Riders are required to wear helmets.
ಬಾಗೇಪಲ್ಲಿ: ಬೈಕ್ ಸವಾರರ ಆಯುಷ್ಯ ದೀರ್ಕಾಲ ಉಳಿದು ತನ್ನ ಕುಟುಂಬ ಸದಸ್ಯರು ಸಂತೋಷದ ಜೀವನ ಸಾಗಿಸಬೇಕಾದರೆ ಚಾಲನಾ ಸಮಯದಲ್ಲಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಹವ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒಕ್ಕಲಿಗರ ಸಂದ ರಾಜ್ಯ ನಿರ್ದೇಶಕ ಟಿ.ಕೋನಪರೆಡ್ಡಿ ತಿಳಿಸಿದರು.
ತಾಲೂಕಿನ ತಿಮ್ಮಂಪಲ್ಲಿ, ಗೊರ್ತಪಲ್ಲಿ, ನಾರೇಮದ್ದೇಪಲ್ಲಿ, ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಕ್ ಸವಾರರಿಗೆ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ಯಿಂದ ಆಯೋಜಿಸಿದ್ದ ಉಚಿತ ಹೆಲ್ಮಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್ಯಿಂದ ಹೆಲ್ಮೆಟ್ ಉಚಿತ ವಿತರಣೆ ಮಾಡುತ್ತಿದ್ದಾರೆಂದು ಸುರಕ್ಷತೆ ಬಗ್ಗೆ ರ್ನಿಲಕ್ಷ$್ಯ ತೋರಬೇಡಿ. ಅತಿವೇಗ, ಅಜಾಗರೂಕತೆ, ಮೊಬೈಲ್ ಬಳಕೆ ಮಾಡಿಕೊಂಡು ವಾಹನ ಚಾಲನೆ ಮಾಡುವುದು ಅಪಾಯಕಾರಿ. ಬಹುತೇಕ ಯುವಕರು ಹೇರ್ ಸ್ಟೆಲ್ ಹಾಳಗುತ್ತದೆ ಎಂಬ ಕಾರಣಕ್ಕಾಗಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವ ವೇಳೆ ಸಂಭವಿಸುವ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮೃತಪಟ್ಟಿರುವ ಪ್ರಕರಣಗಳೆ ಹೆಚ್ಚು ದಾಖಲಾಗಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಬೇಡಿ ಎಂದರು.
ಎನ್ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಬೈಕ್ ಸವಾರರ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ. ಪೊಲೀಸ್ ಇಲಾಖೆ ಆದೇಶಕ್ಕೆ ಪುಷ್ಠಿ ನೀಡುವಂತೆ ಈ ಭಾಗದ ಸಂಸದ ಡಾ.ಕೆ.ಸುಧಾಕರ್ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ಲಾನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ 28 ಗ್ರಾಮ ಪಂಚಾಯಿತಿಗಳು ಪೂರ್ಣಗೊಂಡಿದ್ದು 5 ಗ್ರಾಮ ಪಂಚಾಯಿತಿಗಳು ಮಾತ್ರ ಉಳಿದ್ದು ಶ್ರೀವೇ ಸೇವಾ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದರು.
ಮುಖಂಡರಾದ ಬಿ.ವಿ.ಪಾಪಿರೆಡ್ಡಿ, ಚಂದ್ರಶೇಖರರೆಡ್ಡಿ, ಡಿ.ವಿ.ಕೃಷ್ಣಪ್ಪ, ಮದ್ದಿರೆಡ್ಡಿ, ಕರಿಪಿರೆಡ್ಡಿ, ವೆಂಕಟರೆಡ್ಡಿ, ಸೂರಿ, ಶೇಷಾರೆಡ್ಡಿ, ಅಯೂಬ್ಸಾಬ್, ಕೊಂಡಾರೆಡ್ಡಿ, ಕೇಶವರೆಡ್ಡಿ, ಕದಿರಿನಾಯ್ಡು, ಅಮರ್, ಶ್ರೀನಾಥ್, ಬಾಬುರೆಡ್ಡಿ, ವಕೀಲ ಶ್ರೀನಿವಾಸ್, ಮಹೇಂದ್ರ, ಅನಿಲ್, ರವಿ, ಪ್ರಶಾಂತ್ ಮತ್ತಿತರರು ಇದ್ದರು.