ಚಿತ್ತಾಪುರದ ಪಿಎಲ್ಡಿ ಬ್ಯಾಂಕ್ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್ ದಂಪತಿಯನ್ನು ಸತ್ಕರಿಸಲಾಯಿತು. ಭೀಮಣ್ಣ ಸಾಲಿ, ವಿರೂಪಾಕ್ಷಪ್ಪ ಗಡ್ಡದ್, ಅಶೋಕ ನಿಪ್ಪಾಣಿ ಇತರರಿದ್ದರು.
- ಅಧ್ಯಕ್ಷ ಭೀಮಣ್ಣ ಸಾಲಿ ಬಣ್ಣನೆ
- ಚಿತ್ತಾಪುರದಲ್ಲಿ ಸೇವಾನಿವೃತ್ತಿ ಸಮಾರಂಭ
ಚಿತ್ತಾಪುರ : ಪಿಎಲ್ಡಿ ಬ್ಯಾಂಕ್ನ ಏಳಿಗೆಯಲ್ಲಿ ವ್ಯವಸ್ಥಾಪಕ ಬಸವರಾಜ ರೇವೂರ್ ಅವರ ಶ್ರಮ ಅಪಾರವಾಗಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಶ್ಲಾಸಿದರು.
ಪಿಎಲ್ಡಿ ಬ್ಯಾಂಕ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 13 ವರ್ಷಗಳಿಂದ ಬ್ಯಾಂಕ್ನಲ್ಲಿ ಸಾಲಗಾರರ ವಸೂಲಿ ಹೆಚ್ಚು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಾಮಾಣಿಕ ಕಾರ್ಯದಿಂದಾಗಿ ಜಿಲ್ಲೆಯಲ್ಲಿ ಚಿತ್ತಾಪುರ ಬ್ಯಾಂಕ್ಗೆ 3ನೇ ಸ್ಥಾನ ಲಭಿಸಿದೆ ಎಂದು ಹೇಳಿದರು.
ಸಹಕಾರ ಸಂದ ಜಿಲ್ಲಾ ವ್ಯವಸ್ಥಾಪಕ ಅಜಯ ಮಾಲಿಪಾಟೀಲ್, ಉಪಾಧ್ಯಕ್ಷ ವಿರೂಪಾಕ್ಷಪ್ಪ ಗಡ್ಡದ್, ನಿರ್ದೇಶಕರಾದ ಅಶೋಕ ನಿಪ್ಪಾಣಿ, ಅಣ್ಣಾರಾವ ಪಾಟೀಲ್ ಮುಡಬೂಳ, ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್ ಮಾತನಾಡಿದರು.
ಪ್ರಮುಖರಾದ ರಾಜಶೇಖರ ಕೊಂಕನಳ್ಳಿ, ಮಹಾದೇವ ನಾಶಿ, ರಾಜಶೇಖರಗೌಡ ಸಂಕನೂರ, ಹರಳಯ್ಯ ಬಡಿಗೇರ, ವೀರಭೂಷಣ ಸದಲಾಪುರ, ದಯಾನಂದ, ಶಾರದಾ, ಸಂತೋಷ ರಾಠೋಡ್ ಇತರರಿದ್ದರು.
ಸಂಗಣ್ಣ ಬಂಡಿ ನಿರೂಪಣೆ ಮಾಡಿದರು. ಕುಸುಮಾವತಿ ವಂದಿಸಿದರು.