ದುರ್ಬಲರಿಗಾಗಿ ಮೀಸಲಾತಿ ಅಸ್ತ್ರ Reservation
ಮುಳಬಾಗಿಲು: ಹೆಚ್ಚು ವಿಷಯಗಳಲ್ಲಿ ಉನ್ನತ ಪದವಿ ಪಡೆದ ಅಂಬೇಡ್ಕರ್ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎಂದು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಹೇಳಿದರು. Reservation
ನಗರದ ಹೊರವಲಯದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ದುರ್ಬಲ ವರ್ಗದವರಿಗೆ ಮೀಸಲಾತಿ ಕಲ್ಪಿಸಿದರು. ಸಾಮಾಜಿಕ ಸಮಾನತೆ, ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಿದರು. ಅಸ್ಪ-----ೃಶ್ಯತೆಯನ್ನು ಸಂವಿಧಾನದ 17ನೇ ವಿಧಿಯ ಮೂಲಕ ನಿಷೇಧಿಸಿದರು ಎಂದು ತಿಳಿಸಿದರು.
ಅರ್ಥಶಾಸ್ತ್ರಜ್ಞರಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮೂಲ ಪ್ರೇರಕರಾಗಿದ್ದರು. ಅವರ ಆರ್ಥಿಕ ವಿಚಾರಗಳು ದೇಶದ ಅಭಿವೃದ್ಧಿ ನೀತಿಗಳಿಗೆ ಬುನಾದಿಯಾದವು ಎಂದರು.
ಉತ್ತನೂರು ವಿಎಸ್ಎಸ್ಎನ್ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್, ಮುಖಂಡರಾದ ಎಂ.ಸಿ.ಸರ್ವಜ್ಞಗೌಡ, ಮಲ್ಲಿಕಾರ್ಜುನರೆಡ್ಡಿ, ವೆಂಕಟರೆಡ್ಡಿ, ಜಮ್ಮನಹಳ್ಳಿ ಕೃಷ್ಣಪ್ಪ, ಚೌಡಪ್ಪ, ಸಿ.ರಾಮಪ್ಪ, ಕೀಲುಹೋಳಿ ಸತೀಶ್, ಗಣೇಶ್ ಪಾಳ್ಯ ಕಿಟ್ಟಪ್ಪ, ಎಂ.ಎನ್.ಅಭಿಷೇಕ್, ವೆಂಕಟಪತಿ, ಕೆಲಸಮಂಗಲ ವೆಂಕಟರಾಮ್, ಎಂ.ಲೋಕೇಶ್ ಇದ್ದರು.