Remembrance of the Lord is protection. 
ರಾಜ್ಯ

ಭಗವಂತನ ಸ್ಮರಣೆಯೇ ರಕ್ಷಣೆ

ಎಂ.ಎನ್​.ಕೋಟೆ : ಭಕ್ತಿಯಿಂದ ಭಗವಂತನನ್ನು ಸ್ಮರಣೆ ಮಾಡಿದರೆ ಭಗವಂತ ಎಲ್ಲರನ್ನು ಕಾಪಾಡುತ್ತಾನೆ ಎಂದು ತೇವಡೆಹಳ್ಳಿ ಮಠದ ಶ್ರೀ ಗೋಸಲಚನ್ನಬಸವೇಶ್ವರ ಸ್ವಾಮೀಜಿ ಹೇಳಿದರು.
ಗುಬ್ಬಿ ತಾಲೂಕಿನ ಹುಲ್ಲೇಕೆರೆ ಪಾಳ್ಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಬಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿ ನಡೆದರೆ ಮಾತ್ರಬದಲಾಗಲು ಸಾಧ್ಯ. ಮನುಷ್ಯ ಹುಟ್ಟಿದ ಮೇಲೆ ತಪ್ಪು ಮಾಡುವುದು ಸಹಜ. ಅದನ್ನು ಸರಿಪಡಿಸಿಕೊಂಡು ಹೋದಾಗ ಮಾತ್ರ ಭಗವಂತ ಎಲ್ಲರನ್ನು ಕಾಪಾಡುವನು. ದೇವರ ಮೇಲೆ ನಂಬಿಕೆ ಇಡಬೇಕು.
ಇತ್ತೀಚಿನ ದಿನಗಳಲ್ಲಿ ದೇವರ ಹೆಸರು ಹೇಳಿಕೊಂಡು ಇಲ್ಲಸಲ್ಲದ ಆರೋಪಗಳು ಹೆಚ್ಚಿವೆ. ದೇವರನ್ನು ನಂಬಿ ಸ್ಮರಣೆ ಮಾಡಬೇಕು. ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದ್ದರೆ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಪಾಲಕರು ಮಕ್ಕಳ ಕೈಗೆ ಮೊಬೈಲ್​ ಕೊಡುವುದನ್ನು ನಿಲ್ಲಿಸಬೇಕು. ಮಕ್ಕಳು ಮೊಬೈಲ್​ ನಿಂದ ಹಾಳಾಗುತ್ತಿದ್ದಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಗುರು ಹಿರಿಯರನ್ನು ಗೌರವಿಸಬೇಕು. ಹೆತ್ತವರಿಗೆ ಗೌರವಕೊಡಬೇಕು. ಒಳಿತಿನ ಅರಿವು ಮೂಡಿಸಿದಾಗ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವರು ಎಂದರು.