ಮೇರಿ ಮಾತೆ ಜಯಂತಿ ಹಿನ್ನೆಲೆಯಲ್ಲಿ ಭಕ್ತರು ನಾಪೋಕ್ಲುವಿನ ಸಂತ ಮೇರಿ ಮಾತೆಯ ದೇವಾಲಯಕ್ಕೆ ಭತ್ತದ ತೆನೆ, ಕಬ್ಬುಗಳೊಂದಿಗೆ ಆಗಮಿಸಿರುವುದು.
- ಸಂತ ಮೇರಿ ಮಾತೆ ದೇವಾಲಯ
- ಮೇರಿ ಮಾತೆ ಜಯಂತಿ
ನಾಪೋಕ್ಲು: ಸ್ಥಳೀಯ ಸಂತ ಮೇರಿ ಮಾತೆ ದೇವಾಲಯದಲ್ಲಿ ಮೇರಿ ಮಾತೆ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಒಂಬತ್ತು ದಿನಗಳಿಂದ ದೇವಾಲಯದಲ್ಲಿ ವಿಶೇಷ ನೊವೇನಾ ಪ್ರಾರ್ಥನೆ, ಬೋಧನೆ, ಉಪ್ಪಾರ್ಚನೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೆರವಣಿಗೆಯಲ್ಲಿ ಭತ್ತದ ತೆನೆ, ಕಬ್ಬುಗಳೊಂದಿಗೆ ಭಕ್ತರು ದೇವಾಲಯಕ್ಕೆ ಆಗಮಿಸಿದರು. ಧರ್ಮಗುರು ಫಾ.ವಿಕ್ಟರ್ ಭತ್ತದ ತೆನೆಗಳನ್ನು ಆಶೀರ್ವದಿಸಿ ಸರ್ವರಿಗೂ ವಿತರಿಸಿದರು.
ವಿಶೇಷ ಗಾಯನ ಬಲಿ ಪೂಜೆಯಲ್ಲಿ ಮೇರಿ ಮಾತೆಯ ಆದರ್ಶದ ಸಂದೇಶವನ್ನು ತಿಳಿಸಲಾಯಿತು. ದೇವಾಲಯ ಆವರಣದಲ್ಲಿ ಸಿಂಗರಿಸಿದ್ದ ಮೇರಿಮಾತೆಯ ಸ್ವರೂಪಕ್ಕೆ ಭಕ್ತರು ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು. ತದನಂತರ ಹೊಸ ಅಕ್ಕಿಯ ಊಟದ ಅನ್ನದಾನ ನಡೆಯಿತು.