Rekha Adhyay to Channapatna Abhyudaya Cooperative Bank
ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ನ ನೂತನ ಅಧ್ಯರಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕಿ ರೇಖಾ ಉಮಾಶಂಕರ್ ಅವಿರೋಧ ಆಯ್ಕೆಯಾದರು.
ಗೀತಾಂಜಲಿ ಅಭಿಲಾಷ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತಾದರೂ ರೇಖಾ ಉಮಾಶಂಕರ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಅಂಜನ್ ಮೂರ್ತಿ ಅವಿರೋಧ ಆಯ್ಕೆ ೂಷಿಸಿದರು.
ನೂತನ ಅಧ್ಯೆ ರೇಖಾ ಉಮಾಶಂಕರ್ ಮಾತನಾಡಿ, ಜಿಲ್ಲೆಯ ಏಕೈಕ ಮಹಿಳಾ ಸಹಕಾರ ಬ್ಯಾಂಕ್ ಇದಾಗಿದ್ದು, ಎಲ್ಲರ ಸಹಕಾರದಿಂದ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ನಿರ್ದೇಶಕರ ಸಲಹೆ ಮತ್ತು ಸಹಕಾರದಿಂದ ಬ್ಯಾಂಕ್ಅನ್ನು ಮನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ಯಲಾಗುವುದು ಎಂದು ಭರವಸೆ ನಿಡಿದರು.
ಜೆಡಿಎಸ್ ಜಿಲ್ಲಾಧ್ಯ ಎಚ್.ಸಿ ಜಯಮುತ್ತು, ತಾಲೂಕು ಅಧ್ಯ ಗೋವಿಂದಹಳ್ಳಿ ನಾಗರಾಜು, ಪಿಎಲ್ಡಿ ಬ್ಯಾಂಕ್ ಅಧ್ಯ ಡಿ.ಎಂ.ಕುಮಾರ್, ಮುಖಂಡರಾದ ನಿಡಗೋಡಿ ಬಾಬು, ಮಾಕಳಿ ಶಿವಣ್ಣ, ಯಾಲಕ್ಕಿಗೌಡ, ಎಂ.ಎನ್.ರಾಜಶೇಖರ್, ಮಳೂರುಪಟ್ಟಣ ರವಿ, ಬಿಳಿಯಪ್ಪ, ಮಲ್ಲಂಗೆರೆ ನಾಗರಾಜು, ಸುಬ್ಬೇಗೌಡ, ಯೋಗಲಿಂಗು, ಗಂಗೇದೊಡ್ಡಿ ನಿಂಗೇಗೌಡ, ಬೋರೆಗೌಡ, ಸುಮುಖ್, ಲೋಕೇಶ್, ಕೃಷ್ಣೆಗೌಡ, ಪವನ್, ಮಧುಕರ್, ಆತ್ಮಾನಂದ ಇತರರಿದ್ದರು.