ನೀರಾವರಿ ನಿಗಮಗಳ ಕೇಂದ್ರ ಕಚೇರಿ ಸ್ಥಳಾಂತರ ಕುರಿತು ವರದಿ ನೀಡಿ 
ರಾಜ್ಯ

ವಿಜಯವಾಣಿ ವರದಿ ಪರಿಣಾಮ: ನೀರಾವರಿ ನಿಗಮಗಳ ಕೇಂದ್ರ ಕಚೇರಿ ಸ್ಥಳಾಂತರ ಕುರಿತು ವರದಿ ನೀಡಿ- Report on relocation of irrigation corporations

ಬೆಂಗಳೂರು: ಕರ್ನಾಟಕ ನೀರಾವರಿ ನಿಗಮದ(ಕೆಎನ್‌ಎನ್‌ಎಲ್) ಕೇಂದ್ರ ಕಚೇರಿಯನ್ನು ಬೆಂಗಳೂರಿಂದ ದಾವಣಗೆರೆಗೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕೇಂದ್ರ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸುವ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆ, ಎರಡು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ.
‘ಉತ್ತರ ಕರ್ನಾಟಕಕ್ಕೆ ನೀರಾವರಿ ನಿಗಮಗಳ ಸ್ಥಳಾಂತರಕ್ಕೆ ಗ್ರಹಣ’ ಶೀರ್ಷಿಕೆಯಡಿ ಜೂ.19ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ಪರಿಣಾಮ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೆಎನ್‌ಎನ್‌ಎಲ್ ಹಾಗೂ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದಲ್ಲಿ ಬರೆದಿದ್ದು,
2026ರ ಜು.31ರ ಸಚಿವ ಸಂಪುಟದ ನಿರ್ಣಯದೊಂದಿಗೆ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಬೆಂಗಳೂರಿಂದ ದಾವಣಗೆರೆಗೆ ವರ್ಗಾಯಿಸಿ ಸರ್ಕಾರದ ಆದೇಶಿಸಿತ್ತು.
ಸದರಿ ಕಚೇರಿಯನ್ನು ಸ್ಥಳಾಂತರಿಸುವ ಸಂಬಂಧ ಹೈಕೋರ್ಟ್‌ಗೆ, ಸರ್ಕಾರ ಸಲ್ಲಿಸಿರುವ ಅಫಿಡವೀಟ್ ಆಧಾರದಲ್ಲಿ ರಿಟ್ ಅರ್ಜಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಕೆಬಿಜೆಎನ್‌ಎಲ್ ಕೇಂದ್ರ ಕಚೇರಿಯನ್ನು ದಾವಣಗೆರೆ ವರ್ಗಾಯಿಸಲು ಕೂಡಲೇ ಅಗತ್ಯ ಕ್ರಮವಹಿಸುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದ್ದರಿಂದ, ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಶೀಲಿಸಿ ನಿಗಮಗಳ ಕೇಂದ್ರ ಕಚೇರಿಯನ್ನು ಸ್ಥಳಾಂತಕ್ಕೆ ಕೈಗೊಂಡ ಕ್ರಮದ ವರದಿಯನ್ನು ಕೂಡಲೇ ಸಲ್ಲಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
ಈ ಎರಡು ನೀರಾವರಿ ನಿಗಮಗಳ ಸ್ಥಳಾಂತರ ಕುರಿತು ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ, 2019ರ ಜ.10ರಂದು ಆದೇಶ ಹೊರಡಿಸಿದ್ದರು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ 2022ರಲ್ಲಿ 3 ಬಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ನೀರಾವರಿ ನಿಗಮಗಳ ಸ್ಥಳಾಂತರಕ್ಕೆ ಆದೇಶ ಹೊರಡಿಸಿದ್ದರು.
ಆದರೆ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಕೃಷ್ಣಾಭಾಗ್ಯ ಜಲಾಶಯ ನಿಗಮವನ್ನು 2021ರಲ್ಲೇ ಆಲಮಟ್ಟಿಗೆ ಸ್ಥಳಾಂತರವಾಗಿದೆ ಎಂದು 2024ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರು.ಮುಂದಿನ ದಿನಗಳಾದರೂ ಈ ಎರಡು ನಿಗಮಗಳ ಕೇಂದ್ರ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಂಡು ರೈತರಿಗೆ ಅನುಕೂಲವಾಗಲಿ.