ಸರ್ಕಾರಿ ಆಸ್ತಿ ರಕ್ಷಣೆ ಅಧಿಕಾರಿಗಳ ಜವಾಬ್ದಾರಿ government
- ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿಕೆ
ಶ್ರೀನಿವಾಸಪುರ: ಸರ್ಕಾರದಿಂದ ಅನುದಾನ ಮಂಜೂರಾಗಿದ್ದರು ಕಟ್ಟಡಗಳು ನಿರ್ಮಿಸಲು ಸ್ಥಳಾವಕಾಶ
ಗೊತ್ತುಪಡಿಸುವುದರಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದರು. government
ತಾಲೂಕು ಕಚೇರಿಯಲ್ಲಿ ನೂತನವಾಗಿ ನೇಮಕವಾಗಿರುವ ಆಡಳಿತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೊಳತೂರು ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಆಸ್ಪತ್ರೆ ಅಂಗನವಾಡಿ ಶಾಲೆ ಪಶು ಆಸ್ಪತ್ರೆ, ಸರ್ಕಾರಿ ಶಾಲೆ ಅಂಚೆ ಕಚೇರಿ ನಿಮಾರ್ಣ ಮಾಡಲು ವಿವಿಧ ಹೆಚ್ಚುವರಿ ಮುಖ್ಯ ಖಾತೆ ಅನುದಾನ ಬಿಡುಗಡೆಯಾಗಿದೆ. ಆದರೆ ಸಂಬಂಧಿಸಿದ ಸರ್ವೇ ನಂಬರ್ 238ರಲ್ಲಿ ಒಂದು ಎಕರೆ 10 ಗುಂಟೆ ಸರ್ಕಾರ ಜಮೀನು ಇದ್ದರೂ ಕೂಡ ಕಂದಾಯ ಇಲಾಖೆ ಕಂದಾಯ ಇಲಾಖೆ, ಸರ್ವೇ ಇಲಾಖೆ ಸ್ಥಳಿಯ ಗ್ರಾಪಂ ಅಧಿಕಾರಿಗಳು ರ್ನಿಲಕ್ಷ$್ಯ ಜತೆಗೆ ತಹಸೀಲ್ದಾರ್ ನಿಮಗೂ ಹಲವು ಬಾರಿ ಹೇಳಿದರೂ ಯಾಕೆ ಮುಂದೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಸ್ಥಳಿಯರ ಪ್ರಭಾವ ಅಡ್ಡಿಪಡಿಸುವುದಾದರೆ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಕರೆಸಿ ಪೊಲೀಸ್ ಸಿಬ್ಬಂದಿಯನ್ನು ಇಟ್ಟುಕೊಂಡು ಸರ್ವೇ ಮಾಡಿ ನಾನಿದ್ದೇನೆ ಎಂದರು.
ತಾಲೂಕಿನ ಸರ್ಕಾರಿ ಆಸ್ತಿ ಕೆರೆಗಳನ್ನು ಉಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕು. ಜತೆಗೆ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಬಾಕಿ ಇರುವ ಕೆಲಸಗಳು ಪೂರ್ಣ ಮಾಡಬೇಕು ಎಂದರು.
ಗ್ರಾಮೀಣ ಭಾಗದ ಎಲ್ಲ ಹಳ್ಳಿಗಳಿಗೂ ರಸ್ತೆ ಸಂಪರ್ಕವಿರುವ ರಸ್ತೆಗಳ ಎಡಬಲದಲ್ಲಿ ಜಂಗಲ್ ಸ್ವಚ್ಛತೆ ಪೂರ್ಣ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಂಪೌಂಡ್, ಶೌಚಗೃಹ ದುರಸ್ತಿ ಕಟ್ಟಡಗಳನ್ನು ತೆರೆವುಗೊಳಿಸಲು ಆಡಳಿತ ಅಧಿಕಾರಿಗಳು, ಪಿಡಿಒಗಳು ಶ್ರಮವಹಿಸಬೇಕು ಎಂದರು.
ಅವಲಕುಪ್ಪ ಗ್ರಾಮದಲ್ಲಿ ಅಂಗನವಾಡಿ ಶಾಲೆ ಕಟ್ಟಡ ಮತ್ತು ಶೌಚಗೃಹ ನಿರ್ಮಿಸಲು ಸರ್ಕಾರಿ ಶಾಲೆಯ ಆವರಣದಲ್ಲಿ ಸಳಾವಕಾಶವಿದ್ದು, ನಿಯಮ ಅನುಸಾರ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಮನವಿಯಂತೆ ಶಾಸಕರು ಸಂಬಂಧಿಸಿದ್ದ ಸಿಡಿಪಿಯು ಮತ್ತು ಪಿಡಿಒಗೆ ತಿಳಿಸಿದರು.
ತಾಲೂಕಿನ ಅಭಿವೃದ್ಧಿಪಡೆಸಲು ಜನರ ಸಮಸ್ಯೆಗಳನ್ನು ಆಲಿಸಲು ಶಾಸಕರ ನಡೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಿಗೆ ಮುಂದಿನ ವಾರ ಪ್ರವಾಸ ಮಾಡಲು ಚರ್ಚಿಸಿ ತೀಮಾರ್ನಿಸಲಾಯಿತು. ಪ್ರತಿನಿತ್ಯ ನಾಲ್ಕು ಪಂಚಾಯಿತಿ ಪೂರ್ಣ ಮಾಡಲು ಮತ್ತು ಕೇಂದ್ರ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಗಳು ನಡೆಸಲು ಆಗಬೇಕು ಇದರ ಬಗ್ಗೆ ಹಳ್ಳಿಗಳಲ್ಲಿ ಜನರಿಗೆ ಮಾಹಿತಿ ಮುಂಚಿತವಾಗಿ ನೀಡಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.