ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಶತಮಾನದ ಹಿನ್ನೆಲೆಇರುವ ಆರ್‌ಎಂಕೆವಿ ರೇಷ್ಮೆ ಸೀರೆಗಳತಯಾರಿಕಾ ಮತ್ತು ಮಾರಾಟ ಸಂಸ್ಥೆ ಅರಮನೆ ಮೈದಾನದ ಚಾಮರ ವಜ್ರ ಆವರಣದಮುಕ್ತಾ ಸಭಾಂಗಣದಲ್ಲಿ ಆಯೋಜಿಸಿದ್ದವಿಶಿಷ್ಟ ರೇಷ್ಮೆ ಸೀರೆಗಳಪ್ರದರ್ಶನಕ್ಕೆ ಜಪಾನ್ ಕಾನ್ಸುಲೇಟ್ಜನರಲ್ ಹಿರೋಷಿ ನವಾಟ ಚಾಲನೆನೀಡಿದರು.
ಇತ್ತೀಚೆಗೆಸೀರೆ ಧರಿಸುವವರ ಸಂಖ್ಯೆಕಡಿಮೆಯಾಗುತ್ತಿದ್ದು, ಸೀರೆಧರಿಸುವ ಗೀಳನ್ನು ಹೆಚ್ಚಿಸುವಉದ್ದೇಶದಿಂದ ಈ ಪ್ರದರ್ಶನವನ್ನುಆಯೋಜಿಸಲಾಗಿದೆ ಎಂದು ಸಂಸ್ಥೆಯನಿರ್ದೇಶಕ ಶಂಕರಕುಮಾರ್ ಸ್ವಾಮಿಹೇಳಿದರು. ಮುಂಬರುವವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿಮಹಿಳೆಯರು ಉತ್ತಮ ಗುಣಮಟ್ಟದ,ವಿನ್ಯಾಸದ ಸೀರೆಗಳನ್ನುಪಡೆದುಕೊಳ್ಳಲು ಈ ಪ್ರದರ್ಶನಪ್ರೇರಣೆ ನೀಡಲಿ ಎಂದು ತಿಳಿಸಿದರು.
ಆರ್‌ಎಂಕೆವಿ
102
ಆರ್‌ಎಂಕೆವಿವೆಡ್ಡಿಂಗ್ ಸಿಲ್ಕ್ ಸ್ಯಾರಿಗೆಪ್ರಸಿದ್ಧವಾಗಿರುವ ಸಂಸ್ಥೆ.ಕಳೆದ 102 ವರ್ಷಗಳಿಂದಭಾರತೀಯ ಸಂಸ್ಕೃತಿ, ಶಿಲ್ಪಕಲೆ,ಪರಂಪರೆಯನ್ನುಸೂಕ್ಷ್ಮವಾಗಿ ಅವಲೋಕಿಸಿ ಅವುಗಳನ್ನುರೇಷ್ಮೆ ಸೀರೆಗಳ ಮೇಲೆ ಮೂಡಿಸುವಮೂಲಕ ಹಲವು ದಾಖಲೆಗಳನ್ನು ಮಾಡಿದೆ.ಈವರೆಗೆ ಆರ್‌ಎಂಕೆವಿಎಕ್ಸ್‌ಕ್ಸೂಸಿವ್ ಆಗಿ 120ಕ್ಕೂಹೆಚ್ಚು ನವೀನ ರಚನೆಗಳನ್ನುಮಾಡಿದೆ. ಆರ್‌ಎಂಕೆವಿವಿನ್ಯಾಸಕ್ಕೆ ಎರಡು ಬಾರಿ ರಾಷ್ಟ್ರೀಯಪ್ರಶಸ್ತಿ, ಗಿನ್ನೆಸ್ವಿಶ್ವದಾಖಲೆ, ಹಲವುಪೇಟೆಂಟ್‌ಗಳು ದೊರಕಿವೆ. ಚೆನ್ನೈ,ತಿರುನಲ್ವೇಲಿ,ಕೊಯಮತ್ತೂರು ಮತ್ತುಬೆಂಗಳೂರಿನ ಓರಾಯನ್ ಮಾಲ್‌ನಲ್ಲಿವ್ಯಾಪಾರ ಮಳಿಗೆಯನ್ನು ಹೊಂದಿದೆ.
ಬೇರೆಯಾವುದೇ ರೇಷ್ಮೆ ಸೀರೆಗೆಸರಿಸಾಟಿಯಾಗಲಾರದ ಹಲವು ಡಿಸೈನ್‌ಗಳುಆರ್‌ಎಂಕೆವಿ ಸೀರೆಗಳ ವಿಶೇಷತೆಯಾಗಿದೆ.ಆರ್‌ಎಂಕೆವಿಸಂಗ್ರಹದಲ್ಲಿ ಹಂಸದಮಯಂತಿ,ಗ್ರಾಂಡ್ ರಿವರ್ಸಿಬಲ್,ವಿಶ್ವದ ಮೊದಲಲಾಂಗೆಸ್ಟ್ ಥೀಮ್ ರೇಷ್ಮೆ ಸೀರೆ,ನೈಸರ್ಗಿಕ ಬಣ್ಣದರೇಷ್ಮೆ ಸೀರೆ, ಶೇ.40ಹಗುರವಾದ ‘ಲಿನೋ’ರೇಷ್ಮೆ ಸೀರೆ, ಪಿಯೋನೀರಿಂಗ್ವಿನ್ಯಾಸಗಳು ಪ್ರಸಿದ್ಧವಾಗಿವೆ.
ಕರ್ನಾಟಕದಕಲೆ, ಸಾಹಿತ್ಯಮತ್ತು ವಾಸ್ತುಶಿಲ್ಪದ ಪರಂಪರೆಯಿಂದಸ್ಪೂರ್ತಿ ಪಡೆದು, ಕರಾವಳಿಯಕಾವಿಕಲೆ, ಬೇಲೂರುಹಳೇಬೀಡು ದೇವಾಲಯದ ಶಿಲ್ಪಕಲೆ,ಹಸೆ ಮತ್ತು ಹಚ್ಚೆಚಿತ್ತಾರ,
ಮೈಸೂರುಅರಮನೆ, ರಾಜಲಾಂಛನಗಂಡಬೇರುಂಡ, ಕೆಳದಿರಾಮೇಶ್ವರ ದೇವಾಲಯದ ಗಂಡಬೇರುಂಡಶಿಲ್ಪದ ಪಲ್ಲು ಹೀಗೆ ಹಲವುಕಲಾಕೃತಿಗಳು ಸೀರೆಯಲ್ಲಿ ಮೂಡಿಬಂದಿವೆ. ಹಾಗೂಭಾರತ ಮತ್ತು ಜಪಾನ್ ನಡುವಿನಸಾಂಸ್ಕೃತಿಕ ಸಾಮ್ಯತೆಯನ್ನುಪ್ರತಿಬಿಂಬಿಸುವ ಜಪಾನ್ ಕಲೆಯನ್ನುಸೀರೆಯಲ್ಲಿ ನೇಯಲಾಗಿದೆ.