ಕಲಬುರಗಿಯ ಶಹಾಬಜಾರ್​ ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 19ನೇ ವರ್ಷದ ಆಷಾಢ ಪ್ರವಚನಕ್ಕೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ವೀರಭದ್ರ ಶಿವಾಚಾರ್ಯ, ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಶ್ರೀ ರಾಚೋಟಿ ಶಿವಾಚಾರ್ಯ, ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಇತರರಿದ್ದರು. 
ರಾಜ್ಯ

ಪರಿಶುದ್ಧ ಬಾಳಿಗೆ ರೇಣುಕರ ಸಂದೇಶ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಉಜ್ಜಯಿನಿ ಜಗದ್ಗುರುಗಳು ನುಡಿ
  • ಸೊಗಸನಕೇರಿ ಮಠದಲ್ಲಿ ಧರ್ಮಸಭೆ
ಕಲಬುರಗಿ: ಸಮರ ಜೀವನವನ್ನು ಅಮರ ಜೀವನದಡೆಗೆ ಕೊಂಡೊಯ್ಯಲು ಹಾಗೂ ಪರಿಶುದ್ಧವಾದ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರರ ಸಂದೇಶ ದಾರಿದೀಪವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾಂತ ಸಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಧರ್ಮಸಭೆಯ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಬಾಳಿನ ಭಾಗ್ಯೋದಯಕ್ಕೆ ಪೂರ್ವಜರ ಚಿಂತನೆಗಳ ಪೂರಕವಾಗಿವೆ. ಜಾತಿ ಜನಾಂಗಗಳ ಗಡಿ ಮೀರಿ ಮಾನವೀಯ ಮೌಲ್ಯಗಳನ್ನು ಸದಾ ಬೆಳೆಸುವಲ್ಲಿ ಜಗದ್ಗುರು ರೇಣುಕರ ಕೊಡುಗೆ ಅಮೂಲ್ಯವಾಗಿದೆ ಎಂದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶರಣಬಸವೇಶ್ವರ ಮಹಾದಾಸೋಹ ಪೀಠದ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಧರ್ಮಸಭೆ ಉದ್ಘಾಟಿಸಿದರು. ಮಾತೋಶ್ರೀ ಡಾ.ದಾಾಯಿಣಿ ಅಪ್ಪ, ಚಂದನಕೇರಾದ ಶ್ರೀ ರಾಚೋಟಿ ಶಿವಾಚಾರ್ಯ, ಸೋಮವಾರಪೇಟೆಯ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಅಮೃತಪ್ಪ ಮಹಾಗಾಂವ್​, ಶಿವಕಾಂತ ಮಹಾಜನ್​, ಶಿವಾನಂದ ಪಠಪತಿ, ಮಲ್ಲಣ್ಣ ಕಣ್ಣಿ ಇತರರಿದ್ದರು.
ಚೇತನ ಬೀದಿಮನಿ ಹಾಗೂ ಮಹಾಂತಯ್ಯ ನಿಂಗದಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಯುವ ಸಾಹಿತಿ ಶಿವಯ್ಯ ಮಠಪತಿ ನಿರೂಪಣೆ ಮಾಡಿದರು.