ಬನ ಚಿತ್ರದ ಪೋಸ್ಟರ್ 
ರಾಜ್ಯ

ತುಳು ಭಾಷೆಯ ಬನ ಚಿತ್ರದಲ್ಲಿ ಖ್ಯಾತ ಪತ್ರಕರ್ತ ಮತ್ತು ನಿರೂಪಕ ಜಯಪ್ರಕಾಶ್ ಶೆಟ್ಟಿ ನಟನೆ: ಗಮನ ಸೆಳೆದ ಪೋಸ್ಟರ್ | Bana Film

Bana Filma: ಬಹುನೀರಿಕ್ಷೆಯ ತುಳು ಭಾಷೆಯ ಬನ ಚಿತ್ರದಲ್ಲಿ ಖ್ಯಾತ ಪತ್ರಕರ್ತ ಮತ್ತು ನಿರೂಪಕ ಜಯಪ್ರಕಾಶ್ ಶೆಟ್ಟಿ ಇದೆ ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸಿದ್ದು, ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಮತ್ತು ಚಿತ್ರದ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ.
ಬನ ಚಿತ್ರ ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಅಕ್ಟೊಬರ್  23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಹಳ ವರುಷಗಳ ನಂತರ ನಾಗ ಕಥೆಯ ಚಿತ್ರವೊಂದು ತೆರೆಗೆ ಬರುತ್ತಿದ್ದು, ಇದು ತುಳು ಚಿತ್ರರಂಗದ ಇತಿಹಾಸದಲ್ಲೇ ನಾಗ ಕಥೆಯನ್ನು ಹೊಂದಿರುವ ಮೊದಲ ಚಿತ್ರವಾಗಿದೆ.
ಚಿತ್ರದ ಟ್ರೈಲರ್ ಮುಂಬರುವ ನಾಗರ ಪಂಚಮಿಯ ದಿನ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಜೊತೆ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪ ವರ್ಕಡಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈಶಿ ಪ್ರೊಡಕ್ಷನ್ ಬ್ಯಾನರ್​​ನಲ್ಲಿ ಮನೋಹರ್ ರೈ ವೈಪಾಲ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಚಿತ್ರವನ್ನು ನಿರ್ದೇಶಿಸಿದ್ದಾರೆ.