ಬೀದರ್​ ದಣ ಕ್ಷೇತ್ರದ ರಾಜಗೀರಾ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಪ್ರಮುಖರಾದ ಸುರೇಶ ಮಾಶೆಟ್ಟಿ, ವಿಜಯಕುಮಾರ ಪಾಟೀಲ್​ ಗಾದಗಿ, ಸೂರ್ಯಕಾಂತ ಪಾಟೀಲ, ಹಣಮಂತರಾವ ಪಾಟೀಲ್​, ಡಾ.ವಿರೇಂದ್ರ ಪಾಟೀಲ್​, ಶಾಮರಾವ ಕುಲಕರ್ಣಿ, ಶಿವರಾಜ ಸ್ವಾಮಿ, ಗುರುನಾಥ ರಾಜಗೀರಾ, ಮಲ್ಲಿಕಾರ್ಜುನ ಪಾಟೀಲ್​ ಇತರರಿದ್ದರು. 
ರಾಜ್ಯ

ಅಭಿವೃದ್ಧಿಗೆ ಮೂಲ ಕೊಂಡಿ ರಸ್ತೆ

ಬಾಬುರಾವ ಯಡ್ರಾಮಿ
ಬೀದರ್​: ರಸ್ತೆ ಎನ್ನುವುದು ಕೇವಲ ಸಂಚಾರದ ಮಾರ್ಗವಲ್ಲ, ಅದು ಒಂದು ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೂಲ ಕೊಂಡಿಯಾಗಿದೆ ಎಂದು ಬೀದರ್​ ದಣ ೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್​ ದಣ ೇತ್ರದ ರಾಜಗೀರಾ ಗ್ರಾಮದಲ್ಲಿ ಸುಮಾರು 75 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ವ್ಯವಸ್ಥೆ ಅತ್ಯಂತ ಪ್ರಮುಖವಾಗಿದ್ದು, ಈ ಕಾಮಗಾರಿಯಿಂದ ಸ್ಥಳಿಯರಿಗೆ ಸಂಚಾರ ಸುಲಭವಾಗಲಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ಪಥದಲ್ಲಿ ಮುಂದುವರಿಯುತ್ತಿರುವ ಬೀದರ್​ ದಣ ೇತ್ರದಲ್ಲಿ ರಸ್ತೆ ಮೂಲಸೌಕರ್ಯಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ವಿವಿಧ ಗ್ರಾಮಗಳಲ್ಲಿ ಲಾಂತರ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಹಂತಹಂತವಾಗಿ ಚಾಲನೆ ನೀಡಲಾಗುತ್ತಿದೆ ಎಂದರು.
ಕಾಮಗಾರಿ ನಿಗದಿತ ಅವಧಿಯಲ್ಲಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ, ಜನರ ನಿರೀೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ಪ್ರಮುಖರಾದ ಸುರೇಶ ಮಾಶೆಟ್ಟಿ, ವಿಜಯಕುಮಾರ ಪಾಟೀಲ್​ ಗಾದಗಿ, ಸೂರ್ಯಕಾಂತ ಪಾಟೀಲ, ಹಣಮಂತರಾವ ಪಾಟೀಲ್​, ಡಾ.ವಿರೇಂದ್ರ ಪಾಟೀಲ್​, ಶಾಮರಾವ ಕುಲಕರ್ಣಿ, ಶಿವರಾಜ ಸ್ವಾಮಿ, ಗುರುನಾಥ ರಾಜಗೀರಾ, ಮಲ್ಲಿಕಾರ್ಜುನ ಪಾಟೀಲ್​, ಪರಮೇಶ ಪಾಟೀಲ, ಶಿವು ಪಾಟೀಲ್​, ಶೇಖರ ಕೋಳಾರ, ಸುಧಾಕಾರ ವರ್ಮಾ, ಅರವಿಂದ ಪಾಟೀಲ್​ ಚಿಲ್ಲರ್ಗಿ, ಶಾಂತವೀರ ಪಾಟೀಲ್​, ಓಂಕಾರ ಪಾಟೀಲ್​, ಆಕಾಶ ಅಡ್ಡೆ, ಶಾಂತು ಕಮಲಾಪುರೆ, ಇರಪ್ಪಾ ಅಡ್ಡೆ, ಬಸವರಾಜ ಶೇರಿಕಾರ, ಸಂತೋಷ ಶೇರಿಕಾರ, ಯಲ್ಲಪ್ಪಾ ಬಸಂತಪುರ, ನಾಗರಾಜ ಖೌದೆ ಇತರರಿದ್ದರು.