ಪ್ರದಿಪ ಕಡಣಿ 
ರಾಜ್ಯ

ವಿದ್ಯುತ್​ ಸುರಕ್ಷತಾ ನಿಯಮ ಸಡಿಲಿಕೆ ಸರಿಯಲ್ಲ

ಅಫಜಲಪುರ: ರಾಜ್ಯದಲ್ಲಿ ಜಾರಿಯಲ್ಲಿರುವ ವಿದ್ಯುತ್​ ಸುರಕ್ಷತಾ ನಿಯಮಗಳ ಸಡಿಲಿಕೆ ಸರಿಯಲ್ಲ. 150 ಕಿಲೋವ್ಯಾಟ್​ವರೆಗೆ ಸುರತಾ ಪ್ರಮಾಣ ಪತ್ರವಿಲ್ಲದೆ ವಿದ್ಯುತ್​ ಸರಬರಾಜು ಮಾಡಲು ಅವಕಾಶ ನೀಡುವುದು ಕಾನೂನು ಬಾಹಿರವಾಗಿದೆ ಎಂದು ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್​ಸಿ/ಎಸ್​ಟಿ) ವಿದ್ಯುತ್​ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯ ಪ್ರದಿಪ್​ ಕಡಣಿ ದೂರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ವಿದ್ಯುತ್​ ಸುರಕ್ಷತೆ ಹಾಗೂ ಪರಿವೀಣೆ ವ್ಯವಸ್ಥೆಯಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಈ ವ್ಯವಸ್ಥೆ ದುರ್ಬಲಗೊಳಿಸುವ ಕ್ರಮ ಕೈಗೊಳ್ಳಬಾರದು. ಈಗಾಗಲೇ ರಾಜ್ಯದ ಸಾವಿರಾರು ಪರವಾನಗಿ ಪಡೆದ ವಿದ್ಯುತ್​ ಗುತ್ತಿಗೆದಾರರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಅವಕಾಶ ನೀಡಿದರೆ ವಿದ್ಯುತ್​ ಅಪಘಾತ ಹೆಚ್ಚಾಗುವುದಲ್ಲದೆ, ರಾಜ್ಯದಲ್ಲಿ ಜಾರಿಯಲ್ಲಿರುವ ವಿದ್ಯುತ್​ ಸುರತಾ ಮಾನದಂಡಗಳ ಉಲ್ಲಂಘನೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.