Road development is necessary for smooth traffic 
ರಾಜ್ಯ

ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿ ಅಗತ್ಯ

ತುಮಕೂರು ಡೆಸ್ಕ್
ಚಿಕ್ಕನಾಯಕನಹಳ್ಳಿ : ಹಲವಾರು ವರ್ಷಗಳಿಂದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕೆಲಸಗಳನ್ನು ವಾಡಲಾಗುತ್ತಿದ್ದು, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಕಲ್ಲುಬಾವಿಪಾಳ್ಯ ಶಾಲಾ ಮುಂಭಾಗ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರೆವೆರಿಸಿ ವಾತನಾಡಿ, ಒಟ್ಟು 1.30 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಮಳೆ ಹಾಗೂ ಪ್ರವಾಹದಿಂದ ಹಾಳಾದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಜ್ಜೆನಹಳ್ಳಿ ಗ್ರಾಮಕ್ಕೆ ಹೋಗುವಂತಹ ಹೇವಾವತಿ ನೀರು ಹರಿಯುವ ಹಳ್ಳದ ಸೇತುವೆಯನ್ನು ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಹೊಸಪಾಳ್ಯ ಮುಖ್ಯರಸ್ತೆಯಿಂದ ವಾಸ್ತಮ್ಮ ದೇವಿ ದೇವಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಗಂಟಗನಪಾಳ್ಯ ರಸ್ತೆಯಲ್ಲಿ ಎಲ್‌ಎಲ್‌ಸಿಗೆ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು 40 ಲಕ್ಷ ರೂ. ವೆಚ್ಚದಲ್ಲಿ ಮತ್ತು ರಾಜಯ್ಯನ ಪಾಳ್ಯದಿಂದ ಅಜ್ಜೆನಹಳ್ಳಿಯವರೆಗೆ ಸಿಸಿ ರಸ್ತೆ ನಿರ್ವಾಣದ ಕಾಮಗಾರಿಗೆ ಭೂಮಿಪೂಜೆ ವಾಡಿಲಾಗಿದೆ. ಕಾಮಗಾರಿ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಅಜ್ಜೇನಹಳ್ಳಿ ತಾಪಂ ವಾಜಿ ಸದಸ್ಯ ರಮೇಶ್ ವಾತನಾಡಿ, ಶಾಸಕರು ಮನೆಬಾಗಿಲಿಗೆ ಮನೆ ಮಗ ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯಲ್ಲಿ ಹಳ್ಳವಿದ್ದು ಅದರಲ್ಲಿ ಹೇವಾವತಿ ನೀರು ಹರಿಯುತ್ತದೆ. ದ್ವಿಚಕ್ರವಾಹನಗಳಲ್ಲಿ ಓಡಾಡಲು ಮತ್ತು ವೃದ್ಧರು ಮಕ್ಕಳು ಓಡಾಡಲು ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಾಗ, ಶಾಸಕರು ಅಂದು ಈ ಸೇತುವೆ ಹಾಗೂ ರಸ್ತೆಯನ್ನು ವಾಡಿಸುವುದಾಗಿ ತಿಳಿಸಿದ್ದರು ಅದರಂತೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದರು.
ಮುಖಂಡರಾದ ಅಶೋಕ್, ಧರ್ಮೆಗೌಡರ, ನಾಗರಾಜು, ಹೇವಾವತಿ, ಮಹೇಶ್, ಮರುಳಿಧರ್, ಗೋವರ್ಧನ್, ಲಿಂಗರಾಜು ಎಚ್.ಎಂ, ಸುನಂದಾ, ವೆಂಕಟಪ್ಪ ಪಿಡಿಒ ಪರಶುರಾಮ್, ಬೈರಪ್ಪ ಇತರರು ಇದ್ದರು.