ಮುದಗಲ್ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಪ್ರಮುಖರಾದ ಬಾಬು ಕುರಿ, ಮಹಮ್ಮದ್ ಅಲಿ ಕೋರಿ, ಚಾಂದ್ ಪಾಷಾ, ಜಮೀರ್, ಫಿರೋಜ್, ರೋಷನ್, ರುದ್ರಪ್ಪ, ಮುಜಾಹಿದ್, ಸಂಗಪ್ಪ ಹಿರೇಮನಿ, ಉಮೇಶ್ ಆಸಿಹಾಳ, ಅಂಮರೇಷ ಇತರರಿದ್ದರು. 
ರಾಜ್ಯ

ಪಕ್ಷದ ನಿಷ್ಠೆಯಿಂದ ಡಿಕೆಶಿಗೆ ಸಂದ ಗೌರವ

ಮುದಗಲ್:  ಮುಖ್ಯಮಂತ್ರಿಯಾಗಿ ಲೋಕಭವನದಲ್ಲಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ, ಕಾಂಗ್ರೆಸ್ ಬ್ಲಾಕ್, ಕಾಂಗ್ರೆಸ್ ಯುವ ಬ್ರಿಗೇಡ್ ವತಿಯಿಂದ ಪಟಾಕಿ ಸಿಡಿಸಿ ಬುಧವಾರ ಸಂಜೆ ಸಂಭ್ರಮಾಚರಣೆ ಆಚರಿಸಲಾಯಿತು.
ರಾಹುಲ್ ಗಾಂಧಿ ಯುವ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಸೂಲ್ ಮಾತನಾಡಿ, ಪಕ್ಷದ ನಿಷ್ಠೆಗೆ ಡಿಕೆಶಿ ಅವರಿಗೆ ಸಿಎಂ ಸ್ಥಾನ ಸಂದ ಗೌರವ ಎಂದರು. 
ತಳಮಟ್ಟದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದು, ಉತ್ತಮ ಆಡಳಿತ ಮೂಲಕ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಆಡಳಿತ ದಿಕ್ಸೂಚಿಯಾಗಲಿದೆ ಎಂದರು. 
ಮುಖಂಡರಾದ ಸೈಯದ್ ನ್ಯಾಮತ್ ಖಾದ್ರಿ, ಅಜ್ಮೀರ್ ಬೆಳ್ಳಿಕಟ್, ರಾಘವೇಂದ್ರ ಕುದುರಿ, ಶಾಲಂ ಟೈಲರ್, ಖದೀರ್ ಪಾನ್ ವಾಲೆ, ಶರಣಪ್ಪ ಕಟ್ಟಿಮನಿ, ಹುಸೇನ್ ಡೋಂಗ್ರಿ, ಮಹಾಂತೇಶ ವಡ್ಡರ, ರಸೂಲ್ ಜಂಬಾಳಿ ಇತರರಿದ್ದರು.