ಯಾದಗಿರಿಯಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್ ತುಕರಾಮ ಪಾಂಡ್ವೆ ಮಾತನಾಡಿದರು. ಜಿಪಂ ಸಿಇಒ ಲವೀಶ್ ಒರ್ಡಿಯಾ, ಎಡಿಸಿ ರಮೇಶ ಕೋಲಾರ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ
- ಯಾದಗಿರಿ ಡಿಸಿ ಕಚೇರಿಯಲ್ಲಿ ಸಭೆ
ಯಾದಗಿರಿ: ಜಿಲ್ಲೆಯಲ್ಲಿ ಕುಡಿವ ನೀರಿನ ಸಮರ್ಪಕ ನಿರ್ವಹಣೆ, ಇಲಾಖಾ ವ್ಯಾಪ್ತಿಯಲ್ಲಿ ಸಮಗ್ರ ಕ್ರಿಯಾ ಯೋಜನೆ, ಕರ್ತವ್ಯ ಆ್ಯಪ್ನಲ್ಲಿ ಕಡ್ಡಾಯ ನೋಂದಣಿ ಸೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಸೂಚಿಸಿದರು.
ಮುಖ್ಯಮಂತ್ರಿಗಳ ಅಧ್ಯತೆಯಲ್ಲಿ ಇತ್ತೀಚೆಗೆ ಬೆಂಗಳೂರನಲ್ಲಿ ಕರೆದಿದ್ದ ಎಲ್ಲ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಉಪ ಸಂರಣಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ರ್ನಿಣಯಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ್ದಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವಕ್ಲಬ್ಗಳ ರಚನೆಗೆ ಸೂಚಿಸಲಾಗಿದ್ದು, ಸರ್ಕಾರದಿಂದ ಸೂಕ್ತ ಮಾರ್ಗಸೂಚಿ ಬರಲಿವೆ. ಜಾತ್ಯಾತಿತ ಭಾವನೆ, ನಾಯಕತ್ವ, ಉದ್ಯೋಗ, ಕ್ರೀಡೆ, ಫಿಟ್ನೆಸ್ ಹಾಗೂ ಸಮುದಾಯ ಸೇವೆ ಆಲೋಚನೆ ಈ ಅಭಿಯಾನದಡಿ ಅಡಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಸಜ್ಜುಗೊಳ್ಳುವಂತೆ ತಾಕೀತು ಮಾಡಿದರು.
ಸಾರ್ವಜನಿಕ ಅಹವಾಲುಗಳನ್ನು ನಿಗದಿತ ಅವಧಿಯೊಳಗೆ ಶ್ರೀ ವಿಲೇವಾರಿಗೆ ಗಮನ ಹರಿಸಬೇಕು. ಐಪಿಜಿಆರ್ಎಸ್, ಸಕಾಲ, ಇತರೆ ಕುಂದುಕೊರತೆ ಅರ್ಜಿಗಳನ್ನು ತಣ ವಿಲೇವಾರಿ ಮಾಡಬೇಕು. ಜನಸ್ಪಂದನ ಮೂಲಕ ಪರಿಹರಿಸುವ ಉದ್ದೇಶ ಸಹ ಹೊಂದಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ತಿಳಿಸಿದರು.
ಮುಖ್ಯಮಂತ್ರಿಗಳು ಸೂಚಿಸಿದಂತೆ ಭೂ&ಗ್ಯಾರಂಟಿ ಅಭಿಯಾನದಡಿ ಬಿ&ಖಾತಾದಿಂದ ಎ ಖಾತಾಗೆ ಸಮಗ್ರ ಪರಿವರ್ತನೆಗೆ ಕ್ರಮ ಆಗಬೇಕು. ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು ಜಮೀನುಗಳ ಆರ್ಟಿಸಿ ಅನುಷ್ಠಾನ, ಬಾಕಿ ಇರುವ ಕುರಿತು ಮುಂದಿನ ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರ್ಡಿಯಾ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಇತರರಿದ್ದರು.
ಅಭಿಯಾನಗಳ ನಿರ್ವಹಣೆಗೆ ಸಮಿತಿ ರಚನೆ
ಸಾರ್ವಜನಿಕ ಕುಂದು&ಕೊರತೆ ವಿಲೇವಾರಿ ಹಾಗೂ ಸರ್ಕಾರ ನಿರ್ಧರಿಸಿದ ಪ್ರತಿ ಅಭಿಯಾನಗಳ ನಿರ್ವಹಣೆಗೆ ಸಮಿತಿ ರಚಿಸಲಾಗುವುದು. ಕಾಲ ಕಾಲಕ್ಕೆ ಈ ಕುರಿತು ಪರಿಶೀಲಿಸಲಾಗುವುದು ಎಂದ ಅವರು, ಪ್ರತಿ ಇಲಾಖಾ ವ್ಯಾಪ್ತಿಯಲ್ಲಿ ತಮ್ಮ ಕೆಲಸಗಳು, ಯೋಜನೆಗಳ ಕುರಿತು ಸಿಟಿಜನ್ಸ್ ಚಾರ್ಟರ್ ನ್ನು ಮುಂದಿನ ಹತ್ತು ದಿನಗಳಲ್ಲಿ ಅಳವಡಿಸಬೇಕು. ಕಚೇರಿಗಳ ಸ್ವಚ್ಛತೆ, ವಿದ್ಯುತ್ ಸೌಕರ್ಯ, ವಿದ್ಯುತ್ ಬ್ಯಾಕ್ಅಪ್ ಸೌಲಭ್ಯ, ಶಾಲಾ&ಕಾಲೇಜು, ಆಸ್ಪತ್ರೆಗಳು, ವಸತಿ ನಿಲಯಗಳು, ಬಸ್ ನಿಲ್ದಾಣ ಹಾಗೂ ಕಚೇರಿಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಸಸಿಗಳನ್ನು ನೆಟ್ಟು ಹಸರೀಕರಣಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಿಂದ ಗರಿಷ್ಠ ನೋಂದಣಿ ಮಾಡಿ
ಮುಂಬರುವ ದಿನಗಳಲ್ಲಿ ಯುವ ಉದ್ಯೋಗ ಸೇತು ಮಿಷನ್, ಜಿಲ್ಲೆಯಿಂದ ಗರಿಷ್ಠ ಉದ್ಯೋಗ ನೋಂದಣಿ, ಒಂದು ಬಾರಿ ವಿದ್ಯುತ್ ಸಂಪರ್ಕ ಪರಿಹಾರ, ಲಾಂತರ ಮನೆಗಳನ್ನು ಔಪಚಾರಿಕ ವಿದ್ಯುತ್ ಜಾಲಕ್ಕೆ ತರುವುದು, ಎಐ ಆಧಾರಿತ ಏಕೀಕೃತ ಹಾಗೂ ಸಮಗ್ರ ದೂರು ಪರಿಹಾರ ವ್ಯವಸ್ಥೆಗಳ ಕುರಿತು ಮಾರ್ಗಸೂಚಿ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಾಂಡ್ವೆ ಸೂಚಿಸಿದರು. ಕರ್ತವ್ಯ ಆ್ಯಪ್ನಲ್ಲಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ನೋಂದಣಿ ಮಾಡುವಂತೆ ನೋಡಿಕೊಳ್ಳಲು ಸೂಚನೆ ನೀಡಿದ ಅವರು, 371 (ಜೆ )ರಡಿ ಇಲಾಖಾವಾರು ಖಾಲಿ ಇರುವ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.