Retired soldier dies in accident
ಚಿಂತಾಮಣಿ: ರಾಷ್ಟ್ರೀಯ ಹೆದ್ದಾರಿ ಎಂ.ಜಿ.ರಸ್ತೆಯ ಬಜಾಜ್ ಶೋರೂಂ ಬಳಿ ಬೈಕ್ಗೆ ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿವೃತ್ತ ಸೈನಿಕ, ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸ್ ಜೀಪ್ ಚಾಲಕ ಶ್ರೀನಿವಾಸ್(45)ಮೃತ. ಮೃತನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ತಾಲೂಕಿನ ಇರಗಂಪಲ್ಲಿ ಗ್ರಾಪಂನ ಗುಂದಿಗೆರೆಯವರಾದ ಇವರು, ಪ್ರಸ್ತುತ ನಗರದ ಅಂಜನಿ ಬಡಾವಣೆಯಲ್ಲಿ ವಾಸವಿದ್ದರು.
ಶ್ರೀನಿವಾಸ್ ಬುಧವಾರ ಬೆಳಗ್ಗೆ ತಿಮ್ಮಸಂದ್ರದ ಗ್ರಾಮಾಂತರ ಠಾಣೆಗೆ ಕರ್ತವ್ಯಕ್ಕೆ ಬೈಕ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ್ ಬಸ್ ಡಿಕ್ಕಿಯಾಗಿ ತಲೆಯ ಮೇಲೆ ಹರಿದಿದೆ. ಡಿವೈಎಸ್ಪಿ ಮುರಳೀಧರ್, ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸ್ ಅಧಿಕಾರಿಗಳಾದ ವಿಜಿಕುಮಾರ್, ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗುಂದಿಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು.