ಕಲಬುರಗಿ ಖಾಜಾ ಬಂದಾನವಾಜ್​ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಸದಾನಂದ ಪೆರ್ಲ, ಪ್ರೊ.ಅಲಿ ರಜಾ ಮೂಸ್ವಿ, ಮೀರ್​ ವಿಲಾಯತ್​ ಅಲಿ, ಎಂ.ಎ.ಬಸೀರ್​, ಡಾ.ಶೇಖ್​ ಫಹೆಮೀದಾ, ಡಾ.ಹೀನಾ ಮುಬೀನ್​, ಡಾ.ಸಾದತ್​ ಅಲಿ ಎಸ್​. ಇತರರಿದ್ದರು.  
ರಾಜ್ಯ

ಮಾನವ ಕಲ್ಯಾಣಕ್ಕೆ ಸಂಶೋಧನೆ ಕೊಡುಗೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಡಾ.ಸದಾನಂದ ಪೆರ್ಲ ಅನಿಸಿಕೆ
  • ಖಾಜಾ ಬಂದಾನವಾಜ್​ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ
ಕಲಬುರಗಿ: ಮಾನವ ಕಲ್ಯಾಣ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಶೋಧಕರು ಮಾತ್ರ ಯಶಸ್ವಿಯಾಗುತ್ತಾರೆ ಎಂದು ಕಲಬುರಗಿ ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.
ನಗರದ ಖಾಜಾ ಬಂದನವಾಜ್​ ವಿಶ್ವವಿದ್ಯಾಲಯದ ಪ್ರಾಣಿಶಾಸ ವಿಭಾಗ ಇತ್ತೀಚೆಗೆ ಏರ್ಪಡಿಸಿದ್ದ ಜೈವಿಕ ವಿಾನಗಳಲ್ಲಿ ಉದಯೋನ್ಮುಖ ಅಥವಾ ದಿಗಂತಗಳು&2026 ಎಂಬ ಎರಡು ದಿನದ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ತಳಿಶಾಸ, ಪರಿಸರ ಸಂರಣೆ, ಜೈವಿಕ ತಂತ್ರಾನ ಮತ್ತು ನರಜೀವ ಶಾಸದಂತಹ ೇತ್ರಗಳಲ್ಲಿ ತಿಳಿವಳಿಕೆ ವ್ಯಾಪ್ತಿ ಮರು ವ್ಯಾಖ್ಯಾನಿಸಬೇಕಾಗಿದೆ ಎಂದರು.
ಈ ಸಮ್ಮೇಳನ 21ನೇ ಶತಮಾನದ ಅಗತ್ಯ ಮತ್ತು ದೃಷ್ಟಿಕೋನ ಸಂದರ್ಭದಲ್ಲಿ ವಿಾನಿ ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯ ಮತ್ತು ಸಾರ್ವಜನಿಕ ಆರೋಗ್ಯದಂತಹ ಪ್ರಮುಖ ೇತ್ರದ ಸವಾಲುಗಳಿಗೆ ಸ್ಪಂದಿಸುವ ಅಗತ್ಯವಿದೆ. ಮಾನವ ಕಲ್ಯಾಣ ಗಮನದಲ್ಲಿ ಇಟ್ಟುಕೊಂಡು ಸಂಶೋಧನೆ ಮಾಡಬೇಕು. ವಿಾನ ಕೇವಲ ಒಂದು ಉತ್ತರ ಆಗಿರದೆ ಪ್ರಶ್ನೆಗಳನ್ನು ಬಹಳ ನಮ್ರತೆಯಿಂದ ತೆರವುಗೊಳಿಸುವ ಪರಿಹಾರವಾಗಿರಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಕೆಬಿಎನ್​ ವಿವಿ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಮಾತನಾಡಿ, ಸಂಶೋಧಕರು ತಾಳ್ಮೆ, ಅಧ್ಯಯನ ಮತ್ತು ಸ್ಪಷ್ಟ ಗುರಿಯೊಂದಿಗೆ ಮುಂದುವರಿದಾಗಲೇ ಜೀವವೈವಿಧ್ಯ ೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದರು.
ವಿವಿ ಕುಲಸಚಿವ ಮೀರ್​ ವಿಲಾಯತ್​ ಅಲಿ, ಐಕ್ಯೂಎಸಿ ನಿರ್ದೇಶಕ ಎಂ.ಎ. ಬಸೀರ್​, ವಿಭಾಗ ಸಂಯೋಜಕಿ ಡಾ.ಶೇಖ್​ ಫಹೆಮೀದಾ, ಸಹಾಯಕ ಪ್ರಾಧ್ಯಾಪಕರಾದ ಡಾ.ಹೀನಾ ಮುಬೀನ್​ ಮತ್ತು ಡಾ.ಸಾದತ್​ ಅಲಿ ಎಸ್​. ಇದ್ದರು.