ಪ್ರೊ.ಅಣ್ಣಾರಾವ ಡಿ.  
ರಾಜ್ಯ

ರಾಮಲಿಂಗಾರೆಡ್ಡಿ ಹಿರಿತನಕ್ಕೆ ಗೌರವ ಕೊಡಿ

ಕಲಬುರಗಿ: ಹಿರಿಯರಾದ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನೋಡಿದರೆ, ಅವರ ಹಿರಿತನ ಹಾಗೂ ಅನುಭವಕ್ಕೆ ತಕ್ಕನಾದ ಗೌರವ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಪ್ರೊ.ಅಣ್ಣಾರಾವ ಡಿ. ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ದಶಕಗಳಿಂದ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ಅವರು ಕೇಳುವ ಖಾತೆಯನ್ನು ವಹಿಸಿಕೊಡಬೇಕಾಗಿತ್ತು. ಆದರೆ, ಅವರ ಬೇಡಿಕೆಗೂ ಜಗ್ಗದೆ ಅವರಿಗೆ ಬೇಡವಾದ ಖಾತೆಯನ್ನು ವಹಿಸಿಕೊಟ್ಟಿದ್ದರಿಂದಲೇ ಸಚಿವ ಸ್ಥಾನ ತ್ಯಜಿಸಲು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಹಾಗೂ ಡಿಸಿಎಂ ಮತ್ತು ಪಕ್ಷದ ವರಿಷ್ಠ ನಾಯಕರು ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಸ್ಥಾನ ಕಲ್ಪಿಸಿಕೊಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಈ ಬೆಳವಣಿಗೆ ಪಕ್ಷದ ಸಂಟನೆ ಹಾಗೂ ಬೆಳವಣಿಗೆಗೆ ಹೊಡೆತ ಬೀಳಲಿದೆ ಎಂದು ಅಣ್ಣಾರಾವ ತಿಳಿಸಿದ್ದಾರೆ.