ಕಮಲನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಯೋನಿವೃತ್ತಿ ಹೊಂದಿದ ನೌಕರರ ಮರು ಸಂಗಮ ಕಾರ್ಯಕ್ರಮವನ್ನು ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಉದ್ಘಾಟಿಸಿದರು. ಎಸ್​.ಎ.ಹೂಗಾರ, ಡಾ.ವಿಶ್ವನಾಥ ಚಿಕ್ಕಮುರ್ಗೆ, ಡಾ.ಮಲ್ಲಿಕಾರ್ಜುನ ಭಂಡೆ, ಚಂದ್ರಕಾಂತ ಮಿರ್ಚೆ, ಎಸ್​.ಎಸ್​.ರಾಂಪುರೆ, ಪ್ರಕಾಶ ಮಾನಕಾರಿ ಇತರರಿದ್ದರು. 
ರಾಜ್ಯ

ನಿವೃತ್ತರು ಸಮಾಜದ ದೊಡ್ಡ ಆಸ್ತಿ

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಮಠ ಅಭಿಪ್ರಾಯ
  • ಕಮಲನಗರದಲ್ಲಿ ಮರು ಸಂಗಮ ಕಾರ್ಯಕ್ರಮ
 ಕಮಲನಗರ: ಒಂದು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಟ್ಟಡಗಳಿದ್ದರಷ್ಟೇ ಸಾಲದು, ಅಲ್ಲಿನ ಬೋಧಕ&ಬೋಧಕೇತರ ಸಿಬ್ಬಂದಿಯ ದಶಕಗಳ ನಿಸ್ವಾರ್ಥ ಸೇವೆ ಮತ್ತು ಶ್ರಮ ಅಡಗಿರುತ್ತದೆ. ನಿವೃತ್ತರು ಸಮಾಜದ ದೊಡ್ಡ ಆಸ್ತಿ ಇದ್ದಂತೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಶಾಂತಿವರ್ಧಕ ಪದವಿಪೂರ್ವ ಕಾಲೇಜು ಮತ್ತು ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕಲಿತು ವಯೋನಿವೃತ್ತಿ ಹೊಂದಿದ ನೌಕರರ ಮರು ಸಂಗಮ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿದ ಅವರು, ಇಂದು ನಿವೃತ್ತಿ ಹೊಂದಿರುವ ಸಿಬ್ಬಂದಿ ಈ ಸಂಸ್ಥೆಯ ಆಧಾರಸ್ತಂಭಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ನಿವೃತ್ತರಾಗುತ್ತಿರುವ ಸಿಬ್ಬಂದಿಯ ತಾಳ್ಮೆ ಮತ್ತು ಮಾರ್ಗದರ್ಶನ ಮೆಚ್ಚುವಂಥದ್ದು. ವಯೋನಿವೃತ್ತಿ ವೃತ್ತಿಗೆ ಸೀಮಿತವೇ ಹೊರತು, ಅವರ ಜ್ಞಾನ ಮತ್ತು ಅನುಭವಗಳಿಗಲ್ಲ ಎಂದರು.
ನಿವೃತ್ತ ಶಿಕ್ಷಕ ಎಸ್​.ಎ.ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಶ್ವನಾಥ ಚಿಕ್ಕಮುರ್ಗೆ, ಉದಗೀರ ವೈದ್ಯ ಡಾ.ಮಲ್ಲಿಕಾರ್ಜುನ ಭಂಡೆ, ನಿವೃತ್ತ ಅಧೀಕ್ಷಕ ಇಂಜಿನಿಯರ್​ಗಳಾದ ಚಂದ್ರಕಾಂತ ಮಿರ್ಚೆ, ಪ್ರಕಾಶ ಕೆ.ಎಚ್​., ಪ್ರಮುಖರಾದ ಬಾಬುರಾವ ಪವಾರ್​, ಪ್ರೊ.ಎಸ್​.ಎನ್​. ಶಿವಣಕರ್​, ವಿಜಯಕುಮಾರ ಗಂಗು, ಬಸವರಾಜ ಪಾಟೀಲ್​, ದೇವೇಂದ್ರ ಪಾಟೀಲ್​, ಜಗದೀಶ ಇತರರಿದ್ದರು.
ನಿವೃತ್ತ ಪ್ರಾಚಾರ್ಯ ಎಸ್​.ಎಸ್​. ರಾಂಪುರೆ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಕ ಪ್ರಕಾಶ ಮಾನಕಾರಿ ವಂದಿಸಿದರು. ನಿವೃತ್ತ ಪ್ರಾಂಶುಪಾಲ ಶಿವಾಜಿ ಆರ್​.ಎಚ್​. ನಿರೂಪಣೆ ಮಾಡಿದರು.