ಸರ್ಜಾಪುರದ ಮುಗಳೂರು ಗ್ರಾಪಂ ವ್ಯಾಪ್ತಿಯ ಮಹಲ್​ ಚೌಡದೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜ್ಞಾನಮಂದಿರದ ಭಕ್ತಿ ವೇದಾಂತ ಗ್ರಂಥಾಲಯವನ್ನು ವೈದ್ಯ ಡಾ.ಪರಮೇಶ್​ ಉದ್ಘಾಟಿಸಿದರು. ಆನೇಕಲ್​ ತಾಪಂ ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಮುಖಂಡರಾದ ಅ.ಕೃಷ್ಣಪ್ಪ, ವೆಂಕಟೇಶಪ್ಪ, ಬಾಲರಾಜು, ಪಿ.ಕೃಷ್ಣ, ನಾಗೇಂದ್ರ ಇತರರು ಇದ್ದರು. 
ರಾಜ್ಯ

ಸಂಸತಿ ಉಳಿವಿಗೆ ಧಾರ್ಮಿಕ ಚಿಂತನೆ ಅಗತ್ಯ / SARJAPUR

ಸರ್ಜಾಪುರ : ಇಂದಿನ ಯಾಂತ್ರಿಕ ಹಾಗೂ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿಗಾಗಿ ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ತೋರಬೇಕಿದೆ. ಭಜನೆ, ಕೀರ್ತನೆ, ಸತ್ಸಂಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದರ ಜತೆಗೆ ಉತ್ತಮ ಚಿಂತನೆಗಳು ಬೆಳೆಯುತ್ತವೆ ಎಂದು ವೈದ್ಯ ಡಾ.ಪರಮೇಶ್​ ಹೇಳಿದರು.
ಮುಗಳೂರು ಗ್ರಾಪಂ ವ್ಯಾಪ್ತಿಯ ಮಹಲ್​ ಚೌಡದೇನಹಳ್ಳಿಯಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜ್ಞಾನಮಂದಿರದ ಭಕ್ತಿ ವೇದಾಂತ ಗ್ರಂಥಾಲಯ ಉದ್ಘಾಟನೆ ಮತ್ತು ನಿರಂತರ ಮಾಸಿಕ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ನಿರಂತರ ಮಾಸಿಕ ಭಜನಾ ಕಾರ್ಯಕ್ರಮವು ಯುವಜನರಲ್ಲಿ ಧಾರ್ಮಿಕ ಚಿಂತನೆ ಬೆಳೆಸುವುದರ ಜತೆಗೆ ಸಂಸತಿ ಹಾಗೂ ಪರಂಪರೆ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಶ್ರೀ ಕೃಷ್ಣ ಜ್ಞಾನಮಂದಿರದ ಭಕ್ತಿ ವೇದಾಂತ ಗ್ರಂಥಾಲಯದಲ್ಲಿ ದಿನ ಪತ್ರಿಕೆಗಳು, ಆಧ್ಯಾತ್ಮಿಕ, ಸಾಂಸತಿಕ, ಸಾಹಿತ್ಯ ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಾವಿರಾರು ಪುಸ್ತಕಗಳು ಲಭ್ಯವಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ವಿಧಾನಪರಿಷತ್​ ಸದಸ್ಯ ಸಿ.ಆರ್​.ಮನೋಹರ್​ ಮಾತನಾಡಿ, ಆಧ್ಯಾತ್ಮಿಕತೆ ಮತ್ತು ಜ್ಞಾನ ಎರಡೂ ಬದುಕನ್ನು ಉತ್ತಮಗೊಳಿಸುವ ಶಕ್ತಿಯಾಗಿದ್ದು, ಇಂತಹ ಕೇಂದ್ರಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಭಕ್ತಿ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳು ಸದೃಢ ಸಮಾಜ ನಿಮಾರ್ಣಕ್ಕೆ ಅಗತ್ಯ. ಧಾರ್ಮಿಕ ಕಾರ್ಯಕ್ರಮಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚಿಸುತ್ತವೆ ಎಂದು ಹೇಳಿದರು.
ಸಂಜೆ ಆರಂಭವಾದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಭಕ್ತೀಗಿತೆ ಹಾಡಿದರು. ಈ ವೇಳೆ ಇಸ್ಕಾನ್​ ಯೂತ್​ ಸಂಘದ ಸದಸ್ಯರು ಭಗವದ್ಗೀತೆ ಪಠಣ, ಹರಿನಾಮ ಸಂಕೀರ್ತನೆ ಹಾಗೂ ಆಧ್ಯಾತ್ಮಿಕ ಉಪನ್ಯಾಸ ನಡೆಸಿಕೊಟ್ಟರು. ನಂಜುಂಡಪ್ಪ, ಬಾಬು, ಮಣಿ, ವನ್ನಟ್ಟಿ ನಾರಯಣಸ್ವಾಮಿ, ಶ್ರೀನಿವಾಸ್​, ಬಿ.ವೆಂಕಟೇಶ್​, ಉಮಾದೇವಿ, ಡಾ.ರಾಧಿಕಾ ದೇವಿ, ಪರಶಿವ ದಾಸ್​, ಭೀಮಾಚಾರಿ ಇತರರು ಇದ್ದರು.