ಪ್ರಭು ಚವ್ಹಾಣ್ 
ರಾಜ್ಯ

ಹಳೆಯ ವಿದ್ಯುತ್​ ತಂತಿ ಬದಲಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಧಿವೇಶನದಲ್ಲಿ ಔರಾದ್​ ಶಾಸಕ ಪ್ರಭು ಚವ್ಹಾಣ್​ ಒತ್ತಾಯ
ಔರಾದ್​: ಔರಾದ್​ ವಿಧಾನಸಭೆ ಕ್ಷೇತ್ರದಲ್ಲಿ ಹಲವು ವರ್ಷದಿಂದ ಬಳಕೆಯಲ್ಲಿರುವ ಹಳೆಯ ವಿದ್ಯುತ್​ ಕಂಬ ಹಾಗೂ ತಂತಿಗಳನ್ನು ಬದಲಿಸಿ ಹೊಸ ಕಂಬ ಮತ್ತು ತಂತಿ ಅಳವಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್​ ಒತ್ತಾಯಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಚವ್ಹಾಣ್​, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಳೆಯ ಹಾಗೂ ಶಿಥಿಲಗೊಂಡಿರುವ ವಿದ್ಯುತ್​ ಕಂಬ ಮತ್ತು ತಂತಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಮಳೆ-ಗಾಳಿ ಸಂದರ್ಭದಲ್ಲಿ ಅಪಾಯದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಹಳೆಯ ವಿದ್ಯುತ್​ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಬದಲಿಸಿ ಸುರಕ್ಷತ ಮತ್ತು ಗುಣಮಟ್ಟದ ವಿದ್ಯುತ್​ ವ್ಯವಸ್ಥೆ ಕಲ್ಪಿಸುವ ಅಗತ್ಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರು, ೇತ್ರದಲ್ಲಿರುವ ಹಳೆಯ ವಿದ್ಯುತ್​ ಕಂಬ ಮತ್ತು ತಂತಿಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು. ಸಚಿವರ ಉತ್ತರಕ್ಕೆ ತೃಪ್ತರಾಗದ ಚವ್ಹಾಣ್​, ಬಹಳಷ್ಟು ಗ್ರಾಮಗಳಲ್ಲಿ ಹಳೆಯ ವಿದ್ಯುತ್​ ತಂತಿಗಳು ಜೋತು ಬಿದ್ದು ತೀವ್ರ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿವೆ. ವಿದ್ಯುತ್​ ಅವಡಗಳು ನಿರಂತರ ನಡೆಯುತ್ತಿವೆ. ಸಾರ್ವಜನಿಕ ಸುರತೆ ಗಮನದಲ್ಲಿಟ್ಟು ತುರ್ತಾಗಿ ಹಳೆಯ ಕಂಬ ಮತ್ತು ತಂತಿಗಳನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪೌಷ್ಟಿಕ ಆಹಾರ ಗುಣಮಟ್ಟದ ಬಗ್ಗೆ ಆಕ್ರೋಶ: ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೂರೈಸುತ್ತಿರುವ ಪೌಷ್ಟಿಕ ಆಹಾರ ಕಳಪೆಯಾಗಿರುವ ಬಗ್ಗೆ ದೂರುಗಳು ಬರುತ್ತಿವೆ. ವಿಶೇಷವಾಗಿ ಮಕ್ಕಳಿಗೆ ನೀಡುವ ಬೆಲ್ಲ ಇತರ ಪದಾರ್ಥಗಳು ಸೇವಿಸಲು ಯೋಗ್ಯವಾಗಿಲ್ಲ ಎಂಬ ದೂರುಗಳ ಬಗ್ಗೆ ಶಾಸಕ ಚವ್ಹಾಣ್​ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಅಂಗನವಾಡಿಗಳ ಮೂಲಕ ಆಹಾರ ಒದಗಿಸುತ್ತಿದೆ. ಆದರೆ ಕಳಪೆ ಅಥವಾ ಸೇವಿಸಲು ಯೋಗ್ಯವಲ್ಲದ ಆಹಾರ ಪೂರೈಕೆ ಆಗುತ್ತಿರುವುದು ಗಂಭೀರ ವಿಚಾರ. ಇಂಥ ಆಹಾರ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಸರ್ಕಾರ ತಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.