ದೋರನಹಳ್ಳಿಯಿಂದ ಇಬ್ರಾಹಿಂಪುರ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅವರಿಗೆ ಗ್ರಾಮಸ್ಥರು ಮನವಿಪತ್ರ ಸಲ್ಲಿಸಿದರು. ಈರಪ್ಪ ಗಣೇರ, ಮರಲಿಂಗ ಎಂ.ಗಣೇರ, ಮಾನಪ್ಪ ಗಣೇರ, ಸಿದ್ರಾಮ ಓಕಳೇರ, ಮರಲಿಂಗ ಸಿ.ಗಣೇರ, ನಿಂಗಪ್ಪ ಗಣೇರ, ಕರಿನಿಂಗಪ್ಪ ಓಕಳೇರ, ಮರಿಲಿಂಗಪ್ಪ ದಂಡಿನ್, ಮುದುಕಪ್ಪ ಶಹಾಪುರ, ನಾಗಪ್ಪ ಘೋಶೆ ಇತರರಿದ್ದರು. 
ರಾಜ್ಯ

ದೋರನಹಳ್ಳಿ-ಇಬ್ರಾಹಿಂಪುರ ರಸ್ತೆ ದುರಸ್ತಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿAದ ಮನವಿ
  • ಭರವಸೆ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ್
ದೋರನಹಳ್ಳಿ : ದೋರನಹಳ್ಳಿಯಿಂದ ಇಬ್ರಾಹಿಂಪುರಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡಿ ಡಾಂಬರೀಕರಣ ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಹದಗೆಟ್ಟ ರಸ್ತೆಯಿಂದ ಎರಡು ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಪಟ್ಟಣದಿಂದ ಇಬ್ರಾಹಿಂಪುರ, ತಂಗಡಗಿ, ಗುಂಡಳ್ಳಿ ತಾಂಡಾ, ಚಟ್ನಳ್ಳಿ ಗ್ರಾಮಗಳಿಗೆ ಸಂರ್ಪಕ ಕಲ್ಪಿಸುವ ಈ ರಸ್ತೆಯು ಸಂಪೂರ್ಣ ಹದಗೆಟ್ಟ ಪರಿಣಾಮ ಹಲವು ಸಮಸ್ಯೆಗಳಾಗಿವೆ. ವಾಹನ ಸವಾರರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಕೂಡಲೇ ದುರಸ್ತಿ ಮಾಡಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕ ತುನ್ನೂರ, ಪಿಆರ್‌ಡಿ ಇಲಾಖೆಗೆ ರಸ್ತೆಯ ಸ್ಥಿತಿಗತಿ ಪರಿಶೀಲನೆಗೆ ಸೂಚಿಸಿದ್ದು ಪಿಆರ್‌ಡಿ ಇಲಾಖೆ ಎಇಇ ಮಂಜುನಾಥ ಅವರ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡಿಸಿದ್ದು, ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ರಸ್ತೆ ದುರಸ್ತಿಯಿಂದ ಸಗರನಾಡಿನ ಪ್ರಖ್ಯಾತ ಹಜರತ್ ಅಬ್ದುಲ್‌ಭಾಷಾ ಮುತ್ಯಾನ ದರ್ಗಕ್ಕೂ ತೆರಳಲು ಅನುಕೂಲವಾಗಲಿದೆ. ದರ್ಗಾಕ್ಕೆ ಪ್ರತಿ ಸೋಮವಾರ, ಗುರುವಾರ ಮತ್ತು ಅಮಾವಾಸ್ಯೆಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಆದಷ್ಟು ಬೇಗ ದುರಸ್ತಿ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಮತ್ತು ಈ ಎರಡು ಗ್ರಾಮಸ್ಥರು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಶಾಸಕರಿಗೆ ಮನವರಿಕೆ ಮಾಡಿದರು.
ಈ ವೇಳೆ ಕರವೇ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೋರನಹಳ್ಳಿ, ಈರಪ್ಪ ಗಣೇರ, ಮರಲಿಂಗ.ಎA.ಗಣೇರ, ಮಾನಪ್ಪ ಗಣೇರ, ಸಿದ್ರಾಮ ಓಕಳೇರ, ಮರಲಿಂಗ.ಸಿ.ಗಣೇರ, ನಿಂಗಪ್ಪ ಗಣೇರ, ಕರಿನಿಂಗಪ್ಪ ಓಕಳೇರ, ಮರಿಲಿಂಗಪ್ಪ ದಂಡಿನ್, ಮುದುಕಪ್ಪ ಶಹಾಪುರ, ನಾಗಪ್ಪ ಘೋಶೆ, ಹಣಮಂತ ಓಕಳೇರ, ಅಮೋಘ ಗಣೇರ, ಶಿವರಾಜ ರ‍್ನಳ್ಳಿ, ಸಂತೋಷ, ಆಕಾಶ, ನಿಂಗಪ್ಪ ಕೆ. ಗಣೇರ ಇತರರಿದ್ದರು.