ತಾಳಿಕೋಟೆ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಅಗ್ನಿ ಶಾಮಕ ಠಾಣೆಯ ನೂತನ ಕಟ್ಟಡವನ್ನು ಶಾಸಕ ಸಿ.ಎಸ್. ನಾಡಗೌಡ ಉದ್ಘಾಟಿಸಿದರು. ಶಕೀಲ ಅಹ್ಮದ್ ಖಾಜಿ, ಅ್ರೆೆಜ ಕಂದಗಲ್ಲು, ಎಂ.ಜಿ. ಪಾಟೀಲ, ಬಿ.ಎನ್. ಹಿಪ್ಪರಗಿ ಮತ್ತಿತರರಿದ್ದರು.
- ಶಾಸಕ ಸಿ.ಎಸ್. ನಾಡಗೌಡ ಭರವಸೆ
- ನೂತನ ಕಟ್ಟಡ ಉದ್ಘಾಟನೆ
ತಾಳಿಕೋಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಅವಘಡ ಹಾಗೂ ಪ್ರಕೃತಿ ವಿಕೋಪ ಸಂಭವಿಸಿದಾಗ ತುರ್ತು ಸೇವೆಯನ್ನು ನೀಡಲು 24 ಗಂಟೆಯವರೆಗೆ ಕಾರ್ಯನಿರ್ವಹಿಸುವ ಠಾಣೆಗೆ ಎಲ್ಲ ಸುಸಜ್ಜಿತವಾದ ಕಟ್ಟಡದ ನಿರ್ಮಾಣಕ್ಕಾಗಿ ವಿಶೇಷ ಆಸಕ್ತಿ ವಹಿಸಿದ ಶ್ರಮದ ಫಲವಾಗಿ ಅನುದಾನ ಬಿಡುಗಡೆಗೊಳಿಸಿ ಕೆಲಸ ಮಾಡಿಸಿದ್ದೇನೆ ಎಂದು ಶಾಸಕ ಅಪ್ಪಾಜಿ ನಾಡಗೌಡ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ವಸತಿ ಗೃಹಗಳ ಅವಶ್ಯಕತೆಯ ಬೇಡಿಕೆ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮಂಜೂರು ಮಾಡಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ, ತಾಳಿಕೋಟೆ ಮತ್ತು ಮುದ್ದೇಬಿಹಾಳ ಅಗ್ನಿ ಶಾಮಕ ಠಾಣೆಗಳಿಗೆ ಡೋಣಿ ನದಿ ಪ್ರವಾಹ ಮತ್ತು ಮುದ್ದೇಬಿಹಾಳಕ್ಕೆ ತಂಗಡಗಿ ಹೊಳೆ ಒಳಗೊಂಡಿರುವುದರಿಂದ ಜಲ ಅವಘಡಕ್ಕೆ ಬೋಟ್‌ಗಳು ಅವಶ್ಯಕತೆ ಇರುವುದರಿಂದ ಕೂಡಲೇ ಬೋಟ್ ವ್ಯವಸ್ಥೆಗೆ ಕ್ರಮ ವಹಿಸುತ್ತೇನೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ, ತಾಳಿಕೋಟೆ ಅಗ್ನಿಶಾಮಕ ಠಾಣೆ ಪ್ರಭಾರಿ ಅ್ರೆೆಜ ಕಂದಗಲ್, ಮುಖಂಡರಾದ ಎಂ.ಜಿ. ಪಾಟೀಲ, ಬಿ.ಎನ್. ಹಿಪ್ಪರಗಿ, ಸುರೇಶ ಧಣಿ ನಾಡಗೌಡ ಬಿಂಜಲಭಾವಿ, ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ ನಾವದಗಿ, ಅಗ್ನಿ ಶಾಮಕ ಠಾಣೆ ಜಿಲ್ಲಾ ಸಬ್ ಇನ್ಸ್‌ಪೆಕ್ಟರ್ ಉಮೇಶ ತಳಕೇರಿ ಮತ್ತಿತರರಿದ್ದರು.