ಜಲಧಾರೆ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗಾಗಿ ಪಟ್ಟಣದ ಪ್ರಮುಖ ರಸ್ತೆಯ ನಡುಭಾಗವನ್ನು ಅಗೆಯುವುದನ್ನು ತಡೆಹಿಡಿದು, ರಸ್ತೆಯ ಬದಿಯಲ್ಲಿ ಪೈಪ್‌ಲೈನ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ತಾಳಿಕೋಟೆ ನಾಗರಿಕರು ಜಿ.ಪಂ. ಸಿಇಒ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು. ಜೈಸಿಂಗ್ ಮೂಲಿಮನಿ, ಎಂ.ಎಚ್. ಜೂಲಿ, ಹಣಮಗೌಡ ಬಿರಾದಾರ ಹೊಸಳ್ಳಿ, ಎಂ.ಎಚ್. ಪದರಡ್ಡಿ ಇತರರಿದ್ದರು. 
ರಾಜ್ಯ

ವೈಜ್ಞಾನಿಕ ಕಾಮಗಾರಿ ಕೈಗೊಳ್ಳಲು ಮನವಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ತಾಳಿಕೋಟೆ ನಾಗರಿಕರಿಂದ ಜಿಲ್ಲಾಡಳಿತಕ್ಕೆ ದೂರು
  • ರಸ್ತೆ ಬದಿಯಲ್ಲಿ ಪೈಪ್‌ಲೈನ್ ಅಳವಡಿಸುವಂತೆ ಆಗ್ರಹ

ತಾಳಿಕೋಟೆ: ಜಲಧಾರೆ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗಾಗಿ ಪಟ್ಟಣದ ಪ್ರಮುಖ ರಸ್ತೆಯ ನಡುಭಾಗವನ್ನು ಅಗೆಯುವುದನ್ನು ತಡೆಹಿಡಿದು, ರಸ್ತೆ ಬದಿಯಲ್ಲಿ ಪೈಪ್‌ಲೈನ್ ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ತಾಳಿಕೋಟೆ ಪಟ್ಟಣದ ನಾಗರಿಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ರಿಷಿ ಆನಂದ, ಉಪ ವಿಭಾಗಾಧಿಕಾರಿ ಹಾಗೂ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕುಡಿಯುವ ನೀರು ಒದಗಿಸುವ ಉದ್ದೇಶದ ಜಲಧಾರೆ ಯೋಜನೆ ಜನಪರ ಹಾಗೂ ಅಗತ್ಯವಾದ ಯೋಜನೆಯಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ನಾಗರಿಕರ ವಿರೋಧವಿಲ್ಲ. ಕಾಮಗಾರಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಸಿಸಿ ರಸ್ತೆಯ ನಡುಭಾಗವನ್ನು ಅಗೆಯುವುದರಿಂದ ರಸ್ತೆ ಹಾಳಾಗುವುದರ ಜೊತೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಮನವಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಬಸ್ ಘಟಕದ ಸಮೀಪದ ಜಾನಕಿ ಹಳ್ಳದಿಂದ ಪಟ್ಟಣದ ಪ್ರವೇಶ ಭಾಗದವರೆಗೆ ಪೈಪ್‌ಲೈನ್ ಕಾಮಗಾರಿಗಾಗಿ ಫುಟ್ ಪಾತ್‌ಗಳನ್ನು ಅಗೆಯಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ದುರಸ್ತಿ ಪಡಿಸಿಲ್ಲ. ಇದೀಗ ಬಸ್ ನಿಲ್ದಾಣದ ಸಮೀಪದ ಮುಖ್ಯ ರಸ್ತೆಯ ನಡುಭಾಗದಲ್ಲಿ ಬಹತ್ ತಗ್ಗು ತೆಗೆದು ಪೈಪ್‌ಲೈನ್ ಅಳವಡಿಸಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ರಸ್ತೆ ನಡುಭಾಗದ ಬದಲಾಗಿ ಸಾಧ್ಯವಾದಲ್ಲಿ ರಸ್ತೆಯ ಬದಿ ಅಥವಾ ಜಾನಕಿ ಹಳ್ಳದ ಮಾರ್ಗದಲ್ಲಿ ಪೈಪ್‌ಲೈನ್ ಅಳವಡಿಸುವಂತೆ ಸ್ಥಳೀಯರು ಮನವಿ ಮಾಡಿದರೂ ಕಾಮಗಾರಿ ಮುಂದುವರಿಸಲಾಗುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ಹೇಳಲಾಗುತ್ತಿ ರುವುದರಿಂದ ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದರು.

ನಡೆಸಿ ಸೂಕ್ತ ಮಾರ್ಗಸೂಚಿ ನೀಡಬೇಕು ಒತ್ತಾಯಿಸಿದ್ದಾರೆ.

ಪುರಸಭೆ ಮಾಜಿ ಸದಸ್ಯ ಜೈಸಿಂಗ್ ಮೂಲಿಮನಿ, ನ್ಯಾಯವಾದಿ ಎಂ.ಎಚ್. ಜೂಲಿ, ಹಣಮಗೌಡ ಬಿರಾದಾರ ಹೊಸಳ್ಳಿ, ಎಂ.ಎಚ್. ಪದರಡ್ಡಿ, ಸಾಗರ ಕಾಜಗಾರ, ರಾಜು ದೇಸಾಯಿ, ಅಂಬಾಜಿ ಘೋರ್ಪಡೆ ಇತರರಿದ್ದರು.