ಪ್ರಮುಖ ಮುಖ್ಯಾಂಶಗಳು
ವೇಗ ನಿಯಂತ್ರಕವಿಲ್ಲದೇ ಅವಾಂತರ
| ಅಪಘಾತಕ್ಕೆ ಆಹ್ವಾನಿಸುತ್ತಿರುವ ರಸ್ತೆ | ಸ್ಪಿಡ್ ಬ್ರೇಕರ್ಸ್ ಅಳವಡಿಕೆಗೆ ಒತ್ತಾಯ ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿಯಿರುವ ರಸ್ತೆಗೆ ವೇಗ ನಿಯಂತ್ರಕಗಳಿಲ್ಲದೇ ವಾಹನ ಸವಾರರಿಗೆ ಅಪಘಾತಕ್ಕೆ ಆಹ್ವಾನ ನೀಡಲಾಗುತ್ತಿದೆ.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಸೇತುವೆ ಪಕ್ಕದ ಸರ್ವಿಸ್ ರಸ್ತೆ ಹಾಗೂ ಗೋಟೂರ-ವಿಜಯಪುರ ರಸ್ತೆ ಸಂಪರ್ಕಿಸುವ ವೃತ್ತದಲ್ಲಿ ಸಂಕೇಶ್ವರ ಕಡೆಯಿಂದ ಬರುವ ರಸ್ತೆಗೆ ವೇಗ ನಿಯಂತ್ರಕ ಇಲ್ಲದೇ ವಾಹನಗಳು ವೇಗವಾಗಿ ಬರುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಸೇತುವೆ ಬಳಿ ಹೆಬ್ಬಾಳ, ಯಮಕನಮರಡಿ,ಬೆಳಗಾವಿಗೆ ಹೋಗುವ ಪ್ರಯಾಣಿಕರು ನಿಂತುಕೊಳ್ಳುತ್ತಾರೆ.ಆದರೆ ಸರ್ವೀಸ್ ರಸ್ತೆಯ ಮೇಲೆ ವಾಹನಗಳು ವೇಗವಾಗಿ ಸಂಚರಿಸುತ್ತಿರುವ ಜನರಿಗೆ ಅಪಘಾತದ ಭಯ ಕಾಡುತ್ತಿದೆ. ಹಾಗೂ ಸೇತುವೆ ಒಳಗಿನಿಂದ ಬರುವ ವಾಹನಗಳಿಗೆ ಸರ್ವಿಸ್ ರಸ್ತೆಯ ವಾಹನಗಳು ವೇಗವಾಗಿ ಸಂಚರಿಸುತ್ತಿರುವುದು ಸಮಸ್ಯೆಯಾಗುತ್ತಿದೆ.
ಸರ್ವೀಸ್ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಕೂಡಲೇ ವೇಗ ನಿಯಂತ್ರಕಗಳನ್ನು (ಸ್ಪಿಡ್ ಬೇಕರ್ಸ್) ಅಳವಡಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಲಾಗಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಮಾಸೇವಾಡಿ ಎಚ್ಚರಿಕೆ ನೀಡಿದ್ದಾರೆ.