗಳನ್ನೂ ಕದ್ದೊಯ್ದಿದ್ದಾರೆ. ನಗರ ಠಾಣೆ ಪಿಎಸ್ಐ ಪ್ರಕಾಶ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.