ಬೈಲಹೊಂಗಲ ನಗರದ ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ ಕಾರ್ಯಕ್ರಮದಲ್ಲಿ ಪತಿ, ಪತ್ನಿ ಒಂದಾಗಿ ಪರಸ್ಪರ ಹಾರ ಬದಲಾಯಿಸಿಕೊಂಡರು. ನ್ಯಾಯಾಧೀಶರಾದ ರವಿ ಚೌಹಾಣ, ರೋಹಿಣಿ ಬಸ್ಸಾಪುರ ಹಾಗೂ ಬಸವರಾಜ ನಾಯಕ, ಎಸ್​.ಜಿ.ಬೂದಯ್ಯನವರಮಠ, ಸಿ.ಎಸ್​.ಚಿಕ್ಕನಗೌಡ್ರ, ಎಸ್​.ಜೆ.ಬಾವಿ ಇತರರಿದ್ದರು. 
ರಾಜ್ಯ

ಸಂಬಂಧ ವೃದ್ಧಿಗೆ ಲೋಕ ಅದಾಲತ್​

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಸಮಾಜದಲ್ಲಿ ವೈಮನಸ್ಸು ಕಡಿಮೆಗೊಳಿಸಿ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಲು ಲೋಕ ಅದಾಲತ್​ ಸೂಕ್ತ ವೇದಿಕೆಯಾಗಿದೆ. ಇದರಿಂದ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗಲು ಸಹಕಾರಿಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚೌಹಾಣ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್​ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಾಲಯಗಳಲ್ಲಿ ದೀರ್ಕಾಲ ಬಾಕಿ ಉಳಿದ ಪ್ರಕರಣ ರಾಜಿ
ಸಂಧಾನದ ಮೂಲಕ ಪರಿಹರಿಸುವುದರಿಂದ ಸಂಬಂಧ ಸುಧಾರಿಸುತ್ತವೆ ಎಂದರು.
ವಿವಾಹ ವಿಚ್ಛೇದನ ಹಾಗೂ ಪೋಟಗಿ ಸಂಬಂಧಿತ ಎರಡು ಪ್ರಕರಣಗಳಲ್ಲಿ ಬೇರ್ಪಟ್ಟಿದ್ದ ದಂಪತಿಯನ್ನು ಸಂಧಾನದ ಮೂಲಕ ಮತ್ತೆ ಒಂದಾಗಿಸುವಲ್ಲಿ ಲೋಕ ಅದಾಲತ್​ ಯಶಸ್ವಿಯಾಯಿತು. ಈ ಪ್ರಕರಣದಲ್ಲಿ ಕದಾರರ ಪರ ವಕೀಲರು ಕೆ.ಎಸ್​.ಕುಲಕರ್ಣಿ, ಎ.ಎಂ. ಕಾರೆಕಾಜಿ, ಲಕ್ಷಿ$್ಮ ಬಾವಿಹಾಳ, ಬಿ.ಆರ್​.ಅಂಗಡಿ ಹಾಗೂ ಸಂಧಾನಕಾರ ಎ.ಎ್​.ಪಟ್ಟಿಹಾಳ ಕಾರ್ಯನಿರ್ವಹಿಸಿದರು.
718 ಪ್ರಕರಣಗಳು ರಾಜಿ: ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚೌಹಾಣ, ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಸಮ್ಮುಖದಲ್ಲಿ ನಡೆದ ಲೋಕ ಅದಾಲತ್​ನಲ್ಲಿ ಒಟ್ಟು 718 ಪ್ರಕರಣಗಳು ರಾಜಿಯಾಗಿ ಸುಮಾರು 7.69 ಕೋಟಿ ರೂ. ಮೊತ್ತದ ವ್ಯವಹಾರಗಳು ಹೊಂದಾಣಿಕೆಯಾದವು. ವ್ಯಾಜ್ಯಪೂರ್ವ ಹಂತದಲ್ಲಿದ್ದ 8,611 ಪ್ರಕರಣ ಇತ್ಯರ್ಥಗೊಂಡು 68.84 ಲ ರೂ. ಹೊಂದಾಣಿಕೆಯಾದವು.
ಎಸ್​.ಜಿ.ಬೂದಯ್ಯನವರಮಠ, ಸಿ.ಎಸ್​.ಚಿಕ್ಕನಗೌಡ್ರ, ಎಸ್​.ಜೆ.ಬಾವಿ, ಎಂ.ಆರ್​.ಸೋಮನ್ನವರ, ಡಿ.ವೈ.ಗರಗದ, ಎಸ್​.ಐ. ಹೋಳಿ, ಐ.ಡಿ.ಒಂಟಿ, ಎಸ್​.ಐ.ಪಾಟೀಲ, ವಿಜಯಲಕ್ಷಿ$್ಮ ಹಿರೇಮಠ, ಸಂಜೀವ ಜುಮೇತ್ರಿ, ರೂಪಶ್ರೀ ಪತ್ತಾರ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ, ಶಿರಸ್ತೇದಾರ ಎಂ.ಎನ್​.ಬಡವನ್ನವರ, ಹಾಲೇಶ ಪಿ., ಉಮೇಶ ಕಾರಜೋಳ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರು ಮತ್ತು ನ್ಯಾಯಾಲಯ ಸಿಬ್ಬಂದಿ ಇದ್ದರು.