ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಕೆ.ನೀಲಾ, ಭೀಮಾಶಂಕರ ಮಾಡಿಯಾಳ್, ಶಂಕರ ಕಟ್ಟಿಸಂಗಾವಿ, ಸಿದ್ದಪ್ಪ ಪಾಲ್ಕಿ, ಹಣಮಂತ ಮಟ್ಟೂರು ಇತರರಿದ್ದರು.
- ಜಂಟಿಯಾಗಿ ಬೀದಿಗಿಳಿದ ಸಂಟನೆಗಳು
- ರಾಜ್ಯ, ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ
ಕಲಬುರಗಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಯಕರ್ತರು ಕಲಬುರಗಿಯಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ, ರಸ್ತೆತಡೆ ನಡೆಸಿ ಮುಷ್ಕರ ನಡೆಸಿದರು.
ರಾಜ್ಯ ಸರ್ಕಾರ ಕಬ್ಬಿನ ಪ್ರೋತ್ಸಾಹಧನ 50 ರೂ. ಬಿಡುಗಡೆ ಮಾಡಬೇಕು, ಚಿಂಚೋಳಿ ಸಿದ್ದ ಶ್ರೀ ಎಥಿನಾಲ್ ಕಂಪನಿ ರೈತರ ಕಬ್ಬಿನ ಬಾಕಿ ಹಣ ಕೊಡಿಸಬೇಕು, ಬೆಳೆ ವಿಮೆ ಬಿಡುಗಡೆ ಮಾಡಬೇಕು, ಅತಿವೃಷ್ಟಿ ಪರಿಹಾರ ಎಲ್ಲರಿಗೂ ನೀಡಬೇಕು, ತೊಗರಿ ಬೆಂಬಲ ಬೆಲೆ 12,500 ರೂ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರೋತ್ಸಾಹಧನ ನೀಡಬೇಕು, ವಿದ್ಯುತ್ ಖಾಸಗೀಕರಣ ಮಸೂದೆ ಕೈ ಬಿಡಬೇಕು, ಬೀಜ ಮಸೂದೆ ಕೈ ಬಿಡಬೇಕು, ಸಾಲ ಮನ್ನಾ ಮಾಡಬೇಕು, 4 ಲೇಬರ್ ಕೋಡ್ ರದ್ದುಪಡಿಸಬೇಕು, ಎಬಿಜಿ ರಾಮಜಿ ರದ್ದಾಗಬೇಕು, ಭಾರತ ಅಮೆರಿಕ ಒಪ್ಪಂದ ವಿರೋಧಿಸಿ, ಸಾರ್ವಭೌಮತ್ವ ಜೀವನೊಪಾಯ ಜನರನ್ನು ರಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಒಟ್ಟು 45000 ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಕಬ್ಬಿನ ಲಾಗೊಡಿ ಜಾಸ್ತಿಯಾಗಿ ರೈತರಿಗೆ ಹೊರೆಯಾಗುತ್ತಿದೆ. ಬೆಂಬಲ ಬೆಲೆ ಮತ್ತು ಪ್ರೋತ್ಸಾಹಧನ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಒಂದು ಟನ್ ಕಬ್ಬಿಗೆ 50 ರೂ. ಪ್ರೋತ್ಸಾಹಧನ ರಾಜ್ಯ ಸರ್ಕಾರ ೂಷಿಸಿತು. ಆದರೆ ಈವರೆಗೂ ಪ್ರೋತ್ಸಾಹಧನ ನೀಡಿಲ್ಲ.
ಚಿಂಚೋಳಿ ಸಿದ್ದ ಶ್ರೀ ಎಥಿನಾಲ್ ಕಂಪನಿ ರೈತರ ಕಬ್ಬು ಕಟಾವು ಮಾಡಿ ನುರಿಸಿದ ರೈತರಿಗೆ ಮೊದಲ ಹಂತದಲ್ಲಿ 2550 ರೂ. ಮಾತ್ರ ಹಾಕಿ ನಂತರ 150 ರೂ. ಹಾಕಿ ಇನ್ನೂ ಬಾಕಿ ಉಳಿಸಿಕೊಂಡಿದೆ. ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು.ವಿಳಂಬವಾದ ಪಾವತಿಗೆ ನಿಯಮದ ಪ್ರಕಾರ ಶೇ.16ರಷ್ಟು ಬಡ್ಡಿ ಸೇರಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ರೈತರ ಹಣದ ಮಾಲು ಉದ್ದು ಹೆಸರು ಸೋಯಾಬಿನ್, ತೊಗರಿ, ಹತ್ತಿ ಅತಿವೃಷ್ಟಿಗೆ ತುತ್ತಾಗಿ ರೈತರು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಎಲ್ಲರಿಗೂ ಸಮಾನ ಪರಿಹಾರ ನೀಡಬೇಕು. ಈ ವರ್ಷ ರೈತರು ಬೆಳೆ ವಿಮೆ ಭರಿಸಿದ್ದು, ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ಕಲಬುರಗಿ ಜಿಲ್ಲೆಯಲ್ಲಿ 3,01,000 ರೈತರು ವಿಮೆ ಹಣ ಭರಿಸಿದ್ದು, ಒಟ್ಟು 99 ಕೋಟಿ ರೂ. ಜಿಲ್ಲೆಯ ಒಟ್ಟು 3,78,990 ಹೆಕ್ಟೇರ್ ಬೆಳೆ ವಿಮೆ ಮಾಡಿಸಿದ ರೈತರ ಮಧ್ಯಂತರ ಪರಿಹಾರ ಇನ್ನೂ ಪಾವತಿಸಿಲ್ಲ. ಬೆಳೆ ವಿಮೆ ಹಣ ಡಿಸೆಂಬರ್ನಲ್ಲಿ ನೀಡಬೇಕಾಗಿತ್ತು. ಆದರೆ ಈವರೆಗೆ ಬೆಳೆ ವಿಮೆ ನೀಡಿಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಇಫ್ಕೊ ಟೋಕಿಯೊ ಇನ್ಷುರೆನ್ಸ್ ಕಂಪನಿ ತಣವೇ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತೊಗರಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಕಾನೂನು ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ತೊಗರಿ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ನವೆಂಬರ್ನಲ್ಲಿ ಖರೀದಿ ಕೇಂದ್ರ ತೆರೆಯಬೇಕು. ದ್ವಿದಳ ಧಾನ್ಯ ತೊಗರಿ, ಹತ್ತಿ ಖರೀದಿ, ಉದ್ದು, ಹೆಸರು, ಸೋಯಾ ಖರೀದಿ ಕೇಂದ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾಂತಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ಪ್ರಾರಂಭವಾಗುತ್ತಿವೆ ಎಂದು ದೂರಿದರು.
ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು, ಆವರೆಗೆ ಐಎಲ್ಒ ಶಿಫಾರಸಿನಂತೆ ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ, ಪಿಎಫ್, ಇಎಸ್ಐ, ನಿವೃತ್ತಿ ಪರಿಹಾರ ಒದಗಿಸಬೇಕು, ಕೇಂದ್ರ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ೂಷಿಸಿದ ಪ್ರೋತ್ಸಾಹಧನ ಹೆಚ್ಚಳ ನೀಡಬೇಕು, ವಿಬಿ ಜಿರಾಮ್ ಜಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ವಿವಿಧ ಸಂಟನೆಗಳ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಭೀಮಾಶಂಕರ ಮಾಡಿಯಾಳ, ನಾಗೆಂದ್ರಪ್ಪಾ ಥಂಬೆ, ಎಸ್.ಆರ್. ಕೊಲ್ಲೂರ್, ದಿಲೀಪ ನಾಗೂರೆ, ಸಿದ್ದು ಎಸ್.ಎಲ್, ಕರೆಪ್ಪಾ ಕರಗೊಂಡ, ಸುನಿಲ್ ಗುತ್ತೇದಾರ್, ಗೌರಮ್ಮಾ ಪಾಟೀಲ್, ರತ್ನಾ, ನೀಲಾ ಕೆ, ಡಾ.ಮಿನಾ ಬಾಳಿ, ಪದ್ಮಿನಿ ಕಿರಣಗಿ, ಮಹೇಶ ರಾಠೋಡ , ಎಸ್.ಎಂ.ಶರ್ಮಾ, ಪ್ರಭುದೇವ ಎಳಸಂಗಿ, ಚೆಂದು ಜಾಧವ್, ಎಂ.ಬಿ ಸಜ್ಜನ್, ಶಂಕ್ರಯ್ಯಾ ಂಟಿ, ಸುಧಾಮ ಧನ್ನಿ, ಎಸ್.ಎಚ್. ಪತಕೆ, ಅಶೋಕ ೂಳಿ, ಶಂಕರ ಕಟ್ಟಿಸಂಗಾವಿ, ಶಿವಲಿಂಗಮ್ಮ ನಂದೂರ್, ಗೀತಾ ಮಳ್ಳಿ, ಸಿದ್ದಪ್ಪ ಪಾಲ್ಕಿ, ಮೌಲಾ ಮುಲ್ಲಾ, ಸಾಜೀದ್ ಅಹ್ಮದ್ ದಿಗ್ಗಾಂವಕರ್, ಹಣಮಂತರಾಯ ಅಟ್ಟೂರ್, ವಿಶ್ವನಾಥ ಭೀಮಳ್ಳಿ, ಚಂದ್ರಮೋಹನ ಇತರರಿದ್ದರು.
47 ಜನ ರೈತರು ಸಾಲದ ಭಾದೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ರೈತರಿಗೆ ಪರಿಹಾರ ನೀಡಿಲ್ಲ. ಈ ರೈತರ ಕುಟುಂಬದ ಅರ್ಜಿ ಕೈಬಿಡಬಾರದು, ಪೊಲೀಸ್ ಪ್ರಕರಣ ಆದ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಅರ್ಜಿ ತಿರಸ್ಕರಿಸುವುದನ್ನು ಕೈ ಬಿಡಬೇಕು.