ಪಿಂಚಣಿ ಬಿಡುಗಡೆ ವಿಳಂಬ ಖಂಡಿಸಿ ಗುಲ್ಬರ್ಗ ವಿವಿ ನಿವೃತ್ತ ನೌಕರರ ಸಂದ ಪದಾಧಿಕಾರಿಗಳು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂದ ಉಪಾಧ್ಯಕ್ಷ ಸಿದ್ರಾಮಪ್ಪ ಹೊದಲೂರ, ಪದಾಧಿಕಾರಿಗಳಾದ ಆರ್.ಎಸ್.ತಲ್ಲಳ್ಳಿ, ಸಿ.ಎಸ್.ಅರಿಕೇರಿ, ರಾಮಚಂದ್ರ ಪಿ.ರೇಣಕೆ, ಸಿದ್ರಾಮ ಬೆಳಮಗಿ, ವಿ.ಬಿ.ಕನ್ನೂರ, ಎಸ್.ಮಲ್ಲಿಕಾರ್ಜುನ ಇತರರಿದ್ದರು.
- ಪಿಂಚಣಿ ವಿಳಂಬಕ್ಕೆ ನಿವೃತ್ತರ ಆಕ್ರೋಶ
ಕಲಬುರಗಿ: ಪ್ರತಿ ತಿಂಗಳು ಸಕಾಲಕ್ಕೆ ಪಿಂಚಣಿ ಪಾವತಿಸದೆ ವಿಳಂಬ ನೀತಿ ಖಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದಿಂದ ವಿವಿ ಆಡಳಿತ ಕಚೇರಿ ಎದುರು ಗುರುವಾರ ನಡೆಯಿತು.
ಸಂಘದ ಮುಖಂಡ ಎಂ.ಬಿ.ಸಜ್ಜನ್ ಮಾತನಾಡಿ, ವಿವಿಯಲ್ಲಿ 600ಕ್ಕೂ ಹೆಚ್ಚು ಶಿಕ್ಷಕ ಹಾಗೂ ಶಿಕ್ಷಕೇತರ ನಿವೃತ್ತ ನೌಕರರಿದ್ದಾರೆ. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಿಂಚಣಿ ಮೊತ್ತ ಪಾವತಿಸದ್ದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
2026ರ ಜೂನ್ ಪಿಂಚಣಿ ಈವರೆಗೂ ಪಾವತಿಸದಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನಿವೃತ್ತಿ ವೇತನ ಸಕಾಲಕ್ಕೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂದ ಉಪಾಧ್ಯಕ್ಷ ಸಿದ್ರಾಮಪ್ಪ ಹೊದಲೂರ, ಪದಾಧಿಕಾರಿಗಳಾದ ಆರ್.ಎಸ್. ತಲ್ಲಳ್ಳಿ, ಸಿ.ಎಸ್. ಅರಿಕೇರಿ, ರಾಮಚಂದ್ರ ಪಿ.ರೇಣಕೆ, ಸಿದ್ರಾಮ ಬೆಳಮಗಿ, ವಿ.ಬಿ. ಕನ್ನೂರ, ಎಸ್. ಮಲ್ಲಿಕಾರ್ಜುನ ಇತರರಿದ್ದರು. ಬೇಡಿಕೆಗಳ ಮನವಿಪತ್ರವನ್ನು ವಿವಿ ಕುಲಸಚಿವರಿಗೆ ಸಲ್ಲಿಸಲಾಯಿತು.