ದೋರನಹಳ್ಳಿ ಇಬ್ರಾಹಿಂಪುರ ಅಬ್ದುಲ್ ಬಾಷಾ ದರ್ಗಾ ಮತ್ತು ಇಬ್ರಾಹಿಂಪುರಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಮುಳ್ಳುಕಂಟಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಶಹಾಪುರ ತಹಸೀಲ್ದಾರ್‌ಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಅಂಬರೀಶ ತೆಲಗರ್, ತಾಲೂಕು ಘಟಕದ ಅಧ್ಯಕ್ಷ ಸಿದ್ದು ಪಟ್ಟೇದಾರ, ಶಶಿಪಾಲರೆಡ್ಡಿ ಪಾಟೀಲ್, ಸದ್ದಾಂ ಹುಸೇನ್ ಮಠ, ಸಾಹೇಬಗೌಡ ಮಾಲಿ ಪಾಟೀಲ್ ಇತರರಿದ್ದರು. 
ರಾಜ್ಯ

ದೋರನಹಳ್ಳಿ-ಇಬ್ರಾಹಿಂಪುರ ರಸ್ತೆ ದುರಸ್ತಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರ ಆಗ್ರಹ
  • ಶಹಾಪುರ ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಪತ್ರ
ದೋರನಹಳ್ಳಿ : ಲಕ್ಷಾಂತರ ಭಕ್ತರ ಆರಾಧ್ಯ ದೇವ ಇಬ್ರಾಹಿಂಪುರ ಅಬ್ದುಲ್ ಬಾಷಾ ಮುತ್ಯಾ ದರ್ಗಾಕ್ಕೆ ತೆರಳುವ ಮತ್ತು ಇಬ್ರಾಹಿಂಪುರ ದೋರನಹಳ್ಳಿ ಸಂರ್ಪಕ ಕಲ್ಪಿಸುವ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ಮುಳ್ಳು ಕಂಟಿ ತೆರವುಗೊಳಿಸಿ, ರಸ್ತೆ ದುರಸ್ತಿಗೊಳಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಪ್ರಧಾನ ಸಂಚಾಲಕ ಅಂಬರೀಶ ತೆಲಗರ್ ದೋರನಹಳ್ಳಿ ಆಗ್ರಹಿಸಿದ್ದಾರೆ.
ಗ್ರಾಮದಿಂದ ಇಬ್ರಾಹಿಂಪು ಅಬ್ದುಲ್ ಬಾಷಾ ಮುತ್ಯಾನ ಕೆರೆಗೆ ಹೋಗುವ ರಸ್ತೆಯ ಕುರಿತು ಶುಕ್ರವಾರ ಶಹಾಪುರ ತಾಲೂಕು ತಹಸೀಲ್ದಾಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಸ್ತೆಯುದ್ದಗಲಕ್ಕೂ ದೋರನಹಳ್ಳಿ, ಇಬ್ರಾಹಿಂಪುರ ಗ್ರಾಮದ ಜಮೀನುಗಳಿವೆ. ರೈತರು ನಿತ್ಯ ಇದೇ ರಸ್ತೆ ಮಾರ್ಗವಾಗಿ ಕೃಷಿ ಚಟುವಟಿಕೆ ಹೋಗುತ್ತಾರೆ. ಅಲ್ಲದೆ ಸೋಮವಾರ ಗುರುವಾರ ಮತ್ತು ಅಮಾವಾಸ್ಯೆಯಂದು ಇಲ್ಲಿನ ದರ್ಗಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗುವ ಈ ರಸ್ತೆ ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರಸ್ತೆ ತುಂಬೆಲ್ಲ ಎಲ್ಲೆಂದರಲ್ಲಿ ಜಲ್ಲಿಕಲ್ಲು ತೇಲಿದ್ದು ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯ ಎರಡು ಬದಿಯಲ್ಲಿ ಬೆಳೆದ ಮುಳ್ಳಿನ ಕಂಟಿಗಳು ಜೀವ ಬಲಿಗೆ ಕಾದಂತಿವೆ. ಹೀಗಾಗಿ ಮೊದಲು ಮುಳ್ಳು ಕಂಟಿ ತೆರವುಗೊಳಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಅವರು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾ ಪ್ರಧಾನ ಸಂಚಾಲಕ ಅಂಬರೀಶ ತೆಲಗರ್, ತಾಲೂಕು ಘಟಕದ ಅಧ್ಯಕ್ಷ ಸಿದ್ದು ಪಟ್ಟೇದಾರ, ಉಪಾಧ್ಯಕ್ಷ ಶಶಿಪಾಲರೆಡ್ಡಿ ಪಾಟೀಲ್, ಯುವ ಘಟಕದ ತಾಲೂಕು ಉಪಾಧ್ಯಕ್ಷ ಸದ್ದಾಂ ಹುಸೇನ ಮಠ, ದೋರನಹಳ್ಳಿ ಹೋಬಳಿ ಘಟಕ ಅಧ್ಯಕ್ಷ ಸಾಹೇಬಗೌಡ ಮಾಲಿ ಪಾಟೀಲ್, ಅಂಬಣ್ಣ ನಟೇಕಾರ, ಕಿರಣ ಕುಮಾರ ಗುಂಟನೂರ, ದೇವು ಶಹಾಪುರ, ಮಹೇಶ ಮೂಲಿಮನಿ, ಶಂಕರ ಜಾಗೀರದಾರ ಇತರರಿದ್ದರು.