ರಂಗಂಪೇಟೆಯಿಂದ ರತ್ತಾಳ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಸಂಪುರ್ಣ ಹಾಳಾಗಿದ್ದು, ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಸಮಿತಿ ಕಾರ್ಯಕರ್ತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಶರಣಪ್ಪ ಬೈರಿಮಡ್ಡಿ, ಮಲ್ಲಪ್ಪ, ಶಿವರಾಜ್ ವಗ್ಗರ, ಕೃಷ್ಣ ಹಾವಿನ್, ಹನುಮಂತ ಭಂಡಾರಿ ಇತರರಿದ್ದರು.
ಸುರಪುರ: ಸಮೀಪದ ರಂಗಂಪೇಟೆಯಿಂದ ರತ್ತಾಳ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಸಂಪುರ್ಣ ಹಾಳಾಗಿದ್ದು, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಕೂಡಲೇ ಈ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಮತ್ತು ತಾಲೂಕು ಸಮಿತಿ ಆಗ್ರಹಿಸಿದರು.
ನಗರದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ನಂತರ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಮಾತನಾಡಿ, ರತ್ತಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮುಖ್ಯ ರಸ್ತೆಯ ಮಧ್ಯದಲ್ಲಿರುವ ಬ್ರಿಜ್(ಸೇತುವೆ) ಅಲ್ಲಲ್ಲಿ ಒಡೆದು ಹೋಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಟೆಂಡರ್ ಮೂಲಕ ಕಾಮಗಾರಿ ನಡೆಸಿ ಇನ್ನೂ ಮೂರು ವರ್ಷ ಕಳೆಯುವ ಮುನ್ನವೇ ಬ್ರಿಜ್ ಒಡೆದಿರುವುದು ಕಳಪೆ ಕಾಮಗಾರಿಯೇ ಇದಕ್ಕೆ ಮೂಲ ಕಾರಣ ಎಂದು ಆರೋಪಿಸಿದರು.
ಪ್ರಸ್ತುತ ಮುಂಗಾರು ಆರಂಭವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ರತ್ತಾಳ ಗ್ರಾಮದ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಹಾಗೂ ಮಾರುಕಟ್ಟೆಗಾಗಿ ಸುರಪುರ ನಗರಕ್ಕೆ ಬರಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಸಂಚಾರ ಬಂದ್ ಆಗಿರುವುದರಿಂದ ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ, ದಿನಗೂಲಿ ಕಾರ್ಮಿಕರಿಗೆ ಹಾಗೂ ಸಂತೆ, ಮಾರುಕಟ್ಟೆಗೆ ಹೋಗುವ ಜನಸಾಮಾನ್ಯರಿಗೆ ಯಾವುದೇ ಪರ್ಯಾಯ ರಸ್ತೆ ಇಲ್ಲದೆ ಪರದಾಡುವಂತಾಗಿದೆ ಎಂದು ದೂರಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ರೈತ ಹಿತದೃಷ್ಟಿಯಿಂದ ತಕ್ಷಣವೇ ತಾತ್ಕಾಲಿಕವಾಗಿ ಓಡಾಡಲು ಪರ್ಯಾಯ ಬ್ರಿಜ್ ನಿರ್ಮಿಸಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅವರ ಲೈಸೆನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಬೈರಿಮಡ್ಡಿ, ಸುರಪುರ ತಾಲೂಕು ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ, ತಾಲೂಕು ಕಾರ್ಯಾಧ್ಯಕ್ಷ ಶಿವರಾಜ್ ವಗ್ಗರ, ಉಪಾಧ್ಯಕ್ಷ ಕೃಷ್ಣ ಹಾವಿನ್ ಬಾದ್ಯಾಪುರ, ಕಾರ್ಯದರ್ಶಿ ಹನುಮಂತ ಭಂಡಾರಿ, ನಗರ ಟಕದ ಅಧ್ಯಕ್ಷ ಶಿವಕುಮಾರ ಗಾಜಲದಿನ್ನಿ, ಅಟೋ ಚಾಲಕರ ಟಕದ ಅಧ್ಯಕ್ಷ ಹನುಮಂತ ಶುಕ್ಲಾ, ಸಹ ಸಂಟನಾ ಕಾರ್ಯದರ್ಶಿ ನಾಗರಾಜ ನಂಬಾ, ರೈತ ಟಕದ ಅಧ್ಯಕ್ಷ ಧನ್ನರಾಜ್ ರಾಠೋಡ ಹಾಗೂ ರತ್ತಾಳ ಗ್ರಾಮಸ್ಥರಾದ ಸಿದ್ದಪ್ಪ, ಅಂಬ್ರೇಶ, ತೋಟಪ್ಪ, ಹಣಮಂತ, ಗೋಪಾಲ, ಪ್ರಕಾಶ ಬಿಲ್ಲವ್, ದೇವೇಂದ್ರ ಕುಂಬಾರ, ಭಾಗಪ್ಪ ಮಸಿ, ಮಲ್ಲಪ್ಪ ದರೆಮನಿ, ಯಮನಪ್ಪ ಗದ್ವಾಲ್ ಇತರರಿದ್ದರು.