ಬಾಕಿ ಉಳಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ವಿವಿಧ ಬಗೆಯ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಶಾ ಕಾರ್ಯಕರ್ತೆಯರ ಸಂದ ಪಧಾದಿಕಾರಿಗಳು ಮಂಗಳವಾರ ಜಿಪಂ ಸಿಇಒ ಲವೀಶ್​ ಒರ್ಡಿಯಾ ಅವರಿಗೆ ಮನವಿಪತ್ರ ಸಲ್ಲಿಸಿದರು. ಡಿ.ಉಮಾದೇವಿ, ಕೆ.ಸೋಮಶೇಖರ, ಪುಷ್ಪಲತಾ, ಚಾಂದ್​ಬಿ, ದಾನಮ್ಮ, ಶಾರದಾ, ಇಂದ್ರಮ್ಮ, ಚಂದ್ರಕಲಾ, ಗಂಗಿಮಾಳಮ್ಮ ಇತರರಿದ್ದರು. 
ರಾಜ್ಯ

ಬಾಕಿ ಪ್ರೋತ್ಸಾಹ ಧಣ ಬಿಡುಗಡೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಆಗ್ರಹ
  • ಆಶಾ ಕಾರ್ಯಕರ್ತೆಯರ ಸಂಘದಿಂದ ಮನವಿ
ಯಾದಗಿರಿ: ಬಾಕಿ ಉಳಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ವಿವಿಧ ಬಗೆಯ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್​ ಒರ್ಡಿಯಾ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂದ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಮೂರು ತಿಂಗಳಿಂದ ಕೇಂದ್ರ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನ ಹಾಗೂ ರಾಜ್ಯ ಸರ್ಕಾರದ ನಿಶ್ಚಿತ ಗೌರವ ಧನ ಬಾಕಿ ಇದೆ. ಕಳೆದ ಮೂರು ವರ್ಷಗಳಿಂದ ಟಿಬಿ ರೋಗಿಗಳ ಚಿಕಿತ್ಸೆಯ ಪೋತ್ಸಾಹ ಧನ ಪಾವತಿಯಾಗಿಲ್ಲ. ನಿವೃತ್ತ ಮತ್ತು ಕೆಲಸ ಬಿಟ್ಟ ಕಾರ್ಯಕರ್ತೆಯರಿಗೂ ನಿವೃತ್ತಿ ಪರಿಹಾರವೂ ನೀಡಿಲ್ಲ ಎಂದರು.
ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳ ಪೋತ್ಸಾಹ ಮತ್ತು ಗೌರವ ಧನ ನೀಡಬೇಕು. ಒಂದು ತಿಂಗಳಲ್ಲಿ ಮಾಡಿದ ಎಲ್ಲ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಪಾವತಿಸಬೇಕು. ವಿವಿಧ ಆಶಾ ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯೆಗೊಳಿಸಿರುವುದನ್ನು ಕೈ ಬಿಟ್ಟು ಈ ಸೇವೆಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಸರ್ವೇಗಾಗಿ ಆಶಾ ಕಾರ್ಯಕರ್ತೆಯರಿಗೆ ನಿಗದಿ ಮಾಡಿದ್ದ 1 ಸಾವಿರ ರೂ.ಬಿಡುಗಡೆ ಮಾಡಬೇಕು. ನಿವೃತ್ತರ ಇಡಿಗಂಟು ಪಾವತಿ ಮಾಡಬೇಕು. ಸಮಸ್ತ ಆ್ಯಪ್​ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು. ಮೌಲ್ಯಮಾಪನ ಹೆಸರಲ್ಲಿ ಆಶಾಗಳಿಗೆ ಆಗುತ್ತಿರುವ ಶೋಷಣೆ ನಿಲ್ಲಿಸಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು.
ಬೇಡಿಕೆಗಳ ಕುರಿತು ಅರೋಗ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸಿಇಒ ಸಂದ ನಿಯೋಗಕ್ಕೆ ಭರವಸೆ ನೀಡಿದರು. ಸಂದ ಅಧ್ಯ ಕೆ.ಸೋಮಶೇಖರ, ಪದಾಧಿಕಾರಿಗಳಾದ ಪುಷ್ಪಲತಾ, ಚಾಂದ್​ಬಿ, ದಾನಮ್ಮ, ಶಾರದಾ, ಇಂದ್ರಮ್ಮ, ಚಂದ್ರಕಲಾ, ಗಂಗಿಮಾಳಮ್ಮ, ಸಂಪತಕುಮಾರಿ, ರೇಣುಕಾ, ಶಾಂತ, ಲಕ್ಷ್ಮೀ ವಿಜಯಲಕ್ಷ್ಮೀ ಇತರರಿದ್ದರು.