ಕೆಂಭಾವಿಯಲ್ಲಿ ಶ್ರೀ ಸತ್ಯಾತ್ಮತಿರ್ಥರ 31ನೇ ಪೀಠಾರೋಹಣ ನಿಮಿತ್ತ ಜಯಸತ್ಯಪ್ರಮೋದ ಸೇವಾ ಸಂದ ಪದಾಧಿಕಾರಿಗಳು ಪಾದನಮನ ಸಲ್ಲಿಸಿದರು.
- ಉತ್ತರಾದಿ ಮಠಾಧೀಶ ಸತ್ಯಾತ್ಮತಿರ್ಥ ಶ್ರೀ ನುಡಿ
- ಕೆಂಭಾವಿಯಲ್ಲಿ ಪೀಠಾರೋಹಣ ಮಹೋತ್ಸವ
ಮನುಷ್ಯನ ಜೀವನದಲ್ಲಿ ಬರುವ ಪ್ರತಿಯೊಂದು ವ್ನಿಗಳಿಗೆ, ಸಂಕಷ್ಟಕ್ಕೆ ಗುರುಗಳ ಸ್ಮರಣೆಯೊಂದೆ ದಿವ್ಯ ಔಷಧ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥ ಶ್ರೀಪಾಂಗಳವರು ನುಡಿದರು.
ಪಟ್ಟಣದ ಉತ್ತರಾದಿ ಮಠದಲ್ಲಿ ಬುಧವಾರ ಜರುಗಿದ ಶ್ರೀಗಳ 31ನೇ ಪೀಠಾರೋಹಣ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಕಷ್ಟಗಳು, ವ್ನಿಗಳು ಬರುತ್ತವೆ. ಅಂಥ ಎಲ್ಲ ಸಂಕಷ್ಟಗಳಿಗೆ ತಮ್ಮ ತಮ್ಮ ಗುರುಗಳ ಸ್ಮರಣೆ, ಗುರುಗಳ ಸೇವೆಯೇ ಇದರ ಪರಿಹಾರೋಪಾಯ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಪ್ರತಿಯೊಬ್ಬ ತಂದೆ&ತಾಯಿ ಕರ್ತವ್ಯ. ದೊಡ್ಡವರಾದ ಮೇಲೆ ತಂದೆ&ತಾಯಿಯನ್ನು ಅತ್ಯಂತ ಶ್ರದ್ಧೆ ವಿಶ್ವಾಸದಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ನಾವು ನಮ್ಮ ಹೆತ್ತವರಿಗೆ ಯಾವ ರೀತಿ ಪೂಜ್ಯನಿಯ ಭಾವದಿಂದ ನೋಡುತ್ತೇವೆ ಅಷ್ಟೇ ಪೂಜ್ಯನಿಯ ಭಾವನೆಯಿಂದ ನಮ್ಮ ಸುತ್ತಮುತ್ತಲಿನ ಸಮಾಜ ನಮ್ಮನ್ನು ನೋಡುತ್ತದೆ ಎಂದು ಹೇಳಿದರು.
ಒಟ್ಟಾರೆ ಗುರುಗಳ ಸ್ಮರಣೆ, ಭಗವಂತನ ಸ್ಮರಣೆ, ರಾಮನಾಮ ಸ್ಮರಣೆ ನಿತ್ಯ ಎಲ್ಲರೂ ಮಾಡಬೇಕು ಎಂದರು. ನಂತರ ಶ್ರೀ ಮೂಲರಾಮ ದಿಗ್ವಿಜಯ ರಾಮಚಂದ್ರ ದೇವರ ಸಂಸ್ಥಾನ ಪೂಜೆ, ತೀರ್ಥ ಪ್ರಸಾದ, ಫಲಮಂತ್ರಾಕ್ಷತೆ ಜರುಗಿತು. ಅರ್ಚಕ ಹಳ್ಳೆಪ್ಪಾಚಾರ್ಯ ಚನ್ನೂರ ಹಾಗೂ ಮನೋಜ ನಾಡಿಗೇರ ನೇತೃತ್ವದಲ್ಲಿ ಯತಿಚತುಷ್ಠಯ ವೃಂದಾವನಕ್ಕೆ ವಿಶೇಷ ಅಲಂಕಾರ ಜರುಗಿತು.
ವಾಮನರಾವ ದೇಶಪಾಂಡೆ, ಬಾಳಕೃಷ್ಣ್ಣರಾವ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಶ್ರೀಪಾದಭಟ್ಟ ಜೋಷಿ, ನರಸಿಂಹರಾವ ಕುಲಕರ್ಣಿ, ಡಾ. ಹಳ್ಳೇರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ, ಶೇಷಗಿರಿರಾವ ಕುಲಕರ್ಣಿ, ರಾವೇಂದ್ರ ನಾಡಿಗೇರ, ಉಡುಪಿರಾವ ತಿಳಗೂಳ, ಗುರುರಾಜ ತಿಳಗೂಳ, ಕೃಷ್ಣಾಜಿ ಕುಲಕರ್ಣಿ, ಸಂಜೀವರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ರಂಗನಾಥ ಕುಲಕರ್ಣಿ, ಮಲ್ಲಾರಾವ ಕುಲಕರ್ಣಿ ಇತರರಿದ್ದರು.