ಕಲಬುರಗಿಯ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಗುರುವಾರ ನಡೆದ ಅನುರೂಪ ರಾಯ್​ ನಿರ್ದೇಶನದ ಅಬೌಟ್​ ರಾಮ್​ ನಾಟಕವನ್ನು ನವದೆಹಲಿ ಕತ್​ ಕಥಾ ಪಪ್ಪೆಟ್​ ಆರ್ಟ್ಸ್​ ಟ್ರಸ್ಟ್​ ತಂಡವು ಪ್ರಸ್ತುತಪಡಿಸಿತು. 
ರಾಜ್ಯ

ಮಾನವೀಯ ಕಥೆಯಾಗಿ ಮರುಕಲ್ಪನೆ

ಪ್ರಮುಖ ಮುಖ್ಯಾಂಶಗಳು

  • ಅಬೌಟ್​ ರಾಮ್​ ನಾಟಕ ಪ್ರದರ್ಶನ
ಕಲಬುರಗಿ: ನಾಟಕೋತ್ಸವದ ಆರನೇ ದಿನವಾದ ಗುರುವಾರ ಸಂಜೆ ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಅನುರೂಪ ರಾಯ್​ ನಿರ್ದೇಶನದ ಸಂವಾದ ರಹಿತ ಅಬೌಟ್​ ರಾಮ್​ ನಾಟಕವನ್ನು ನವದೆಹಲಿ ಕತ್​ ಕಥಾ ಪಪ್ಪೆಟ್​ ಆರ್ಟ್ಸ್​ ಟ್ರಸ್ಟ್​ ತಂಡವು ಗೊಂಬೆಯಾಟದ ಮೂಲಕ ಅದ್ಭುತ ಪ್ರದರ್ಶನ ನೀಡಿತು.
ಭವಭೂತಿಯ ರಾಮಾಯಣದ ಮರುವಾಖ್ಯಾನವಾದ ಅಬೌಟ್​ ರಾಮ್​ ರಾಮಾಯಣವನ್ನು ಪ್ರೀತಿ, ವಿರಹ ಮತ್ತು ಆಂತರಿಕ ಸಂರ್ಷಗಳ ಒಂದು ಆತ್ಮೀಯ ಮಾನವೀಯ ಕಥೆಯನ್ನಾಗಿ ಮರುಕಲ್ಪಿಸಲಾಗಿದೆ.
ವನವಾಸದಲ್ಲಿದ್ದಾಗ ರಾವಣನಿಂದ ಅಪಹೃತಳಾದ ಸೀತೆಯನ್ನು, ರಾಮನು ರಾವಣನನ್ನು ಸಂಹರಿಸಿ ಪಡೆಯುತ್ತಾನೆ. ಆದರೆ ಆ ವಿಜಯವು ಅವನಿಗೆ ಶಾಂತಿ ನೀಡುವುದಿಲ್ಲ. ಒಬ್ಬ ರಾಜನಾಗಿ ತನ್ನ ಕರ್ತವ್ಯ ಹಾಗೂ ಪತಿಯಾಗಿ ತನ್ನ ಪ್ರೀತಿಯ ನಡುವೆ ಸಿಲುಕುವ ರಾಮನಿಗೆ ವಿಜಯವೇ ಅವನಿಗೆ ಯಾತನೆಯಾಗಿ ಪರಿಣಮಿಸುತ್ತದೆ.
ಈ ರೂಪಾಂತರವು ರಾಮನನ್ನು ಒಬ್ಬ ದೇವರೆಂದಲ್ಲದೆ, ವಿರಹ, ನೈತಿಕ ಸಂರ್ಷ ಮತ್ತು ರಾಜ್ಯದ ಕ್ರೂರ ನಿರೀೆಗಳಿಂದ ಹೈರಾಣಾದ ಒಬ್ಬ ಮನುಷ್ಯನನ್ನಾಗಿ ಚಿತ್ರಿಸುತ್ತದೆ. ಯುದ್ಧ, ಸಾವು&ನೋವು ಮತ್ತು ಆತ್ಮಸಂದೇಹಗಳ ನಡುವೆ ಸಾಗುವ ಆತನ ಆಂತರಿಕ ಪಯಣವನ್ನು ಈ ನಾಟಕ ಚಿತ್ರಿಸುತ್ತಾ ಪವಿತ್ರತೆ, ಸ್ವೀಕಾರ ಹಾಗೂ ದೈವತ್ವಕ್ಕಾಗಿ ಒಬ್ಬ ಮನುಷ್ಯ ತೆರಬೇಕಾದ ಬೆಲೆ ನಾಟಕದಲ್ಲಿ ಪ್ರಶ್ನಿಸಲಾಗಿದೆ.