ಗಾರಂಪಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಪ್ತ ಭಜನೆ ಸಮಾರೋಪ ಸಮಾರಂಭವನ್ನು ಶಾಸಕ ಡಾ.ಅವಿನಾಶ ಜಾಧವ್​ ಉದ್ಘಾಟಿಸಿದರು. ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಕಲ್ಯಾಣ ಸ್ವಾಮೀಜಿ, ವೀರಭದ್ರಪ್ಪ ಮಲಕೋಡ, ಡಾ.ಗುರುಪ್ರಸಾದ ಅಂಬಲಗಿ, ಸೋಮಯ್ಯ ಸ್ವಾಮಿ ಇತರರಿದ್ದರು. 
ರಾಜ್ಯ

ಬರಪೀಡಿತ ಘೋಷಿಸಲು ಸಿಎಂಗೆ ಮನವಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಅವಿನಾಶ ಜಾಧವ್​ ಹೇಳಿಕೆ
  • > ಗಾರಂಪಳ್ಳಿಯಲ್ಲಿ ಸಪ್ತ ಭಜನೆ ಸಮಾರಂಭ
ಚಿಂಚೋಳಿ: ನಮ್ಮ ಭಾಗದ ಜನರು ಕೃಷಿಯನ್ನೇ ನಂಬಿಕೊಂಡಿದ್ದು, ಸಕಾಲಕ್ಕೆ ಮಳೆಯಾದರೆ ಮಾತ್ರ ಅನ್ನದಾತ ನೆಮ್ಮದಿಯಿಂದಿರಲು ಸಾಧ್ಯ. ೇತ್ರದಲ್ಲಿ ಶೇ.63 ಮಳೆ ಕೊರತೆಯಿದ್ದು, ತಣವೇ ಬರಪೀಡಿತ ಪ್ರದೇಶವೆಂದು ೂಷಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ್​ ಹೇಳಿದರು.
ಗಾರಂಪಳ್ಳಿಯ ಶ್ರೀ ನಂದಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಳೆಗಾಗಿ ನಡೆದ ವಿಶೇಷ ಸಪ್ತ ಭಜನೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೈತ ಕುಟುಂಬದಲ್ಲಿ ಜನಿಸಿದ್ದು, ರೈತನ ಬದುಕು&ಬವಣೆ ಅರಿತಿದ್ದೇನೆ. ಈಗಾಗಲೇ ಮಳೆಯಿಲ್ಲದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಭಾಗದಲ್ಲಿ ರೈತರನ್ನು ಕಾಡುತ್ತಿರುವ ಕಸ್ಕೋಟಾ ಕಳೆ ತಳಿ ಕುರಿತು ಹೈದರಾಬಾದ್​ನ ಕೃಷಿ ವಿಜ್ಞಾನಿಗಳ ತಂಡ ಸಮರ್ಪಕ ಸಂಶೋಧನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಗೆ ಅನುಮೋದನೆ ನೀಡುವಂತೆ ಸದನದಲ್ಲಿ ಧ್ವನಿ ಎತ್ತುವೆ. ವಿಶೇಷ ಪ್ಯಾಕೇಜ್​ ೂಷಿಸಲು ಮನವಿ ಮಾಡುವೆ ಎಂದು ಭರವಸೆ ನೀಡಿದರು.
