ರಾಜ್ಯ

ಕೆಂಭಾವಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಾಳೆಯಿಂದ

ಬಾಬುರಾವ ಯಡ್ರಾಮಿ
ಕೆಂಭಾವಿ: ಅಧಿಕ ಮಾಸ ನಿಮಿತ್ತ ಪಟ್ಟಣದ ಉತ್ತರಾದಿ ಮಠದಲ್ಲಿ ಕೂಡಲಿ ಆರ್ಯ ಅೋಭ್ಯತಿರ್ಥ ಮಠಾಧೀಶ ಶ್ರೀ ರುವಿಜಯತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಸೋಮವಾರದಿಂದ ಎಂಟು ದಿನಗಳ ಕಾಲ ಹಲವು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಸತ್ಯಪ್ರಮೋದ ಸೇವಾ ಸಂದ ಅಧ್ಯಕ್ಷ ವಾಮನರಾವ ದೇಶಪಾಂಡೆ ತಿಳಿಸಿದರು.
ಈ ಕುರಿತು ಶನಿವಾರ ಮಾಹಿತಿ ನೀಡಿದ ಅವರು, ಭಾನುವಾರ ರಾತ್ರಿ ಬೆಳಗಾವಿ ನಗರದಿಂದ ಆಗಮಿಸುವ ಶ್ರೀಗಳನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥರ ಆಜ್ಞಾನುಸಾರ ಶ್ರೀ ರುವಿಜಯತೀರ್ಥ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಮಣ್ಣೂರಿನ ವೇದೇಶ ತೀರ್ಥ ವಿದ್ಯಾಪಿಠದ ಉಪ ಕುಲಪತಿ ಪಂ.ಸರ್ವೇಶಾಚಾರ್ಯ ಅಕಮಂಚಿ ಅವರು ಆರು ದಿನಗಳ ಕಾಲ ವಿಶೇಷ ಧಾರ್ಮಿಕ ಶಿಬಿರ ನಡೆಸಿಕೊಲಿದ್ದಾರೆ.
ಈ ಶಿಬಿರದಲ್ಲಿ ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ನಿತ್ಯ ನೈಮಿತ್ತಿಕ ಕರ್ಮಗಳು, ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಜಾಗೃತಿ ಕುರಿತು ಶಿಬಿರ ನಡೆಯಲಿದೆ.
ಈ ವೇಳೆ ಶ್ರೀ ಸತ್ಯನಾರಾಯಣ, ಶ್ರೀ ಸುಮಧ್ವ ಮಾರುತಿ ಮತ್ತು ಯತಿ ಚತುಷ್ಠಯ ವೃಂದಾವನಕ್ಕೆ ಶ್ರೀ ರುವಿಜಯತೀರ್ಥರಿಂದ ಪಂಚಾಮೃತ ಅಭಿಷೇಕ, ಹಲವು ಭಕ್ತರ ಮನೆಯಲ್ಲಿ ಶ್ರೀಗಳ ಪಾದಪೂಜೆ, ವೈಕುಂಠ ರಾಮಚಂದ್ರ ದೇವರ ಸಂಸ್ಥಾನ ಪೂಜೆ, ಸಂಜೆ ಪಂಡಿತರ ಉಪನ್ಯಾಸ, ಶ್ರೀಗಳ ಆಶೀರ್ವಚನ, ಪಲ್ಲಕ್ಕಿ ರಥೋತ್ಸವ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 25ರಂದು ದುಮ್ಮದ್ರಿ ಶ್ರೀ ವರಹಳ್ಳೇರಾಯನ ೇತ್ರದಲ್ಲಿ ಶ್ರೀಗಳಿಂದ ವಿಶೇಷ ಪೂಜೆ ನೆರವೇರಲಿದೆ ಎಂದು ಅವರು ತಿಳಿಸಿದರು.