Relax the rules for fertilizer distribution.
ಕೋಲಾರ: ಆಧಾರ್ ಮತ್ತು ಪಹಣಿ ಆಧಾರದ ಮೇಲೆ ರಸಗೊಬ್ಬರ ವಿತರಣೆಗೆ ಸರ್ಕಾರಆದೇಶಿಸಿದ್ದು, ಇದರಿಂದ ರೈತರಿಗೆ ತೊಂದರೆ ಎದುರಾಗುತ್ತಿದೆ. ಕೂಡಲೇ ಈ ನಿಯಮ ಸಡಿಲಿಸಬೇಕು ಎಂದು ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಹೇಳಿದರು.
ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ 50 ಲಾನುಭವಿಗಳಿಗೆ 62.76 ಲಕ್ಷ ರೂ.ಚೆಕ್ ವಿತರಿಸಿ ಮಾತನಾಡಿದರು.
ಹಿಂದೆ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸೊಸೈಟಿಯಿಂದ ಗೊಬ್ಬರ ವಿತರಣೆ ಮಾಡಲಾಗುತ್ತಿತ್ತು. ಸಣ್ಣ, ಮಧ್ಯಮ ಹಾಗೂ ದೊಡ್ಡಮಟ್ಟದ ರೈತರು ಇರುತ್ತಾರೆ. ನಾಟಿ ಮಾಡಿದ ಬೆಳೆಗೆ ತಕ್ಕಂತೆ ರಸಗೊಬ್ಬರ ಬೇಕಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧದ ವಾತಾವರಣವು ರಸಗೊಬ್ಬರ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಅಗತ್ಯಕ್ಕೆ ತಕ್ಕಂತೆ ಸರಬರಾಜು ಮಾಡಲು ಸರ್ಕಾರಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇದೀಗ ವ್ಯವಹಾರ ತಗ್ಗಿಸಿ, ಜನರಿಂದ ದೂರ ಸರಿಯುತ್ತಿದೆ. ಇದಕ್ಕೆ ಕಾರಣ ಯಾರೇ ಆಗಿದ್ದರು ಸಹ ಶಿೆಯಾಗಬೇಕು. ಇದೀಗ ಅಧಿಕಾರಿಗಳನ್ನು ಹೇಳೊರು, ಕೇಳೊರು ಇಲ್ಲದಂತಾಗಿದೆ. ಅವರು ಆಡಿದ್ದೆ ಆಟವಾಗಿದ್ದು, ನೀಡಿದ ಸಾಲ ಸಕಾಲಕ್ಕೆ ವಸೂಲಿ ಮಾಡದಿರುವುದರಿಂದ ನಷ್ಟಕ್ಕೆ ಒಳಗಾಗಿ ದಿವಾಳಿಯತ್ತ ಮುಖಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಡಗಟ್ಟೂರು ಸೊಸೈಟಿಯೂ ಸ್ವಂತ ಬಂಡವಾಳದಿಂದ ನಿವೇಶನ, ರೇಷ್ಮೆ ಹುಳು ಸಾಕಣೆ, ಬೆಳೆ ಸಾಲ, ಸ್ತ್ರೀಶಕ್ತಿ ಸಂಗಳ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಸಾಲ ತೆಗೆದುಕೊಂಡಿದ್ದವರು ಪ್ರಮಾಣಿಕವಾಗಿ ಮರುಪಾವತಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ, ಗ್ರಾಹಕರೇ ಸೋಸೈಟಿಯ ಶಕ್ತಿ, ಹೀಗೆ ನಂಬಿಕೆ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.