ನಾಲವಾರ ವಲಯದ ಸುೇತ್ರ ಸೂಗೂರ(ಎನ್​)ನ ಸ್ವಯಂಸಿದ್ದ ಭೋಜಲಿಂಗೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ಬಸವರಾಜ ಅನ್ವರಿ ಮಾತನಾಡಿದರು. ಪೂಜ್ಯ ಹಿರಗಪ್ಪ ತಾತನವರು, ಡಾ.ಅಪ್ಪಾರಾವ ದೇವಿ ಮುತ್ಯಾ ಇತರರು ಇದ್ದರು.  
ರಾಜ್ಯ

ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ: ಅನ್ವರಿ

ಬಾಬುರಾವ ಯಡ್ರಾಮಿ
ನಾಲವಾರ: ಭರತ ಭೂಮಿ ಪವಿತ್ರ ಶರಣರ, ಸೂಫಿ&ಸಂತರ ನಾಡು, ಇಲ್ಲಿ ಭಕ್ತಿಗೆ ಮೊದಲು ಜನರು ಆದ್ಯತೆ ನೀಡುವುದರಿಂದ ವಿಶ್ವದಲ್ಲಿಯೇ ನಮ್ಮ ದೇಶ ಎಲ್ಲರನ್ನೂ ಆಕರ್ಷಿಸಿದೆ, ಗ್ರಾಮೀಣ ಭಾಗದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ ಶಾಂತಿ&ನೆಮ್ಮದಿ, ಸಾಮರಸ್ಯ ಮೂಡಿ ಬದಲಾವಣೆಗೆ ಪ್ರೇರಣೆ ನೀಡುತ್ತವೆ ಎಂದು ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್​ ಅನ್ವರಿ ಹೇಳಿದರು.
ಅವರು ನಾಲವಾರ ವಲಯದ ಸುೇತ್ರ ಸೂಗೂರ (ಎನ್​) ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶೀ ಭೋಜಲಿಂಗೇಶ್ವರ ದೇವಸ್ಥಾನದ ಮೂರ್ತಿ ಸ್ಥಾಪನೆ ಹಾಗೂ ಕಳಸಾರೋಹಣ ನಂತರ ನಡೆದ ಧರ್ಮ ಸಭೆಯಲ್ಲಿ ಮಾತನಾಡುತ್ತ, ಇಂದು ಸಮಾಜದಲ್ಲಿ ಆರ್ಥಿಕ ಸಂಪನ್ಮೂಲ ಹೊಂದಿದ ಸಹಸ್ರಾರು ಜನರಿದ್ದಾರೆ, ಆದರೆ ಸಾಮಾಜಿಕ ಕಾಳಜಿ, ಪರೋಪಕಾರಿ ಮನೋಭಾವನೆ ಹೊಂದಿದವರ ಸಂಖ್ಯೆ ಕಡಿಮೆಯಾಗುತ್ತಿದೆ, ಶೀಗಳ ಮಾರ್ಗದರ್ಶನದಲ್ಲಿ ನಾವೇಲ್ಲರೂ ಸ್ವಲ್ಪ ಸಮಯ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಕೃಷಿ ದೇಶದ ಬೆನ್ನೆಲುಬು ಎಂದು ಎಲ್ಲರೂ ಕರೆಯುತ್ತಾರೆ, ಇಲ್ಲಿನ ಶೀಗಳು ಅವರ ಕೃಷಿ ಚಟುವಟಿಕೆಗಳು ನಮ್ಮ ನಿರುದ್ಯೋಗ ಯುವಕರಿಗೆ ಪ್ರೇರಣೆಯಾಗಲಿ ಎಂದು ಅಭಿಪ್ರಾಯ ಪಟ್ಟು, ಬರುವ ದಿನಗಳಲ್ಲಿ ಶೀಮಠವೂ ನಾಡಿನ ಭಾವೈಕ್ಯತೆಯ ಧಾರ್ಮಿಕ ಕೇಂದ್ರವಾಗಿ ವಿವಿಧ ೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶ ಸಿಗಲಿ ಎಂದು ಹೇಳಿದರು.
ಆಂದೋಲಾದ ಶೀ ಸಿದ್ದಲಿಂಗ ಸ್ವಾಮಿಜಿ ಮಾತನಾಡಿ, ದೇಶದಲ್ಲಿ ಹಲವಾರು ಶರಣರು, ಶರಣೆಯರನ್ನು ಕಾಣುತ್ತೇವೆ, ಆದರೆ ಸಿದ್ದಿಪುರುಷರನ್ನು ಕಾಣುವುದು ಕಡಿಮೆ, ಅಂತವರ ಸಾಲಿನಲ್ಲಿ ಭೋಜಲಿಂಗೇಶ್ವರರು ಬಸವಣ್ಣನವರು ಹೇಳಿದಂತೆ ಮೊದಲು ತನನ್ನು ತಾನೂ ಅರಿ ಎನ್ನುವಂತೆ ಅರಿತು ಆಧ್ಯಾತ್ಮೀಕ ಸಾಧನೆ ಮಾಡಿ, ಸಿದ್ದಿಪುರುಷರಾಗಿ ತಮ್ಮ ಪವಾಡಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಮನುಕುಲಕ್ಕೆ ಮಾನವೀಯ ಮೌಲ್ಯ ಸಂದೇಶಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವವನ್ನು ಶೀ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಶೀನಿವಾಸ ಸರಡಗಿಯ ಡಾ.ಅಪ್ಪಾರಾವ ದೇವಿ ಮುತ್ಯಾ, ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯರು,ಚನ್ನವಿರ ದೇವರು, ಸೊಪ್ಪಿಮಠ ಯಾದಗಿರಿಯ ರಾಜೇಂದ್ರ ಶಿವಾಚಾರ್ಯರು, ಹಲಕರಟಿಯ ಅಭಿನವ ಮುನೀಂದ್ರ ಶಿವಾಚಾರ್ಯರು, ಮುಗುಳನಾಗಾವಿ ಮಹಾನಗರದ ಜೇಮ್​ಸಿಂಗ್​ ಮಹಾರಾಜರು, ಯರಗೋಳದ ಸಂಗಮನಾಥ ದೇವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.