- ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನಿರ್ದೇಶನ
- ಸ್ವಾಗತಿಸಿದ ಆದರ್ಶ ಕನ್ನಡ ಬಳಗ
- ಗಡಿನಾಡ ಮಕ್ಕಳ ಶಿಷ್ಯವೇತನ
ಸೊಲ್ಲಾಪುರ: ಮಹಾರಾಷ್ಟ್ರ ಸೇರಿ ಗಡಿ ಮತ್ತು ಹೊರನಾಡಿನ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಬಾಕಿ ಉಳಿದಿದ್ದ ಮಾಧ್ಯಮ ಪ್ರಶಸ್ತಿ ಶಿಷ್ಯವೇತನ ಹಾಗೂ ಪ್ರಸಕ್ತ ಸಾಲಿನ ಪ್ರೋತ್ಸಾಹಧನ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗಡಿನಾಡಿನ ಕನ್ನಡಿಗರ ಶೈಣಿಕ ಹಿತಾಸಕ್ತಿ ಗಮನದಲ್ಲಿಟ್ಟು ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇಲಾಖೆ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿರುವುದು ಗಡಿ ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂಲಕ ಮಾಧ್ಯಮ ಪ್ರಶಸ್ತಿ ಯೋಜನೆ ಗಡಿನಾಡ ಮತ್ತು ಹೊರನಾಡಿನ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮಹತ್ವದ ಯೋಜನೆ. ಆದರೆ ಎರಡು ವರ್ಷಗಳಿಂದ ಶಿಷ್ಯವೇತನ ಬಿಡುಗಡೆ ಆಗದ್ದರಿಂದ ವಿದ್ಯಾರ್ಥಿ ಮತ್ತು ಪಾಲಕರು ತೀವ್ರ ನಿರಾಸೆಗೆ ಒಳಗಾಗಿದ್ದರು. ಜತೆಗೆ ಗಡಿನಾಡಿನ ಕನ್ನಡ ಶಾಲೆಗಳ ಅಸ್ತಿತ್ವಕ್ಕೂ ಧಕ್ಕೆಯಾಗುವ ಆತಂಕ ಮೂಡಿಸಿತ್ತು. ಶಿಷ್ಯವೇತನ ಬಿಡುಗಡೆ ವಿಳಂಬ ಕುರಿತು ಆದರ್ಶ ಕನ್ನಡ ಬಳಗ ಸರ್ಕಾರದ ಗಮನಸೆಳೆದು ಶ್ರೀ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಸರ್ಕಾರ ಸ್ಪಂದಿಸಿ ಪ್ರೋತಾಹಧನ ಬಿಡುಗಡೆಗೆ ಆದೇಶಿಸಿರುವುದನ್ನು ಬಳಗ ಸ್ವಾಗತಿಸಿದೆ.
"
ಕರ್ನಾಟಕ ಸರ್ಕಾರದ ಈ ಶಿಷ್ಯವೇತನ ಮುಂದಿನ ಶಿಣಕ್ಕಾಗಿ ಬಹಳಷ್ಟು ಅನುಕೂಲವಾಗುತ್ತದೆ. ಆದಷ್ಟು ಬೇಗ ಸರ್ಕಾರ ಈ ಪ್ರೋತ್ಸಾಹಧನ ನೀಡಬೇಕು. ಜತೆಗೆ ಈ ಯೋಜನೆ ಎಂದಿಗೂ ನಿಲ್ಲಿಸಬಾರದು.
— > ಸೌಂದರ್ಯ ಕಣ್ಣಿ 12ನೇ ತರಗತಿ ವಿದ್ಯಾರ್ಥಿನಿ, ಸೊಲ್ಲಾಪುರ
"
ಗಡಿನಾಡ ಮಕ್ಕಳ ಶೈಣಿಕ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ನಿರ್ಧಾರ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಬರಲಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಧನ್ಯವಾದಗಳು,
— > ಮಲಿಕ್ಜಾನ್ ಶೇಖ್ ಆದರ್ಶ ಕನ್ನಡ ಬಳಗದ ಅಧ್ಯ