ಕೊಳ್ಳೇಗಾಲ ತಾಲೂಕು ಬಲಗೈ ಸಮುದಾಯ ಒಕ್ಕೂಟ ಸಮಿತಿ ರಚನೆ ಸಂಬಂಧ ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಫೆ.28 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಸಭೆಯ ಬಗ್ಗೆ ಶುಕ್ರವಾರ ಪಟ್ಟಣದ ಹಳೇ ಪ್ರವಾಸಿ ಮಂದಿ ರದಲ್ಲಿ ಮುಖಂಡರು ಸಭೆ ಸೇರಿ ಚರ್ಚಿಸಿದರು.  
ರಾಜ್ಯ

ಬಲಗೈ ಸಮುದಾಯದ ಸಭೆ ಇಂದು

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಬಲಗೈ ಸಮುದಾಯ ಒಕ್ಕೂಟ ಸಮಿತಿ ರಚನೆ ಮಾಡುವ ಸಂಬಂಧ ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಫೆ.28 ರಂದು ಬೆಳಗ್ಗೆ 10 ಗಂಟೆಗೆ ಸಭೆ ಆಯೋಜನೆ ಮಾಡಲಾಗಿದ್ದು, ಸಮುದಾಯದ ಕಸಬಾ, ಗಡಿ, ಕಟ್ಟೆಯಜಮಾನರು, ವಿವಿಧ ಗ್ರಾಮಗಳ ಯಜಮಾನರು, ಮುಖಂಡರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ನೀಡಬೇಕೆಂದು ಮುಖಂಡ ನಟರಾಜ ಮಾಳಿಗೆ ಕೋರಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯ ಮುಖಂಡರು ಶುಕ್ರವಾರ ಸಭೆ ನಡೆಸಿದ ಬಳಿಕ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಎಸ್. ರಮೇಶ್ ಮಾತನಾಡಿ, ಬಲಗೈ ಸಮುದಾಯ ಒಗ್ಗೂಡಬೇಕಿದೆ. ಸಮುದಾಯಕ್ಕೆ ತೊಂದರೆಯಾದಾಗ ಎಲ್ಲರೂ ನಿಲ್ಲಬೇಕಿದೆ. ಒಕ್ಕೂಟ ರಚನೆಯ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಮುಖಂಡರು ಆಗಮಿಸಬೇಕೆಂದು ಮನವಿ ಮಾಡಿದರು. ಮುಖಂಡ ಪ್ರಕಾಶ್ ಬಸ್ತೀಪುರ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಬಲಗೈ ಸಮುದಾಯ ಒಕ್ಕೂಟ ರಚನೆ ಆಗಬೇಕಿದೆ. ಇದಕ್ಕೆ ಸಮುದಾಯದ ಜನರ ಅಭಿಪ್ರಾಯ ಅಗತ್ಯವಿದ್ದು, ಈ ಸಂಬಂಧ ಸಭೆಗೆ ಅಧಿಕ ಸಂಖ್ಯೆಯಲ್ಲಿ ಮುಖಂಡರು ಆಗಮಿಸಬೇಕೆಂದು ಮನವಿ ಮಾಡಿದರು. ಜಿ.ಪಂ ಮಾಜಿ ಸದಸ್ಯ ಕಮಲ್ ನಾಗರಾಜು ಮಾತನಾಡಿ, ಒಳ ಮೀಸಲಾತಿ ಅನ್ಯಾಯ ಖಂಡಿಸಿ ಕೊಳ್ಳೇ ಗಾಲದಲ್ಲಿ ನಡೆಸಿದ ಹೋರಾಟ ಯಶಸ್ವಿಯಾಗಿದೆ. ಅಂತೆಯೇ, ಬಲಗೈ ಸಮುದಾಯ ಒಕ್ಕೂಟ ರಚನೆ ಮೂಲಕ ಸಮಾಜದ ಹಿತಕಾಯುವ ಕೆಲಸವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಚಂದು, ಮುಖಂಡರಾದ ನಾಗರಾಜು, ಪುಟ್ಟಬುದ್ಧಿ, ಜಾಕಿ ಸುರೇಶ್, ನಿಂಗರಾಜು ಉತ್ತಂಬಳ್ಳಿ, ದಶರಥ್, ಚಾಮರಾಜು, ದಿಲೀಪ್ ಮತ್ತಿತರಿದ್ದರು.