Repair dilapidated buildings. 
ರಾಜ್ಯ

ಶಿಥಿಲ ಕಟ್ಟಡಗಳ ದುರಸ್ತಿಪಡಿಸಿ

ಕೋಲಾರ: ಮಕ್ಕಳ ಹಿತದೃಷ್ಟಿಯಿಂದ ಶಿಥಿಲಗೊಂಡಿರುವ ಅಂಗನವಾಡಿ, ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಕೂಡಲೇ ದುರಸ್ತಿಪಡಿಸಬೇಕು ಎಂಬ ಎಚ್ಚರಿಕೆ ನಡುವೆಯೂ ಅಧಿಕಾರಿಗಳು ರ್ನಿಲಕ್ಷ$್ಯ ತೋರಿದರೆ ಸಂಬಂಧಪಟ್ಟ ಇಲಾಖಧಿಕಾರಿಗಳನ್ನೇ ನೇರ ಹೊಣೆ ಮಾಡಿ, ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್​ ಪಿ.ಬಾಗೇವಾಡಿ ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಇಒ, ಸಿಡಿಪಿಒ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರದಲ್ಲಿನ ಸರ್ಕಾರಿ ಶಾಲೆಯ ಮೇಲ್ಛಾವಣಿ ಬಿದ್ದು ಶಿಕ್ಷಕಿ ಯಾಗೊಂಡಿದ್ದಾರೆ. ಇಂತಹ ಪ್ರಕರಣಗಳು ಮರುಕಳುಹಿಸಬಾರದು. ಮುನ್ನೆಚ್ಚರಿಕೆ ವಹಿಸಿದ್ದರೆ ಅನಾಹುತ ತಡೆಯಬಹುದಿತ್ತು ಎಂದರು.

ದಾಖಲಾತಿ ಹೆಚ್ಚಿಸಲು ಸೂಚನೆ

ಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಭಾರಿ 1ನೇ ತರಗತಿ ದಾಖಲಾತಿಯಲ್ಲಿ ಶೇ.30 ಇಳಿಕೆಯಾಗಿದೆ. ಅಧಿಕಾರಿಗಳು ಮಕ್ಕಳ ನೋಂದಣಿ ವಿಚಾರದಲ್ಲಿ ಏನು ಮಾಡುತ್ತಿದ್ದಿರಾ ಎಂದು ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ಅವರು ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನೆ ಸೌಲಭ್ಯ ಕುರಿತು ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಪಾಲಕರನ್ನು ಮನವೊಲಿಸುವ ದಾಖಲಾತಿ ಪ್ರಮಾಣ ಹೆಚ್ಚಿಸಲು ಜನಾಂದೋಲನ ನಡೆಸಬೇಕು ಎಂದು ಸೂಚಿಸಿದರು.


ಜಿಲ್ಲೆಯಾದ್ಯಂತ ಶಿಥಿಲಾವಸ್ಥೆ ತಲುಪಿರುವ ಮತ್ತು ದುರಸ್ತಿ ಕಾಣಬೇದ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳ ನಿಖರ ವರದಿ 3 ದಿನಗಳ ಒಳಗೆ ಡಿಡಿಪಿಐ ಮುಖಾಂತರ ಕಡ್ಡಾಯವಾಗಿ ಸಲ್ಲಿಸಬೇಕು. ಅಪಾಯದ ಮುನ್ಸೂಚನೆ ಇರುವ ಕೊಠಡಿಗಳಿಂದ ಮಕ್ಕಳನ್ನು ತಕ್ಷಣವೇ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಾಮಾನ್ಯ ಕಟ್ಟಡಗಳ ದುರಸ್ತಿಗೆ 143.49 ಲಕ್ಷ ರೂ., ಎಸ್​ಸಿ ಬಿಡುಗಡೆ ಅಡಿ 70.21 ಲಕ್ಷ ರೂ. ಹಾಗೂ ಎಸ್​ಟಿ ಬಿಡುಗಡೆ ಅಡಿ 28.08 ಲಕ್ಷ ರೂ. ಅನುದಾನ ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಪಿಆರ್​ಇಡಿ ಅಧಿಕಾರಿಗಳು ತಕ್ಷಣವೇ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ತಿಳಿಸಿದರು.
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ರಿಪೇರಿ ಅಥವಾ ಹೊಸ ಕಟ್ಟಡಗಳನ್ನು ಕಟ್ಟಿಸಲು ಗ್ರಾಮ ಪಂಚಾಯಿತಿ ಸಹಕಾರ ಪಡೆಯಬೇಕು. ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಡಿಪಿಒಗಳು ಈ ವಿಚಾರದಲ್ಲಿ ಉದಾಸೀನ ತೋರಿದರೆ ಅಮಾನತು ಗ್ಯಾರಂಟಿ ಎಂದು ಎಚ್ಚರಿಸಿದರು.
ಪ್ರತಿ ಶಾಲೆಗೂ ಜಲ ಜೀವನ್​ ಮಿಷನ್​ ಅಡಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಬೇಕು. ಬಾಲಕ-/ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು. ಆವರಣಗಳಲ್ಲಿ ಧನ್ವಂತರಿ ವನ ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್​, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾನ್​ ರ್ವೀನ್​ ತಾಜ್​ ಇದ್ದರು.