ಗಾರಂಪಳ್ಳಿ ಗ್ರಾಮದ ದೇಗುಲ ಅಭಿವೃದ್ಧಿಗೆ 5 ಲ ರೂ. ಹಾಗೂ ಸೇತುವೆ ಮೇಲ್ದರ್ಜೆಗಾಗಿ 20 ಕೋಟಿ ರೂ. ಅನುದಾನ ನೀಡಲಾಗಿದೆ. ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸ ಕೈಗೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುವೆ. ಗಾರಂಪಳ್ಳಿಯ ಭಕ್ತರೆಲ್ಲರೂ ಸೇರಿ ಶ್ರದ್ಧೆಯಿಂದ ಏಳು ದಿನ ಭಜನೆಯೊಂದಿಗೆ ಭಗವಂತನನ್ನು ಸ್ಮರಿಸಿದ್ದು, ಇದಕ್ಕೆ ಮಳೆರಾಯ ಸಂತೃಪ್ತನಾಗಿ ಧರೆಗಿಳಿಯಲಿದ್ದಾನೆ ಎಂಬ ನಂಬಿಕೆಯಿದೆ ಎಂದರು.
ನಿಡಗುಂದಾ ಕಂಚಾಳಕುಂಠಿ ಮಠದ ಶ್ರೀ ಕರುಣೇಶ್ವರ ಶಿವಾಚಾರ್ಯ, ಬಳ್ಳಾರಿಯ ಕಮ್ಮರಚೇಡು ಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ವೀರಭದ್ರಪ್ಪ ಮಲಕೋಡ, ಡಾ.ಗುರುಪ್ರಸಾದ ಅಂಬಲಗಿ, ಸೋಮಯ್ಯ ಸ್ವಾಮಿ, ಬಸಂತಪ್ಪ ಮಾಳಗಿ, ಬಸವರಾಜ ದೇಶಮುಖ, ಸಂಗನಬಸಯ್ಯ ಮಠ, ಶಿವಕುಮಾರ ಅಂಬಲಗಿ, ಗೋಪಾಲ ಎಂ.ಪಿ., ಪ್ರಕಾಶ ಗುತ್ತೇದಾರ್​, ರೇವಣಸಿದ್ದಪ್ಪ ಮೇಲಿನಕೇರಿ, ಶಂಕರಗೌಡ, ಗಂಗಾಧರ ಕುಲಕರ್ಣಿ, ಮೋಹನ ಗುತ್ತೇದಾರ್​, ಹಣಮಂತ ಭೋವಿ, ಜಗನ್ನಾಥ ಹಡಪದ, ಚನ್ನಬಸಯ್ಯ ಗುರುವಿನ, ವಿರೇಶ ಯಂಪಳ್ಳಿ, ಈಶ್ವರಿ ಮಲಕೂಡ, ಬಸಮ್ಮ ಗುರುವಿನ, ಲ್ಮಮಾತೆ, ಬಕ್ಕಮ್ಮ ಎಂ.ಪಿ., ಜಗದೇವಿ ಮುಸ್ತರಿ, ಈಶಪ್ಪ ಮಗಿ, ಮಲ್ಲಿಕಾರ್ಜುನ ಹಡಪದ, ಪ್ರಭು ಭೋವಿ, ಜಗನ್ನಾಥ ಹಣಂ, ಅಂಜಣ್ಣ ಗೋಣಿ ಇತರರಿದ್ದರು.
ಬೆಳಗ್ಗೆ ಮುತೆದೆಯರು ಭೋಗಾವತಿ ನದಿಯಿಂದ ಕಳಶದಲ್ಲಿ ನೀರನ್ನು ತಂದು ಶ್ರೀ ನಂದಿ ಬಸವೇಶ್ವರ ದೇವರಿಗೆ ಜಲಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು.
"

ಸಾಮೂಹಿಕ ಪ್ರಾರ್ಥನೆ ಮತ್ತು ಭಜನೆಗೆ ಅಗಾಧ ಶಕ್ತಿಯಿದೆ. ಸಕಲ ಜೀವರಾಶಿಗಳ ಒಳಿತಿಗಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಭಜನೆ ಮಾಡಿರುವುದು ಶ್ಲಾನೀಯ. ಪ್ರಕೃತಿಯ ಮುನಿಸು ಶಮನಗೊಂಡು ಶ್ರೀದಲ್ಲೆ ಮಳೆಯಾಗಲಿದೆ. ನಂದಿ ಬಸವೇಶ್ವರರ ಆಶಿರ್ವಾದ ಸದಾ ನಿಮ್ಮ ಮೇಲಿರಲಿದೆ.

— > ಶ್ರೀ ಕರುಣೇಶ್ವರ ಶಿವಾಚಾರ್ಯ, ನಿಡಗುಂದಾ